


ಪುತ್ತಿಗೆಯ ನಾಗು ನದಿಗೆ ಅಡ್ಡಲಾಗಿ ನೂತನ ಸೇತುವೆ ನಿರ್ಮಾಣ
ವರದಿ: ರಾಯಿ ರಾಜಕುಮಾರ ಮೂಡುಬಿದಿರೆ
ಮೂಡುಬಿದಿರೆ: ಪುತ್ತಿಗೆ ಸೋಮನಾಥೇಶ್ವರ ದೇಗುಲದ ಮುಂಭಾಗ ಹರಿಯುತ್ತಿರುವ ನಾಗು ನದಿಗೆ ಅಡ್ಡಲಾಗಿ ನೂತನವಾಗಿ ಸಾಕಷ್ಟು ಅಗಲದ ಸೇತುವೆ ನಿರ್ಮಾಣದ ಕಾಮಗಾರಿ ಚಾಲನೆ ದೊರೆತ್ತಿದೆ.


ಶಾಸಕ ಉಮಾನಾಥ ಕೋಟ್ಯಾನ್ ಮತ್ತು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಅವರ ಮುತುವರ್ಜಿಯಿಂದ ಇದೀಗ ಬ್ರಹ್ಮಕಲಶೋತ್ಸವದ ಸಂದರ್ಭಕ್ಕೆ ಮೊದಲೇ ನೂತನ ಸೇತುವೆ ರಚನೆಯ ಕಾಮಗಾರಿ ಪ್ರಾರಂಭಗೊಂಡಿದೆ.
ಶಾಸಕರ ಒತ್ತಾಸೆಯ ಮೇರೆಗೆ ಮುಗ್ರೋಡಿ ನಿರ್ಮಾತ್ರಗಳ ಆಸಕ್ತಿಯಿಂದ ಈ ಕೆಲಸ ಪ್ರಾರಂಭವಾಗಿದ್ದು ಭಕ್ತರ ಸುಗಮ ಸಂಚಾರಕ್ಕೆ ಅವಕಾಶ ದೊರೆಯಲಿದೆ ಎಂದು ತಿಳಿದುಬಂದಿರುತ್ತದೆ.
,































