ಪುತ್ತಿಗೆ ದೇವಾಲಯದ ಪಂಚ ಧೂಮಾವತಿ ದೈವದ ಪ್ರತಿಷ್ಠಾ ಮಹೋತ್ಸವ
ರಾಯಿ ರಾಜಕುಮಾರ ಮೂಡುಬಿದಿರೆ


ಮೂಡುಬಿದಿರೆ : ಪುತ್ತಿಗೆ ದೇವಾಲಯದ ಪೂರ್ವಕ್ಕೆ ಬಾಕಿಮಾರು ಗದ್ದೆ ದಾಟಿದ ಕೂಡಲೇ ಕಣ್ಣಳತೆಯಲ್ಲಿರುವ ದೇವಾಲಯದ ಪ್ರಧಾನ ದೈವ ಪಂಚ ಧೂಮಾವತಿ ಕ್ಷೇತ್ರದಲ್ಲಿ ಇಂದು ಪ್ರತಿಷ್ಠಾ ಮಹೋತ್ಸವ ನಡೆಯಿತು.
ಕರಿಯಮಲ್ಲಾಯ ದೈವದ ಮಗ್ಗುಲಲ್ಲಿ ಕ್ಷೇತ್ರಪಾಲ, ನಾಗ ಸಾನ್ನಿಧ್ಯ ಹಾಗೂ ಇತರ ದೈವಗಳ ಮೂಲಸ್ಥಾನಗಳನ್ನು ಅಭಿವೃದ್ಧಿ ಪಡಿಸಿ ಪ್ರತಿಷ್ಠಾ ಕಾರ್ಯ ನಡೆದಿದೆ.































