ರಾಯಚೂರು : ಭಾರತಿಯ ಕಲೆ ಸಾಹಿತ್ಯ ಸಾಂಸ್ಕೃತಿಕ ಸಂಘಟನಾ ಸಂಸ್ಥೆ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಕಾರ್ಕಳದ ಡಾ. ಮಾಲತಿ ಪೈ ಅವರು ಪದ್ಮಶ್ರೀ ತುಳಸಿಗೌಡ ವೃಕ್ಷಮಾತೆ ರಾಜ್ಯಮಟ್ಟದ ಮಹಿಳಾ ಸಾಧಕಿ ಪ್ರಶಸ್ತಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕಲಾ ಸಂಕುಲ ಸಂಸ್ಥೆ (ರಿ) ರಾಯಚೂರು ಇವರ ವತಿಯಿಂದ ರಾಯಚೂರು ನಗರದ ರಂಗ ಮಂದಿರ ದಲ್ಲಿ ನಡೆಯಲಿರುವ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಯೋಗ ಮತ್ತು ಶಿಕ್ಷಣ ಸೇವೆ ಕ್ಷೇತ್ರದಲ್ಲಿ ಅನುಪಮ ಸೇವೆ ಸಲ್ಲಿಸಿದಕ್ಕಾಗಿ ರಾಜ್ಯಮಟ್ಟದ ಮಹಿಳಾ ಸಾಧಕಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿತ್ತು.
ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಪಂಡಿತ ಸಿದ್ದರಾಮಯ್ಯ ಕಾರ್ಯಕ್ರಮದ ಉದ್ಘಾಟಿಸಿದರು. ಎನ್ ಎಸ್ ಬೋಸುರಾಜ್ ಸಣ್ಣ ನೀರಾವರಿ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು ಪ್ರಶಸ್ತಿ ಪ್ರಧಾನವನ್ನು ರಾಜ ಅಮರೇಶ್ವರ ನಾಯಕ್ ಲೋಕಸಭಾ ಸದಸ್ಯರು ರಾಯಚೂರು, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ತುಳಸಿ ಗೌಡ ವೃ ಕ್ಷ ಮಾತೆ
ಅಧ್ಯಕ್ಷತೆ ರೇಖಾ ಬಡಿಗೇರ್ ಕಲಾ ಸಂಕುಲ ಸಂಸ್ಥೆ ರಾಯಚೂರು ಶಾಸಕ ದದ್ದಲ್ ಬಸವನಗೌಡ ಹಾಗೂ ಡಾ. ಎಂ ವೀರನಗೌಡ ಕುಲಸಚಿವರ ಕೃಷಿ ವಿಶ್ವವಿದ್ಯಾನಿಲಯ ರಾಯಚೂರು ಡಾ.ಕೆ ರಾಮಪ್ಪ ವೈದ್ಯರು ರಾಯಚೂರು ಡಾ. ಸುರೇಂದ್ರಬಾಬು ಡಿ ಎಚ್ ಓ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಯಚೂರು ಡಾ. ಶರಣಬಸವ ಪಾಟೀಲ್ ಜೋಳದಡಗಿ ಡಾಕ್ಟರ್ ನಾಗರಾಜ ಬಾಲ್ಕಿ ಡಾಕ್ಟರ್ ತಾನಾಜಿರು ಹಾಗೂ ಕಾರ್ಯಕ್ರಮದ ಸಂಯೋಜಕರಾಗಿರುವ ಮಾರುತಿ ಬಡಿಗೇರ್ ಇವರೆಲ್ಲರ ಸಮ್ಮುಖದಲ್ಲಿ ರಾಜ್ಯಮಟ್ಟದ ಮಹಿಳಾ ಸಾಧಕಿ ಪ್ರಶಸ್ತಿಯನ್ನು ಪ್ರಧಾನ ಮಾಡಲಾಯಿತು




































