ಪಕ್ಷಿಗಳ ಬಂಧನ ತರವಲ್ಲ: ನಿತ್ಯಾನಂದ ಶೆಟ್ಟಿ
ಗುಬ್ಬಚ್ಚಿಗೂಡಿನಿಂದ ಉಚಿತವಾಗಿ ನಡೆದ 307 ನೇ ಕಾರ್ಯಾಗಾರ

ಶೃಂಗೇರಿ: ಪಕ್ಷಿಗಳು ನಿಸರ್ಗದ ಕೊಡುಗೆ. ಪಕ್ಷಿಗಳನ್ನು ಬಂಧಿಸಿ ಅದರ ಸ್ವಾತಂತ್ರ್ಯ ಕಸಿಯುವ ಮನಸ್ಸು ನಮ್ಮದಾಗಬಾರದು ಪಕ್ಷಿಗಳ ಬಂಧನ ತರವಲ್ಲ ಎಂದು ಗುಬ್ಬಚ್ಚಿಗೂಡು ಜಾಗೃತಿ ಅಭಿಯಾನದ ರೂವಾರಿ ನಿತ್ಯಾನಂದ ಶೆಟ್ಟಿ ಹೇಳಿದರು.
ಇವರು ಸ.ಹಿ.ಪ್ರಾ.ಶಾಲೆ ಯಡದಾಳು ಇಲ್ಲಿ ನಡೆದ ಗುಬ್ಬಚ್ಚಿಗೂಡು ಅಳಿವಿನಂಚಿನಲ್ಲಿರುವ ಪಕ್ಷಿ ಸಂಕುಲಗಳ ಉಳಿವಿಗೆ ಸಸ್ಯ ರಾಶಿಗಳ ಮಹತ್ವ ಜಾಗೃತಿ ಕಾರ್ಯಾಗಾರದಲ್ಲಿ ಮಾಹಿತಿ ನೀಡಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.

ಗುಬ್ಬಚ್ಚಿಗೂಡು ಜಾಗೃತಿ ಅಭಿಯಾನದ ಸಂಚಾಲಕಿ ರಮ್ಯ ನಿತ್ಯಾನಂದ ಶೆಟ್ಟಿ ಪ್ರಾತ್ಯಕ್ಷಿಕೆ ನಡೆಸಿ ನೀರು, ಆಹಾರ, ಹಾಗೂ ಕೃತಕ ಗೂಡುಗಳನ್ನು ಇಡುವಾಗ ವಹಿಸಬೇಕಾದ ಜವಾಬ್ದಾರಿಯನ್ನು ವಿವರಿಸಿದರು.
ಮುಖ್ಯ ಶಿಕ್ಷಕ ದಿನೇಶ್ ಎಚ್.ಕೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.




































