ನ್ಯಾಯಾಲಯದ ಆವರಣದಲ್ಲಿ ಬುಡ ಸೀಳಿ ನಿಂತ ಮರ !


ಕಾರ್ಕಳ : ನ್ಯಾಯಾಲಯದ ಆವರಣದಲ್ಲಿರುವ ಕಾರು ಪಾರ್ಕಿಂಗ್ ಶೆಡ್ ಗೆ ತಾಗಿಕೊಂಡು ಇರುವ ಬೃಹತ್ ಆಕಾರದ ಮರ ಅಪಾಯದ ಸ್ಥಿತಿಯಲ್ಲಿದೆ.
ಸೋಮವಾರ ಸಂಜೆ ಬೀಸಿದ ಭಾರೀ ಗಾಳಿ, ಮಳೆಗೆ ಮರದ ಬುಡ ಸೀಳಿಕೊಂಡಿದೆ.
ಇದರ ಅಸುಪಾಸಿನಲ್ಲಿ ವಕೀಲರು ಕಾರುಗಳನ್ನು ನಿಲುಗಡೆಗೊಳಿಸುತ್ತಾರೆ.
ಗಾಳಿ, ಮಳೆ ಎದುರಾಗಿ ಮರ ಧರೆಶಾಹಿಯಾದರೆ ಅಪಾರ ಪ್ರಮಾಣದಲ್ಲಿ ಹಾನಿ ಸಂಭವಿಸುವ ಸಾಧ್ಯತೆಗಳನ್ನು ಅಲ್ಲಗೆಳೆಯಲು ಸಾಧ್ಯವಿಲ್ಲ.




































