ಪುತ್ತಿಗೆಯ ಸೋಮನಾಥ ದೇಗುಲ : ಬ್ರಹ್ಮಕಲಶೋತ್ಸವದ ಲಾಂಛನ ಬಿಡುಗಡೆ

Picture of RB NEWS

RB NEWS

Bureau Report

ಮೂಡುಬಿದಿರೆ: ಇಲ್ಲಿಗೆ ಸಮೀಪದ ಪುತ್ತಿಗೆ ಶ್ರೀ ಸೋಮನಾಥೇಶ್ವರ ದೇವಾಲಯದ ಬ್ರಹ್ಮಕಲಶೋತ್ಸವ ಸಂಭ್ರಮದ ಸಂಬಂಧ ಲಾಂಛನವನ್ನು ದೇವರ ಸನ್ನಿಧಿಯಲ್ಲಿ ಬಿಡುಗಡೆಗೊಳಿಸಲಾಯಿತು.

ಲಾಂಛನವನ್ನು ದೇವಾಲಯದ ಹಿರಿಯ ಕರಸೇವಕರಾದ ಗಂಗಯ್ಯ ಗೌಡ ಪಾದೆ, ವಿಠಲ ಗೌಡ ಶಕ್ತಿಪುರ ಅವರ ಬಿಡುಗಡೆಗೊಳಿಸಿದರು.

ಇದೇ ಸಂದರ್ಭದಲ್ಲಿ ದೇವಾಲಯದ ಅಡಿಗಳ ಅನಂತ ಕೃಷ್ಣ ಭಟ್, ಶ್ರೀಪತಿ ಭಟ್, ಜಯಶ್ರೀ ಅಮರನಾಥ ಶೆಟ್ಟಿ, ವಿದ್ಯಾ ರಮೇಶ್ ಭಟ್, ಶಿವಪ್ರಸಾದ್ ಆಚಾರ್, ಅಭಯಚಂದ್ರ ಜೈನ್ ಹಾಗೂ ಅನುವಂಶಿಕ ಆಡಳಿತ ಮೊಕ್ತೇಸರ ಚೌಟರ ಅರಮನೆಯ ಕುಲದೀಪ್ ಎಂ , ದೇವಾಲಯದ ಅರ್ಚಕರು , ಪುರೋಹಿತರು ಮತ್ತು ಇತರರು ಹಾಜರಿದ್ದರು.

ಸಂದೀಪ್ ಎಂ ಕಾರ್ಯಕ್ರಮವನ್ನು ನಿರ್ವಹಿಸಿದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top