ಬ್ರಾಹ್ಮಣರು ಪೂಜೆ ಮಾಡುವ ಮಾಗಣೆ ,ಗ್ರಾಮ ದೇವಾಲಯಗಳಲ್ಲಿ “ಪವಿತ್ರಪಾಣಿಯ “ ಕರ್ತವ್ಯಗಳು ನಮ್ಮಲ್ಲಿ ಹಲವಾರು ದೇವಾಲಯಗಳು ಮುಜರಾಯಿ ಇಲಾಖೆಯ ಜವಾಬ್ದಾರಿಯಲ್ಲಿ ,ಇನ್ನು ಕೆಲವು ಖಾಸಗಿ ಒಡೆತನದಲ್ಲಿ ಆಡಳಿತ ಮಾಡುತ್ತಾ ಮುಂದುವರಿಯುತ್ತಿವೆ.
”ಗುರುರಾಜ ಭಟ್” ಅವರ ದೇವಾಲಯಗಳ ಸಂಶೋಧನೆ ಪುಸ್ತಕದಲ್ಲಿ ಅವರು ದೇವಾಲಯದಲ್ಲಿ ಒಟ್ಟು ಎಷ್ಟು ಮಂದಿ ಇರಬೇಕು ಎಂಬ ವಿವರವನ್ನು ತಿಳಿಸುತ್ತಾರೆ. ಜೊತೆಗೆ ಅವರ ಕರ್ತವ್ಯವನ್ನು ತಿಳಿಸುತ್ತಾರೆ. ಇಂದಿಗೂ ಮಾರುಕಟ್ಟೆಯಲ್ಲಿ ಸಿಗುವ ಪುಸ್ತಕವಾಗಿದೆ. ಮುಜರಾಯಿ ಇಲಾಖೆಯಲ್ಲಿ 9 ಮಂದಿ ಇರುತ್ತಾರೆ. ಅವರಲ್ಲಿ ಒಬ್ಬರು ಆಡಳಿತ ಮೊಕ್ತೇಸರರು ಇರುತ್ತಾರೆ .
ತಂತ್ರಿಗಳು ,ಅರ್ಚಕರು ,ಪವಿತ್ರಪಾಣಿ +ಆಡಳಿತ ಮಂಡಳಿ ಈ ರೀತಿ ವ್ಯವಸ್ಥೆ ಇರುತ್ತದೆ. ಇನ್ನೂ ಚಾಕರಿ ಮಾಡುವವರ ಒಂದು ವಿವರಣೆ ಪುಸ್ತಕದಲ್ಲಿ ಇದೆ. ಇದು ಅನಾದಿ ಕಾಲದಿಂದ ಮುಂದುವರಿದು ಕೊಂಡು ಬಂದ ಪದ್ಧತಿ. ದೇವಾಲಯಗಳಲ್ಲಿ ಈ ಪುಸ್ತಕದ ಪ್ರತಿ ಒಂದು ಇರಲೇಬೇಕು. ಸದಸ್ಯರು ಎಲ್ಲರೂ ಓದಿಕೊಂಡಿರಬೇಕು. ಇಲ್ಲಿ ಪವಿತ್ರ ಪಾಣಿಯ ಕರ್ತವ್ಯ ಏನು ? ಯಾವುದೇ ಧಾರ್ಮಿಕ ಕೆಲಸಗಳು ಆದಾಗ ಜವಾಬ್ದಾರಿಯಿಂದ ಆ ಕೆಲಸವನ್ನು ಅರ್ಚಕರ ಜೊತೆಗೆ ,ತಂತ್ರಿಗಳ ಜೊತೆಗೆ ಸೇರಿಕೊಂಡು ನಿರ್ವಹಿಸುವುದು .ಆಡಳಿತ ಮೊಕ್ತೇಸರರನ್ನು ಕೂಡಾ ದಂಪತಿ ಸಹಿತ ಮಣಿಯಲ್ಲಿ ಕುಳ್ಳಿರಿಸಿ ಅವರನ್ನೂ ಸೇರಿಸಿಕೊಳ್ಳುವುದು. ಪ್ರಧಾನ ಪ್ರಸಾದ ಅವರಿಗೆ ಕೊಡಿಸುವುದು. ಅರ್ಚಕರಿಗೆ ಶೌಚ –ಅಶೌಚ ಬಂದಾಗ ಪೂಜೆ ನಿಲ್ಲದ ಹಾಗೆ ನೋಡಿಕೊಳ್ಳುವುದು. ”ಪವಿತ್ರ “ ಎಂದರೆ ಜವಾಬ್ದಾರಿ. ಪ್ರತಿನಿತ್ಯ ಒಂದು ಸಾವಿರವಾದರೂ ಗಾಯತ್ರಿ ಮಂತ್ರ ಹೇಳುವವರು ಮಾತ್ರಾ ಈ ಹುದ್ದೆಗೆ ಅರ್ಹರು. ಇದನ್ನು ಯಾವ ಅರ್ಚಕರಾಗಲೀ ತಂತ್ರಿಗಳಾಗಲೀ ತಿಳಿಸಲು ಹೋಗುವುದಿಲ್ಲ. ಮೊಕ್ತೇಸರರಿಗೆ ಇದೊಂದು ದೊಡ್ಡ ಗೌರವದ ಸಂಕೇತ. ಅದನ್ನು ನಾವೇ ಮಾಡಬೇಕು ಎಂಬ ಭಾವನೆ . ಆದರೆ ವಿಷಯ ತಿಳಿದ ಸ್ವಚ್ಛ ಮನಸ್ಸಿನ ತಂತ್ರಿಗಳಲ್ಲಿ ಕೇಳಿ ವಿಷಯ ತಿಳಿದುಕೊಳ್ಳಬೇಕು.
ಮಧು ಮಾಂಸ ಸ್ವೀಕಾರ ಮಾಡುವವರು ,ನಿತ್ಯ ರುದ್ರ ಪಾರಾಯಣ, ಸಪ್ತಶತೀ ಪಾರಾಯಣ ಗಾಯತ್ರಿ ಅಷ್ಟಾಕ್ಷರಿ ,ಪಂಚಾಕ್ಷರಿ ಒಂದು ಸಾವಿರದಂತೆ ಮಾಡದವರು ಈ “ಪವಿತ್ರ ದ ಹಿಂದೆ ಇರುವ ಹೊರೆಯನ್ನು ಹೊತ್ತುಕೊಳ್ಳುವುದು ಕಷ್ಟವಾದೀತು . ಈ ವಿಷಯವನ್ನು ಯಾರೂ ಹೇಳಲು ಹೋಗುವುದಿಲ್ಲ.
ಅಷ್ಟಮಂಗಲ ಪ್ರಶ್ನೆ ಇಡುವಾಗ ದ್ವಾದಶ ಭಾವಗಳಲ್ಲಿ ಈ ವಿಷಯ ಬರುತ್ತದೆ . 9 ನೇ ಭಾವ ಆಡಳಿತ ಮೊಕ್ತೇಸರ ನಾದರೆ 12 ನೇ ಭಾವದಲ್ಲಿ ತಂತ್ರಿಗಳು, ಪವಿತ್ರಪಾಣಿ ಬರುತ್ತಾರೆ.
ಹೇಳಬೇಕಾದವರು ಹೇಳಿದರೆ ಗೊತ್ತಿಲ್ಲದವರಿಗೆ ಗೊತ್ತಾಗುತ್ತದೆ. ಯಾವುದೇ ದೇವಾಲಯದ ಚರಿತ್ರೆಯನ್ನು ಅಷ್ಟಮಂಗಲ ಪ್ರಶ್ನೆಯ ಮೂಲಕ ನೋಡಿದಾಗ ಈ ವಿಷಯಗಳು ಗೊತ್ತಾಗುತ್ತದೆ . ತಂತ್ರಿಗಳಾಗಲಿ ಅರ್ಚಕರಾಗಲಿ ಪೂಜೆಯ ಕೊನೆಯಲ್ಲಿ ಉತ್ಸವದ ಕೊನೆಯಲ್ಲಿ ದೇವರಲ್ಲಿ ಪ್ರಾಯಶ್ಚಿತ್ಯ ಮಾಡಿಕೊಳ್ಳುತ್ತಾರೆ.
ಆಡಳಿತ ಮಂಡಳಿ ಎಂದರೆ ಅದೊಂದು ಗೌರವದ ಪ್ರಶ್ನೆ ಅಲ್ಲವೇ ಅಲ್ಲ. ಜವಾಬ್ದಾರಿಯ ಪ್ರಶ್ನೆ .ಜನ್ಮ ಜನ್ಮಾಂತರಗಳಲ್ಲಿ ದೋಷ /ಪುಣ್ಯ ಅನುಸರಿಸಿಕೊಂಡು ಬರುತ್ತದೆ .ನಿಮ್ಮ ಮನೆಯ, ವೈಯಕ್ತಿಕ ಪೂಜೆಗಳನ್ನು ಮಾಡಿಸುವಾಗ ಮಾತ್ರಾ ನೀವೇ ಪವಿತ್ರ ಹಾಕಿಕೊಳ್ಳಬೇಕು ತಂತ್ರಿಗಳಾಗಲೀ /ಅರ್ಚಕರಾಗಲೀ /ಹಿಂಬಾಲಕರು ನಿಮ್ಮನ್ನು ಮೇಲೆ ಇಟ್ಟಾಗ ಏನಾದರೂ ಸಾಧಿಸಬಹುದು ಎಂಬ ಸಣ್ಣತನದಿಂದ ಹೇಳ ಬೇಕಾದ ಸತ್ಯವನ್ನು ಹೇಳದೇ ನಿಮ್ಮನ್ನು ಶಾಶ್ವತವಾಗಿ ದೋಷದ ಕೂಪಕ್ಕೆ ತಳ್ಳುತ್ತಾರೆ.
ದೇವಾಲಯಗಳಲ್ಲಿ , ದೈವಾಲಯಗಳಲ್ಲಿ ಮುಗುಳಿ /ಕಲಶ ಇಡುವುದು ಇದು ಒಂದು ಗೌರವದ ಸಂಕೇತವಲ್ಲ ,ಅರಿಮುರಿಯ ಪ್ರಶ್ನೆ .ಎಲ್ಲರಿಗೂ ಗೊತ್ತಿರಬೇಕು . ಪ್ರಾಯದವರಲ್ಲಿ ಇದನ್ನು ಹೇಳಿ ಇಡಿಸಲಾಗುವುದು .ಇಡೀ ದೇವಸ್ಥಾನ /ದೈವಸ್ಥಾನದ ಜವಾಬ್ದಾರಿ ಅದರಲ್ಲಿ ಇದೆ .ಪವಿತ್ರ ಪಾಣಿಯ ಜವಾಬ್ಧಾರಿಯೂ ಹಾಗೆಯೇ ಇದೆ .ನಮ್ಮ ಆತ್ಮನಿಗೆ ಮುಕ್ತಿ ಸಿಗದೇ ಶಾಶ್ವತವಾಗಿ ದೈವದ ಜೊತೆಗೆ /ದೇವರ ಜೊತೆಗೆ ಇರುತ್ತದೆ .ಇಡೀ ಆಡಳಿತ ಮಂಡಳಿ… ಅರ್ಚಕರಿಗೆ ,ತಂತ್ರಿಗಳಿಗೆ ಪವಿತ್ರ ಪಾಣಿಗೆ ಬೇಸರ ಪಡಿಸಲು ಹೋಗಲೇ ಬಾರದು. ಅವರು ದೇವರ ಪಾದಕ್ಕೆ ಅರ್ಪಿಸಿ ಹೋಗುತ್ತಿರುತ್ತಾರೆ .ವ್ಯವಹಾರವೇ ಬೇರೆ ,ದೈವ ದೇವರ ವಿಷಯವೇ ಬೇರೆ .ಇಬ್ಬರು ಸೇರಿಕೊಂಡು ಮತ್ತೊಬ್ಬರಿಗೆ ಬೈದು ದೇವಸ್ಟಾನಕ್ಕೆ ಬರದಂತೆ ಮಾಡುತ್ತಾರೆ. ಇದರ ಪರಿಣಾಮ ಏನಾಗಬಹುದು . ಬರದವರು ಎಲ್ಲೆಲ್ಲಿಯೂ ಇರುವ ಸರ್ವಶಕ್ತ ಪರಮಾತ್ಮನಿಗೆ ಕಣ್ಣೀರಿನ ಅಭಿಷೇಕ ,ತುಪ್ಪದ ದೀಪ ,ರುದ್ರ ಪಾರಾಯಣ ,ಸಪ್ತಶತಿ ಪಾರಾಯಣ ಮಾಡುತ್ತಿರುತ್ತಾರೆ .ಪರಿಣಾಮ ಕಾಲ ಬಂದಾಗ ಗೊತ್ತಾಗುತ್ತದೆ . ಪುಸ್ತಕ ಬೇಕಾದವರು ಮಂಗಳೂರಿನಲ್ಲಿ ಸಾಹಿತ್ಯ ಭಂಡಾರ ,ಹಂಪನಕಟ್ಟೆ ಇಲ್ಲಿಂದ ಪಡೆಯಬಹುದು.