ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಕಾಂ.ಬುದ್ದ ದೇವ್ ಭಟ್ಟಾಚಾರ್ಯರವರ ಅಕಾಲಿಕ ನಿಧನದಿಂದ ತಾತ್ಕಾಲಿಕವಾಗಿ ಮೊಟಕುಗೊಂಡ ಸಿಐಟಿಯು ಜನರಲ್ ಕೌನ್ಸಿಲ್ ಸಭೆ ಪುನರಾರಂಭ

ಕೊಲ್ಕತ್ತಾ: ಮೂರು ದಿನಗಳ ಕಾಲ ಕೊಲ್ಕತ್ತಾದಲ್ಲಿ ಸಿಐಟಿಯು ಜನರಲ್ ಕೌನ್ಸಿಲ್ ಸಭೆಯ ಉದ್ಘಾಟನೆಯನ್ನು ಸಿಐಟಿಯು ರಾಷ್ಟ್ರಾಧ್ಯಕ್ಷರಾದ ಕಾಂ.ಕೆ.ಹೇಮಲತಾ ಧ್ವಜಾರೋಹಣಗೈಯುವ ಮೂಲಕ ಚಾಲನೆ ನೀಡಿದರು.
ದುಡಿಯುವ ವರ್ಗದ ಕಣ್ಮಣಿ,ಹಿರಿಯ ಕಮ್ಯುನಿಸ್ಟ್ ನೇತಾರ,ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಕಾಂ.ಬುದ್ದ ದೇವ್ ಭಟ್ಟಾಚಾರ್ಯರವರು ನಿಧನ ಹೊಂದಿರುವ ಹಿನ್ನೆಲೆಯಲ್ಲಿ ಅದೇ ಘಳಿಗೆಯಲ್ಲಿ ಧ್ವಜವನ್ನು ಅರ್ಧಕ್ಕೆ ಇಳಿಸುವ ಮೂಲಕ ಹಿರಿಯ ಚೇತನಕ್ಕೆ ಗೌರವ ಸಲ್ಲಿಸಲಾಯಿತು.



ಕೊಲ್ಕತ್ತಾ ನಗರದಲ್ಲಿರುವ ಸಿಪಿಐಎಂ ಪಶ್ಚಿಮ ಬಂಗಾಳ ರಾಜ್ಯ ಸಮಿತಿ ಕಚೇರಿಯಾದ ಕಾಂ.ಮುಝಾಫರ್ ಅಹಮ್ಮದ್ ಭವನದಲ್ಲಿರಿಸಿದ ಕಾಂ ಬುದ್ದದೇವ್ ಭಟ್ಟಾಚಾರ್ಯರವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆಯಲು ಅಪಾರ ಜನಸ್ತೋಮ ನೆರೆದಿತ್ತು.
ಮಧ್ಯಾಹ್ನ 12ಗಂಟೆಗೆ ತಾತ್ಕಾಲಿಕವಾಗಿ ಸಭೆಯನ್ನು ಮೊಟಕುಗೊಳಿಸಿದ ಬಳಿಕ ಕಾಂ. ಬುಧದೇವ್ ಭಟ್ಟಾಚಾರ್ಯರವರ ಅಂತಿಮಕ್ರಿಯೆಯ ನಂತರವಷ್ಟೇ ಸಂಜೆ 4 ಗಂಟೆಗೆ ಸಭೆ ಆರಂಭಗೊಂಡಿತು.
ವರದಿ: ಸುನೀಲ್ ಕುಮಾರ್ ಬಜಾಲ್ ಮಂಗಳೂರು







































