ಕಾರ್ಕಳ : ಈಚರ್ ಲಾರಿ ಮತ್ತು ಬೈಕ್ ನಡುವೆ ಅಪಘಾತ, ಮೂವರು ಮಕ್ಕಳು ಸೇರಿ ನಾಲ್ವರು ಸಾವು, ಮಹಿಳೆ ಗಂಭೀರ
ಕಾರ್ಕಳ : ಈಚರ್ ವಾಹನ ಮತ್ತು ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ನಾಲ್ವರು ಮೃತಪಟ್ಟು ಮಹಿಳೆ ತೀವ್ರ ತರದಲ್ಲಿ ಗಾಯಗೊಂಡ ಘಟನೆ ಕಾರ್ಕಳದ ಪಾಜಿಗುಡ್ಡೆ ಎಂಬಲ್ಲಿ ನಡೆದಿದೆ.
ಘಟನೆಯಲ್ಲಿ ನಲ್ಲೂರು ಕೊಡಪಟ್ಯ ಸುರೇಶ್ ಆಚಾರ್ಯ ( 36) ಸುಮಿಕ್ಷಾ ಮಗಳು (7) ಸುಶ್ಮಿತಾ (5) ಶುಶಾಂತ್ (2) ಮೃತಪಟ್ಟಿದ್ದು, ಮೀನಾಕ್ಷಿ ಹೆಂಡತಿ (32) ಗಂಭೀರ ಸ್ಥಿತಿಯಲ್ಲಿ ಗಾಯಗೊಂಡಿದ್ದು, ಜೀವನ್ಮರಣ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.




ಘಟನೆಯಲ್ಲಿ ಬೈಕ್ ನಲ್ಲಿ ಸಂಚರಿಸುತ್ತಿದ್ದ ಇಬ್ಬರು ಮಕ್ಕಳು ಮತ್ತು ಓರ್ವ ಗಂಡಸು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಆಸ್ಪತ್ರೆಗೆ ಸಾಗಿಸುತ್ತಿದ್ದಂತೆ ಮಗು ಮೃತ ಪಟ್ಟಿದೆ ಮಹಿಳೆ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ.,
ಬೈಕ್ ನಲ್ಲಿ ಐದು ಮಂದಿ ಪ್ರಯಾಣಿಸುತ್ತಿದ್ದರು.
ಈಚರ್ ಗಾಡಿಯ ಹಿಂಬದಿಯಲ್ಲಿ ಮೆದುಳಿನ ಮುದ್ದೆ !


ಈಚರ್ ನ ಚಾಲಕ
ಹೊಸ್ಮಾರುನಿಂದ ಕಾರ್ಕಳಕ್ಕೆ ಬರುತ್ತಿದ್ದ ಬೈಕ್ ಪಾಜಿಗುಡ್ಡೆಯ ಕೋಟಿ ಚೆನ್ನಯ್ಯ ತೀರ್ಥಬಾವಿ ಸಮೀಪಿಸುತ್ತಿದ್ದಂತೆ ಅದೇ ರಸ್ತೆಯಲ್ಲಿ ಮುಂದೆ ಹೋಗುತ್ತಿದ್ದ ಕಾರನ್ನು ಓವರ್ ಟೇಕ್ ಮಾಡುವ ಭದಲ್ಲಿ ಎದುರುಗಡೆಯಿಂದ ಬರುತ್ತಿದ್ದ ಈಚರ್ ಗಾಡಿಗೆ ಡಿಕ್ಕಿ ಹೊಡೆದಿತ್ತು.

ಈಚರ್ ಗಾಡಿಯ ಹಿಂಬದಿಗೆ ಬೈಕ್ ಡಿಕ್ಕಿ ಹೊಡೆದಿದ್ದು, ಬೈಕ್ ನಲ್ಲಿದ್ದ ಮಗುವಿನ ಮೆದುಳು ಛಿದ್ರಗೊಂಡು ಅದರ ಮುದ್ದೆ ಈಚರ್ ಗಾಡಿಗೆ ಮೆತ್ತಿಕೊಂಡಿದೆ. ಘಟನೆ ಸಂಭವಿಸಿದ ಪರಿಸರದಲ್ಲಿ ಮೆದುಳು ಛಿದ್ರ ಛಿದ್ರವಾಗಿ ಚೆಲ್ಲಾಪಿಲ್ಲಿಯಾಗಿ ಬಿದ್ದುಕೊಂಡಿರುವ ದೃಶ್ಯಾವಳಿ ಮನಕಲುಕುವಂತಿತ್ತು.






































