ನ್ಯಾಯಾಲಯದ ಆವರಣದಲ್ಲಿದ್ದ ಅಪಾಯಕಾರಿ ಮರಗಳಿಗೆ ಮುಕ್ತಿ!


ಕಾರ್ಕಳ : ನ್ಯಾಯಾಲಯದ ಆವರಣದಲ್ಲಿದ್ದ ಅಪಾಯಕಾರಿ ಮರವೊಂದನ್ನು ತೆರವುಗೊಳಿಸಿದ ಅರಣ್ಯ ಇಲಾಖೆಯು ಇನ್ನೂ ಹಲವು ಮರಗಳ ಅಪಾಯಕಾರಿ ಕೊಂಬೆಗಳನ್ನು ತೆರವು ಕಾರ್ಯ ನಡೆಸಿದೆ.
ಸೋಮವಾರ ಸಂಜೆ ಬೀಸಿದ ಭಾರೀ ಗಾಳಿ, ಮಳೆಗೆ ಪಾರ್ಕಿಂಗ್ ಶೆಡ್ ಗೆ ತಾಗಿಕೊಂಡು ಇರುವ ಬೃಹತ್ ಆಕಾರದ ಮರದ ಬುಡ ಸೀಳಿಕೊಂಡಿದೆ.
ಇದರ ಅಸುಪಾಸಿನಲ್ಲಿ ವಕೀಲರು ಕಾರುಗಳನ್ನು ನಿಲುಗಡೆಗೊಳಿಸುತ್ತಾರೆ.
ಗಾಳಿ, ಮಳೆ ಎದುರಾಗಿ ಮರ ಧರೆಶಾಹಿಯಾದರೆ ಅಪಾರ ಪ್ರಮಾಣದಲ್ಲಿ ಹಾನಿ ಸಂಭವಿಸುವ ಸಾಧ್ಯತೆಗಳನ್ನು ಅಲ್ಲಗೆಳೆಯಲು ಸಾಧ್ಯವಿಲ್ಲ ಎಂದು ಆರ್.ಬಿ.ನ್ಯೂಸ್ ಜುಲಾಯಿ 23ರಂದು ವರದಿ ಪ್ರಕಟಿಸಿರುವುದನ್ನು ಸ್ಮರಿಸಬಹುದು.


ಅರಣ್ಯ ಇಲಾಖೆಯು ತ್ವರಿತಗತಿಯಲ್ಲಿ ಕ್ರಮಕೈಗೊಂಡು ಜುಲಾಯಿ 24ರ ಮಧ್ಯಾಹ್ನ 12ರ ವೇಳೆಗೆ ಕ್ರೈನ್ ಬಳಸಿ ಅಪಾಯಕಾರಿ ಮರವನ್ನು ಕತ್ತರಿಸಿದರು.
ಮುಂದುವರಿದ ಭಾಗವಾಗಿ ನ್ಯಾಯಾಲಯದ ಆವರಣದಲ್ಲಿ ಮರಗಳ ಅಪಾಯಕಾರಿ ಕೊಂಬೆಗಳನ್ನು ಕತ್ತರಿಸಲಾಗಿದೆ.
ಈ ಕಾರ್ಯಚರಣೆಯ ಸಂದರ್ಭದಲ್ಲಿ ಕರ್ನಾಟಕ ಲೋಕೋಪಯೋಗಿ ಇಲಾಖೆ ಕಾರ್ಕಳ ವಿಭಾಗದ ಇಂಜಿನಿಯರ್ ಉಪಸ್ಥಿತರಿದ್ದರು.














