ಪರಿಶಿಷ್ಟ ಜಾತಿಯಲ್ಲಿ ಅಸ್ಮಿತೆಯ ಬಗ್ಗೆ ವಿಚಾರ ಸಂಕಿರಣ

Picture of RB NEWS

RB NEWS

Bureau Report

ಮೂಡುಬಿದಿರೆ ಸ್ಥಳೀಯ ತುಳುನಾಡು ಮನ್ಸ ಸಮಾಜ ಸೇವಾ ಸಂಘದ ಪದಾಧಿಕಾರಿಗಳು ಕರ್ನಾಟಕ ಸರ್ಕಾರದ ಒಳ ಮೀಸಲಾತಿ ಜಾರಿಯನ್ನು ಸ್ವಾಗತಿಸಿದ್ದಾರೆ.

ಪ್ರತಿ ಜನಾಂಗದ ಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಜಾರಿಯಾಗಬೇಕು. ಆದರೆ ಜಾತಿ ಪಟ್ಟಿಯಲ್ಲಿ ಮನ್ಸ ಎನ್ನುವ ಹೆಸರು ಎಲ್ಲೂ ಪ್ರಕಟವಾಗದ ಕಾರಣ ಆ ಜನಾಂಗದವರು ಆದಿ ದ್ರಾವಿಡ, ಆದಿ ಕರ್ನಾಟಕ, ವಲಯ, ಹಸಳರು ಎಂಬಿ ತ್ಯಾದಿ ವಿವಿಧ ಹೆಸರಿನಲ್ಲಿ ದೃಢೀಕರಣವನ್ನು ಕಂದಾಯ ಇಲಾಖೆಯಿಂದ ಪಡೆಯುತ್ತಿದ್ದಾರೆ.

ಮನ್ಸ ಎನ್ನುವ ಜಾತಿ ಪರಿಶಿಷ್ಟ ಜಾತಿಯಲ್ಲಿ ಬಹು ಸಂಖ್ಯಾತರಾಗಿರುವವರು. ಆದುದರಿಂದ ಅವರೆಲ್ಲರೂ ಒಟ್ಟು ಸೇರಿ ನವೆಂಬರ್ 17ರಂದು ಮೂಡುಬಿದಿರೆ ಕನ್ನಡ ಭವನದಲ್ಲಿ ವಿಚಾರ ಸಂಕಿರಣ ಒಂದನ್ನು ಏರ್ಪಡಿಸಿ ಗೊಂದಲಗಳಿಗೆ ಇತಿಶ್ರೀ ಹಾಡುವ ಪ್ರಯತ್ನವನ್ನು ಮಾಡುತ್ತಿದ್ದಾರೆ ಎಂದು ತುಳುನಾಡು ಮನ್ಸ ಸಮಾಜ ಸೇವಾ ಸಂಘದ ಗೌರವಾಧ್ಯಕ್ಷ ಎಂ ಶಾಂತರಾಮ್, ಅಧ್ಯಕ್ಷ ವೆಂಕಣ್ಣ ಕೊಯ್ಯುರು, ಗೌರವ ಸಲಹೆಗಾರ ಅಚ್ಯುತ ಸಂಪಿಗೆ, ಸಂಘಟನಾ ಕಾರ್ಯದರ್ಶಿ ಎಂ ರಮೇಶ್ ಬೋದಿ, ಪ್ರಧಾನ ಕಾರ್ಯದರ್ಶಿ ಉದಯ ಗೋಳಿ ಅಂಗಡಿ, ಉಪಾಧ್ಯಕ್ಷ ಹರಿಯಪ್ಪ ಮುತ್ತೂರು ನವೆಂಬರ್ 13ರಂದು ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟಪಡಿಸಿದ್ದರು. ಈ ಸಂದರ್ಭದಲ್ಲಿ ಬಹುಜನ ಸಮಾಜ ಪಕ್ಷದ ಗೋಪಾಲ ಮುತ್ತೂರು ಕೂಡ ಹಾಜರಿದ್ದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top