ನ್ಯಾಯಾಲಯಕ್ಕೆ ಹಾಜರಾಗದೇ 34 ವರ್ಷ : ತಲೆಮರೆಸಿಕೊಂಡ ಆರೋಪಿಯ ಬಂಧನ
ಕಾರ್ಕಳ : ಕಾರ್ಕಳ ನಗರ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ವಿಚಾರಣೆ ಸಂದರ್ಭದಲ್ಲಿ ನ್ಯಾಯಾಲಯಕ್ಕೆ ಹಾಜರಾಗದೇ ತಲೆ ಮರೆಸಿಕೊಂಡ ಆರೋಪಿಯೊಬ್ಬನನ್ನು 34 ವರ್ಷ ಬಳಿಕ ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ ಘಟನೆ ನಡೆದಿದೆ.
ತೆಂಕ ಎಡಪದವಿನ ಲಿಯೋ ರೋಚ್ (64) ಬಂಧಿತ. ಈತನ ವಿರುದ್ಧ1991ರಲ್ಲಿ ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
34 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂದಿದ್ದು ಈತನ ಮೇಲೆ ನ್ಯಾಯಾಲಯವು LPC ವಾರೆಂಟು ಹೊರಡಿಸುತ್ತದೆ.
ಎ.ಎಸ್.ಪಿ ಕಾರ್ಕಳ ಹರ್ಷ ಪ್ರಿಯವಂದಾ ರವರ ಮಾರ್ಗದರ್ಶನದಲ್ಲಿ, ವೃತ್ತ ನಿರೀಕ್ಷಕ ಮಂಜಪ್ಪ ಡಿ ಹಾಗೂ ಕಾರ್ಕಳ ನಗರ ಠಾಣಾ ಪಿಎಸ್ಐಗಳಾದ ಸಂದೀಪ್ ಕುಮಾರ್ ಶೆಟ್ಟಿ ಹಾಗು ಶಿವಕುಮಾರ್ ಎಸ್.ಆರ್ ರವರ ಸೂಚನೆಯಂತೆ ಕಾರ್ಕಳ ನಗರ ಠಾಣೆಯ ಹೆಚ್.ಸಿ ರಮೇಶ್ ಹೆಚ್. ಹಾಗೂ ಪಿಸಿ ದರ್ಶನ್ ಅವರು ವಾರೆಂಟ್ ಅಸಾಮಿ ತೆಂಕ ಎಡಪದವಿನ ಲಿಯೋ ರೋಚ್ (64). ನನ್ನು ಮಾಚ್೯ 19 ರಂದು ಇವರು ವಾರೆಂಟ್ ಅಸಾಮಿಯನ್ನು ಮಂಗಳೂರಿನ ಪಜೀರ್ ನಲ್ಲಿ ಬಂಧಿಸಿದ್ದಾರೆ.
ಆರೋಪಿಗೆ ಕಾರ್ಕಳ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.

































