ಪತ್ರಕರ್ತನ ಸೋಗಿನಲ್ಲಿ ವ್ಯಕ್ತಿಗೆ ಹಲ್ಲೆ: ಜೀವ ಬೆದರಿಕೆ

Picture of RB NEWS

RB NEWS

Bureau Report

ಕಾರ್ಕಳ : ಕಾರಣಿಕ ಶಕ್ತಿ ಕೇಂದ್ರಕ್ಕೆ ಹೋಗಿ ಪೂಜೆ ಸಲ್ಲಿಸಿ ವಾಪಾಸಾಗುತ್ತಿದ್ದ ವ್ಯಕ್ತಿಯೊಬ್ಬನಿಗೆ ಪತ್ರಕರ್ತನ ಸೋಗಿನಲ್ಲಿ ಆರೋಪಿಯೊಬ್ಬ ಹಲ್ಲೆ ನಡೆಸಿ ಜೀವ ಬೆದರಿಕೆಯೊಡ್ಡಿದ ಘಟನೆ ತೆಳ್ಳಾರಿನ ಮೇಲಿನ ಕುಕ್ಕಾಜೆ ರಸ್ತೆಯಲ್ಲಿ ನಡೆದಿದೆ.

ಕಾರ್ಕಳ ತಾಲೂಕಿನ ದುರ್ಗಾ ಗ್ರಾಮದ ತೆಳ್ಳಾರು ಕುಕ್ಕಾಜೆ ಎಂಬಲ್ಲಿ ಜಹೀರ್ ಎಂಬವರ ಮನೆಯಲ್ಲಿ ಚಾಮುಂಡೇಶ್ವರಿ ದೇವಿಯ ಆರಾಧನೆ ನಡೆಯುತ್ತಾ ಬಂದಿದೆ. ಈ ಮನೆಯಲ್ಲಿ ದೇವಿ ದರ್ಶನ ಕೂಡ ನಡೆಯುತ್ತಿದೆ. ಆ ಹಿನ್ನಲೆಯಲ್ಲಿ ಆಸ್ತಿಕನಾಗಿ ಅಲ್ಲಿಗೆ ವಿಶ್ವನಾಥ್ ಹಾಗೂ ಮನೆ ಮಂದಿ ಬಂದು ತಮ್ಮ ಇಷ್ಟ ಸಿದ್ದಿಗಾಗಿ ಪ್ರಾರ್ಥಿಸಿ ಅಲ್ಲಿಂದ ಹೊರಟಿದ್ದರು.

ಪೂಜೆ ಮುಗಿಸಿ ವಿಶ್ವನಾಥ್ ಸ್ಕೂಟರ್ ನಲ್ಲಿ ವಾಪಾಸು ಮನೆಗೆ ತೆರಳುತ್ತಿದ್ದರು. ಆ ಸಂದರ್ಭದಲ್ಲಿ ಪತ್ರಕರ್ತನ ಸೋಗಿನಲ್ಲಿ ಇದ್ದ ಆರೋಪಿ ರಿಯಾಜ್, ವಿಶ್ವನಾಥ್‌ ಚಲಾಯಿಸುತ್ತಿದ್ದ ಸ್ಕೂಟರನ್ನು ತಡೆದು ನಿಲ್ಲಿಸಿ ನೀನು ಇಲ್ಲಿಗೆ ಯಾಕೆ ಬಂದಿದ್ದೆ. ನಿನಗೆ ಬೇರೆ ದೇವಸ್ಥಾನ ಇಲ್ಲವೇ ಎಂದು ಬೈದು ಬೆದರಿಕೆ ಹಾಕಿ ಹಲ್ಲೆ ನಡೆಸಿದ್ದಾನೆ. ಅದೇ ಸಂದರ್ಭದಲ್ಲಿ ರಿಯಾಜ್‌ನ ಮಕ್ಕಳಾದ ರಿಯಾನ್, ರಿಪ್ಪಾನ್ ಹಾಗೂ ರಿಮಾನ್ ಅವರು ವಿಶ್ವನಾಥ್‌ರನ್ನು ತುಳಿದು ಹಲ್ಲೆ ನಡೆಸಿದ್ದಾರೆ.

ಗಾಯಾಳು ವಿಶ್ವನಾಥ

ಘಟನೆಯಿಂದಾಗಿ ಪರಿಸರದಲ್ಲಿ ಬೊಬ್ಬೆಯ ವಾತಾವರಣ ತಲೆದೋರಿದ್ದು, ಗಲಾಟೆಗೆ ಬಿಡಿಸಲು ಅಲ್ಲಿಗೆ ಬಂದಿದ್ದ ಚಾಮುಂಡೇಶ್ವರಿ ದೇವಸ್ಥಾನದ ಪ್ರಮುಖ ಜಹೀರ್ ಮತ್ತು ನಜೀರ್‌ರಿಗೆ ಕೂಡ ಆರೋಪಿ ರಿಯಾಜ್‌ನು ಹಲ್ಲೆ ನಡೆಸಿ ಬೆದರಿಕೆ ಹಾಕಿಯೊಡ್ಡಿದ್ದಾನೆ.

ಹಲ್ಲೆಯಿಂದ ಗಾಯಗೊಂಡ ವಿಶ್ವನಾಥ್ ಚಿಕಿತ್ಸೆಗಾಗಿ ಕಾರ್ಕಳ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಕುರಿತು ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

“ಅಸ್ತ್ರ” ಬೋಡ್೯: ಕ್ರಿಮಿನಲ್ ಚಟುವಟಿಕೆ

ತೆಳ್ಳಾರು ಪರಿಸರದಲ್ಲಿ ತಾನೊಬ್ಬ ಪತ್ರಕರ್ತನೆಂದು ರಿಯಾಜ್ ಪೋಸ್ ನೀಡುತ್ತಿದ್ದ. ಸಾಲಾದಕ್ಕೆ ಹಿತ್ತಲಿನ ಮರಗಳಿಗೆ ಮಾತ್ರವಲ್ಲದೇ ಇವನು ಚಲಾಸುವ ವಾಹನಗಳಿಗೆ ಅಸ್ತ್ರ ಮಿಡೀಯಾ ಸ್ಟಿಕರ್ ಅಳವಡಿಸಿಸಿಕೊಂಡು ಮಾಧ್ಯಮ ಸಿದ್ಧಾಂತಗಳನ್ನು ಗಾಳಿಗೆ ತೂರಿ ನಡೆದುಕೊಳ್ಳುತ್ತಿದ್ದನೆಂಬ ಆರೋಪ ವ್ಯಾಪಕವಾಗಿ ಕೇಳಿ ಬರುತ್ತಿದೆ.

ಈತನ ಪ್ರವೃತ್ತಿಗೆ ರೋಸಿ ಹೋದ ಆನೇಕ ಮುಗ್ದರು ಕಾರ್ಕಳ ತಾಲೂಕು ಪತ್ರಕರ್ತರ ಸಂಘಕ್ಕೆ ಮೊರೆಹೋಗಿದ್ದು, ಅದರನ್ವಯ ಕಾರ್ಕಳ ಕಾರ್ಯನಿರತ ಪತ್ರಕರ್ತರ ಸಂಘದವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಿದ್ದಾರೆ.

ಇದಾದ ಕೆಲವೇ ದಿನಗಳ ಅಂತರದಲ್ಲಿ ಈ ಘಟನೆ ನಡೆದಿರುವುದು ಮಾತ್ರ ಪೊಲೀಸ್ ಇಲಾಖೆಗೆ‌ ಕಣ್ಣುತೆರೆಸುವಂತೆ ಮಾಡಿದೆ.

ದಾಯಾದಿಗೆ ಕಲಹ ಹಾಗೂ ಚಾಮುಂಡಿ ಆರಾಧನೆ

ತೆಳ್ಳಾರು ನಜೀರ್, ರಿಯಾಜ್, ಜಾಹೀರ್ ಇವರು ಸಹೋದರರು.ಒಂದೇ ಹಿತ್ತಲಿನ ಮೂರು ಮನೆಯಲ್ಲಿ ಇವರ ವಾಸ.
ಮುಸ್ಲಿಂ ಧರ್ಮಿಯರಾಗಿದ್ದರೂ, ಇವರ ಮನೆಯಲ್ಲಿ ಚಾಮುಂಡೇಶ್ವರಿ ದೇವಿಗೆ ವಿಶೇಷ ಸ್ಥಾನ ದೊಂದಿಗೆ ಆರಾಧಿಸುತ್ತಾರೆ ಎಂಬುವುದು ಸ್ಥಳೀಯರ ಮಾಹಿತಿಯೂ ಹೌದು.
ಅಂದ ಹಾಗೇ ಇವರೆಲ್ಲರೂ ಹಿರಿಯರಿಂದ ಗುರುತಿಸಿಕೊಂಡಂತೆ ಜಲಾಲ್ ಫ್ಯಾಮಿಲಿ ಎಂದು ಸಮಾಜ ಗೌರವಿಸುತ್ತಾ ಬಂದಿದೆ.
ಹಿರಿಯ ಜಲಾಲ್ ಫ್ಯಾಮಿಲಿಯ ಪ್ರಮುಖರೊಬ್ಬರು ಕಾರ್ಕಳ ಅನಂತಶಯನ ಸಮೀಪದಲ್ಲಿ ಚಾಮುಂಡಿ ಆರಾಧನೆ ಮಾಡುತ್ತಾ ಬಂದಿದ್ದಾರೆ. ಜೊತೆಗೆ ಜೋತಿಷ್ಯ, ದರುಶನ ನಡೆಯುತ್ತಾ ಬಂದಿದೆ.
ಹೀಗಾಗಿ ಇವರ ಫ್ಯಾಮಿಲಿಗೆ ಮಾರು ಹೋದವರಲ್ಲಿ ಬಹುಸಂಖ್ಯಾತರು ಹಿಂದುಗಳೇ ಆಗಿದ್ದಾರೆ.
ಶ್ರದ್ದೆ,ಭಕ್ತಯಿಂದ ಜಲಾಲ್ ಫ್ಯಾಮಿಲಿಯ ಮನೆಯಲ್ಲಿ ಆರಾಧಿಸುವ ಚಾಮುಂಡಿ ಸನ್ನಿಧಾನಕ್ಕೆ ಹೋಗಿ ತಮ್ಮ ನೊಂದ ಮನಸ್ಸುಗಳಿಗೆ ಪರಿಹಾರವೂ ಕಂಡು ಕೊಳ್ಳುತ್ತಿದ್ದರು.
ವಿಪರ್ಯಾವೆಂದರೆ ತೆಳ್ಳಾರು ನಜೀರ್, ರಿಯಾಜ್, ಜಾಹೀರ್ ಸಹೋದರ ನಡುವೆ ಆಸ್ತಿ ಹಂಚಿಕೆ ವಿವಾದವೂ ಇತ್ತು. ಇದೇ ವಿಚಾರದಲ್ಲಿ ಅವರೊಳಗೆ‌ ಜಂಗಿಕುಸ್ತಿ ನಡೆಯುತ್ತಿತ್ತು.
ಇತ್ತ ರಿಯಾಜ್ ತನ್ನ ಶಕ್ತಿಯ ಅಸ್ತ್ರ ಪ್ರದರ್ಶನಕ್ಕೆ‌ ಮುಂದಾಗಿ ಹಿತ್ತಲಿನಲ್ಲಿ ಫಲಕಗಳನ್ನೇ ತೂಗಿಹಾಕಿಕೊಂಡಿದನೆಂಬ ಸತ್ಯ ಬಯಲಾಗಿದೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top