ಮಂಗಳೂರು: ಮೇ.24 ಶುಕ್ರವಾರ ಪತ್ತನಾಜೆಯ ದಿನ ದಂದು ಸಾವಿರ ಸೀಮೆಯ ಒಡೆಯ ಕದ್ರಿ ಶ್ರೀ ಮಂಜುನಾಥ ದೇವರ ಧ್ವಜ ಮರ ಇಳಿಸುವ ಮೂಲಕ ತುಳುನಾಡಿನ ನೇಮ ಜಾತ್ರೆ ಮುಕ್ತಾಯವಾಗಿದೆ.



ಸಾವಿರ ಸೀಮೆಯ ಒಡೆಯನ ಧ್ವಜ ಮರ ಇಳಿಸಿದ ಮೇಲೆ ಮತ್ತೆ ಎಲ್ಲಿ ಕೂಡ ಧ್ವಜಾರೋಹಣ ಮಾಡಿ ನೇಮ ಜಾತ್ರೆ ಮಾಡುವಂತಿಲ್ಲ ಎಂಬುವಂತಿಲ್ಲ ಎಂಬುವುದು ತುಳುನಾಡಿನ ಸಂಪ್ರದಾಯ ಹಾಗೂ ಆಸ್ತಿಕರ ನಂಬಿಕೆಯೂ ಆಗಿದೆ.
ಈ ಧಾರ್ಮಿಕ ಸತ್ಕಾರ್ಯವನ್ನು ಇಂದಿಗೂ ಪ್ರತಿವರ್ಷ ದಿನಾಂಕದಂದು ಚಾಚು ತಪ್ಪದೇ ಅನುಸರಿಸಲಾಗುತ್ತಿದೆ.
ಕದ್ರಿ ಶ್ರೀ ಮಂಜುನಾಥ ದೇವರ ಧ್ವಜ ಮರ ಇಳಿಸುವ ಜವಾಬ್ದಾರಿಯನ್ನು ಮೊಗವೀರ ಸಮಾಜ ನಡೆಸುತ್ತಾ ಬಂದಿರುವುದು ಗಮನಾರ್ಹವಾಗಿದೆ.






































