ಪುತ್ತಿಗೆ ಗ್ರಾಮ ಸಭೆ: ಹುಸಿ ಭರವಸೆಯಿಂದ ತಾರಕಕ್ಕೇರಿದ ಅಳಲು

Picture of RB NEWS

RB NEWS

Bureau Report

ಮೂಡುಬಿದಿರೆ : ಪುತ್ತಿಗೆ ಗ್ರಾಮದ ಗ್ರಾಮ ಸಭೆ ಮಾರ್ಚ್ 24ರಂದು ನಡೆಯಿತು. ಹಂಡೇಲು ಪ್ರದೇಶದಲ್ಲಿ ಸ್ಥಳವನ್ನು ಲೆವೆಲ್ ಮಾಡುವ ಸಂದರ್ಭ ಎರಡು ಮನೆಗಳವರಿಗೆ ತೊಂದರೆ ಆಗುತ್ತಿರುವ ಬಗ್ಗೆ ಸ್ಥಳೀಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಪುತ್ತಿಗೆ ಪ್ರದೇಶದಲ್ಲಿ ನಡೆಯುತ್ತಿರುವ ಅನಧಿಕೃತ ಕಲ್ಲು ಕೋರೆಯನ್ನು ನಿಲ್ಲಿಸಬೇಕೆಂದು ಗ್ರಾಮಸ್ಥರುಗಳು ಒಕ್ಕೊರಲಿನಿಂದ ಆಗ್ರಹಿಸಿದರು.

ಪಂಚಾಯತ್ ನ ನಿರ್ಣಯ ಇಲ್ಲದೆ ಹಲವು ಪ್ರದೇಶಗಳನ್ನು ಮೂಡಾ ಕ್ಕೆ ಸೇರಿಸಿದ್ದಕ್ಕೆ ಆಕ್ಷೇಪ, ಕಾರಣ ಹಲವಾರು ತೊಂದರೆಗಳನ್ನು ಗ್ರಾಮಸ್ಥರು ಅನುಭವಿಸುತ್ತಿದ್ದಾರೆ. ಆದುದರಿಂದ ಅವುಗಳಿಗೆ ಪರಿಹಾರವನ್ನು ಕಂಡುಕೊಳ್ಳಲು ಅನುಕೂಲವಾಗುವಂತೆ ಸರಕಾರಕ್ಕೆ ಆಕ್ಷೇಪಣೆಯನ್ನು ಸಲ್ಲಿಸಿ ಯೋಗ್ಯ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ, ಸರಕಾರದ ಕ್ರಮವನ್ನು ಖಂಡಿಸಲಾಯಿತು.

ಸಂಪಿಗೆಯಲ್ಲಿ ಹೈಟೆನ್ಶನ್ ವಿದ್ಯುತ್ ಮಾರ್ಗ ಹಾಕಲ್ಪಡುವುದರಿಂದ ರಕ್ಷಣೆಗಾಗಿ ಸ್ಥಳೀಯರು ಆಗ್ರಹಿಸಿದರು. ಸಿಸಿಟಿವಿ ಯ ಅಡಿಯಲ್ಲಿಯೇ ಕಸ ಹಾಕಿದರು ಕ್ರಮ ಕೈಗೊಳ್ಳದ ಬಗ್ಗೆ ಪ್ರಶ್ನೆ ಎತ್ತಿದಾಗ ಪೊಲೀಸ್ ಹಾಗೂ ಪಂಚಾಯತ್ ಜಂಟಿಯಾಗಿ ಕಾರ್ಯಾಚರಣೆ ಮಾಡಿ ದಂಡ ಹಾಗೂ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿದರು. ಆದರೆ ಸಿಸಿಟಿವಿಯ ಸಂಪರ್ಕವೇ ಇಲ್ಲದಿರುವ ಬಗ್ಗೆ ಗ್ರಾಮಸ್ಥರು ಗಮನ ಸೆಳೆದರು.

ಚರ್ಚೆಯಲ್ಲಿ ರಾಜೇಶ್, ರೋಷನ್, ವಾಸುದೇವ ನಾಯಕ್, ಶಶಿಧರ್ ನಾಯಕ್, ನಾಗವರ್ಮ ಹಾಗೂ ಇತರರು ಭಾಗವಹಿಸಿದ್ದರು. ಪಂಚಾಯತ್ ಅಧ್ಯಕ್ಷೆ ರಾಧಾ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಅರಣ್ಯ ಇಲಾಖೆಯ ಗುರುಮೂರ್ತಿ, ಮೆಸ್ಕಾಂ ನ ಪ್ರವೀಣ್, ಪಾಲಡ್ಕ ದ ವೈದ್ಯರು, ಕಂದಾಯ ಇಲಾಖೆಯ ಗಾಯತ್ರಿ ಹಾಗೂ ಇತರರು ಹಾಜರಿದ್ದರು.

ವರದಿ ರಾಯಿ ರಾಜಕುಮಾರ ಮೂಡುಬಿದಿರೆ

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top