ಪರಿಸರದ ಸಂರಕ್ಷಣೆಯಲ್ಲಿ ನಮ್ಮ ಪಾತ್ರ
ಬಂಟ್ವಾಳ : ದ.ಕ.ಜಿಲ್ಲಾ ಕೊಯಿಲ ಸರಕಾರಿ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಿಗೆ ಗ್ರಾಮೀಣ ಪರಿಸರದ ಸಂರಕ್ಷಣೆಯಲ್ಲಿ ನಮ್ಮ ಪಾತ್ರ ಇದರ ಕುರಿತು ಜಾಗೃತಿ ಮೂಡಿಸಲಾಯಿತು.
ಬೆಂಗಳೂರು ಸೂರ್ಯ ಫೌಂಡೇಶನ್ ನ ಜಿಲ್ಲಾ ಸಂಯೋಜಕ, ಸ್ಪಾರ್ಕ್ ಅಕಾಡೆಮಿಯ ತರಬೇತುದಾರ ರಾಜ್ಯ ಸಂಪನ್ಮೂಲ ವ್ಯಕ್ತಿ ರಾಯಿ ರಾಜಕುಮಾರ ಮೂಡುಬಿದಿರೆ ಯವರು ಆಗಮಿಸಿ ಗ್ರಾಮೀಣ ಕೃಪಾಂಕ, ಗ್ರಾಮೀಣ ಶಿಕ್ಷಣದ ಲಾಭಗಳನ್ನು ತಿಳಿಸಿದರು.
ಗ್ರಾಮೀಣ ಪರಿಸರದ ರಕ್ಷಣೆಯನ್ನು ಮಾಡುವ, ತೆಳು ಪ್ಲಾಸ್ಟಿಕ್ ನನ್ನು ಉಪಯೋಗಿಸದೇ ಬದುಕಿನಲ್ಲಿ ಸಾರ್ಥಕತೆ ಪಡೆಯುವುದು ಮುಖ್ಯ ಎಂದು ತಿಳಿಸಿದರು.
ಶಾಲಾ ಮುಖ್ಯ ಶಿಕ್ಷಕಿ ಭಾರತಿ ಸ್ವಾಗತಿಸಿದರು. ಶಿಕ್ಷಕಿ ಲಕ್ಷ್ಮಿ ವಂದಿಸಿದರು.































