ಪಾಕಿನಲ್ಲಿ ಅನಾಮಿಕರಿಂದ ಉಗ್ರ ಬೇಟೆ:
ಉಗ್ರ ಆಮೀರ್ ಹಮ್ಮಾನಿಗೆ ಗುಂಡೇಟು
ನವದೆಹಲಿ : ಭಯೋತ್ಪಾದಕರನ್ನು ಪೋಷಿಸುತ್ತಾ ಬಂದಿರುವ ಪಾಕಿಸ್ತಾನದಲ್ಲಿ ಅನಾಮಿಕ ವ್ಯಕ್ತಿಗಳು ಉಗ್ರರನ್ನು ಸರಣಿಯಾಗಿ ಹತ್ಯೆ ನಡೆಸುತ್ತಾ ಬಂದಿದ್ದಾರೆ. ಅದರ ಮುಂದುವರಿದ ಭಾಗವಾಗಿ ಲಷ್ಕರ್ ಎ ತೊಯ್ದಾ ಉಗ್ರ ಸಂಘಟನೆಯ ಸಹ ಸಂಸ್ಥಾಪಕ ಉಗ್ರ ಆಮೀರ್ ಹಮ್ಮಾನ ಹತ್ಯೆಗೆ ವಿಫಲ ಯತ್ನ ನಡೆಸಿದ್ದಾರೆ. ಗುಂಡೇಟಿನಿಂದ ತೀವ್ರ ತರದಲ್ಲಿ ಗಾಯಗೊಂಡ ಆತ ಪಾಕಿಸ್ತಾನದ ಲಾಹೋರಿನ ಖಾಸಗಿ ಆಸ್ಪತ್ರೆಯಲ್ಲಿ ಜೀವನ್ಮರಣ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಉಗ್ರ ಬೇಟೆ
ಕೆಲ ದಿನಗಳ ಹಿಂದೆ ಬೆಂಗಳೂರು ದಾಳಿ ಸಂಚುಕೋರ ಅಬು ಸೈಫುಲ್ಲಾ ಅನಾಮಿಕರ ಗುಂಡಿಗೆ ಬಲಿಯಾದ ಬೆನ್ನಲ್ಲೇ ಮತ್ತೋರ್ವ ಉಗ್ರ ಅನಾಮಿಕರ ಗುಂಡಿನ ದಾಳಿಗೆ ಗಂಭೀರವಾಗಿ ಗಾಯಗೊಂಡಿದ್ದಾನೆ. ಲಷ್ಕರ್ ಎ ತೊಯ್ದಾ ಉಗ್ರ ಸಂಘಟನೆಯ ಸಹ ಸಂಸ್ಥಾಪಕ ಉಗ್ರ ಆಮೀರ್ ಹಮ್ಮಾ ಅನಾಮಿಕರ ಗುಂಡಿನ ದಾಳಿಯಿಂದ ಗಂಭೀರಗೊಂಡಿದ್ದಾನೆ ಎಂದು ಮೂಲಗಳು ತಿಳಿಸಿವೆ.




























