



ಪರಶುರಾಮ ಥೀಂ ಪಾಕ್೯ನಲ್ಲಿ ಕಳವು :
ದರೋಡೆ ಪ್ರಕರಣ ಆರೋಪಿಯಿಂದ ದೂರು ಸಲ್ಲಿಕೆ!
ಕಾರ್ಕಳ : ಪರಶುರಾಮ ಪ್ರತಿಮೆಯ ಶುದ್ಧತೆ ಪರಿಶೀಲನೆ ಮತ್ತು ಥೀಮ್ ಪಾರ್ಕ್ ಆವರಣದಲ್ಲಿ ಸಿಸಿಟಿವಿ ಅಳವಡಿಸುವಂತೆ ಇಲಾಖೆಗಳಿಗೆ ಒತ್ತಾಯಿಸಿ ನಾವು 14 ಜನರು ಉಪವಾಸ ಪ್ರತಿಭಟನೆ ನಡೆಸಿದಾಗ ನಮ್ಮ ಶಾಸಕ ವಿ. ಸುನೀಲ್ ಕುಮಾರ್ ಅದರ ಬಗ್ಗೆ ಒಂದು ಮಾತನ್ನೂ ಮಾತನಾಡಲಿಲ್ಲ. ಪರಶುರಾಮ ಪ್ರತಿಮೆಯ ಅರ್ಧ ಭಾಗ ಕಳುವಾಗುವವರೆಗೂ ಅವರು ಅದರ ಬಗ್ಗೆ ಮಾತನಾಡಲಿಲ್ಲ. ಆದರೆ ಮೊನ್ನೆ ಕಾರ್ಕಳದ ಶಾಸಕರ ಫೇಸ್ಬುಕ್ ಪೋಸ್ಟ್ನಿಂದಾಗಿ ಎಫ್ಐಆರ್ ದಾಖಲಾಗುವ ಮೊದಲೇ ದರೋಡೆ ನಡೆದ ಘಟನೆ ಅವರಿಗೆ ತಿಳಿದುಬಂದಿದೆ ಎಂದು ಕಾರ್ಕಳ ಸಮಾನ ಮನಸ್ಕರ ತಂಡದ ಪ್ರಮುಖರಾದ ದಿವ್ಯಾ ನಾಯಕ್ ಆರೋಪಿಸಿದ್ದಾರೆ.



























