ಪಕ್ಷಿ ಸಂರಕ್ಷಣೆ ನಮ್ಮೆಲ್ಲರ ಹೊಣೆ
ಕಾರ್ಕಳ : ಗಾಯಗೊಂಡ ಪಕ್ಷಿಗಳನ್ನು ಆರೈಕೆ ಮಾಡಿ ನಿಸರ್ಗದಲ್ಲಿ ಬಿಡುವ ಮನಸ್ಸು ನಮ್ಮದಾಗಬೇಕು. ಆಕಮಣಕಾರಿ ಪಕ್ಷಿಗಳನ್ನು ಉಪಚರಿಸಬೇಕಾದರೆ ಜಾಗ್ರತೆ ವಹಿಸುವುದು ಅತ್ಯಗತ್ಯ. ಪಕ್ಷಿ ಸಂರಕ್ಷಣೆ ನಮ್ಮೆಲ್ಲರ ಹೊಣೆ ಎಂದು ಗುಬ್ಬಚ್ಚಿಗೂಡು ಜಾಗೃತಿ ಅಭಿಯಾನದ ರೂವಾರಿ ನಿತ್ಯಾನಂದ ಶೆಟ್ಟಿ ಹೇಳಿದರು.


ಕಾರ್ಕಳ ತಾಲೂಕಿನ ರೆಂಜಾಳ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉಚಿತವಾಗಿ ನಡೆದ ಗುಬ್ಬಚ್ಚಿಗೂಡು ಅಳಿವಿನಂಚಿನಲ್ಲಿರುವ ಪಕ್ಷಿ ಸಂಕುಲಗಳ ಉಳಿವಿಗೆ ಸಸ್ಯರಾಶಿಗಳ ಮಹತ್ವ ಜಾಗೃತಿ ಕಾರ್ಯಗಾರದಲ್ಲಿ ಮಾತನಾಡಿ, ಪಾತಕ್ಷಿಕೆ ನಡೆಸಿ ನೀರು www ಮತ್ತು ಆಹಾರ ಇಡುವ ಕ್ರಮ, ಕೃತಕ ಗೂಡುಗಳ ಮಹತ್ವವನ್ನು ವಿವರಿಸಿದರು.
ಇದು ಗುಬ್ಬಚ್ಚಿಗೂಡಿನಿಂದ ಉಚಿತವಾಗಿ ನಡೆದ 287ನೇ ಕಾರ್ಯಾಗಾರ.
ಶಾಲಾ ಮುಖ್ಯ ಶಿಕ್ಷಕಿ ವಿಶಾಲಾಕ್ಷಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಸಹ ಶಿಕ್ಷಕರು ಉಪಸ್ಥಿತರಿದ್ದರು.




































