” ನ್ಯಾಯಾಂಗ ತನಿಖೆಯ ಬಗ್ಗೆ ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳಲಿ ” -ನಕ್ಸಲ್ ಪುನರ್ ವಸತಿ ಮತ್ತು ಶರಣಾಗತಿ ಸಮಿತಿ ಸದಸ್ಯರು

Picture of RB NEWS

RB NEWS

Bureau Report

ಕೂಡ್ಲು (ಹೆಬ್ರಿ): ನಕ್ಸಲ್‌ ನಾಯಕ ಕೂಡ್ಲು ವಿಕ್ರಂ ಗೌಡ ನಕ್ಸಲ್‌ ನಿಗ್ರಹ ಪಡೆಯ ಪೊಲೀಸರ ಗುಂಡಿಗೆ ಬಲಿಯಾದ ನಾಡ್ಪಾಲಿನ ಪೀತುಬೈಲು ಘಟನಾ ಸ್ಥಳಕ್ಕೆ ಶನಿವಾರ ನಕ್ಸಲ್ ಪುನರ್ ವಸತಿ ಮತ್ತು ಶರಣಾಗತಿ ಸಮಿತಿ ಸದಸ್ಯ ವಕೀಲ ಶ್ರೀಪಾಲ ಕೆಪಿ, ಸಿಪಿಐ(ಎಂ) ನಾಯಕ ಮುನೀರ್ ಕಾಟಿಪಳ್ಳ, ಪತ್ರಕರ್ತ ಪಾರ್ವತೇಶ್ ಬಿಳಿದಾಳೆ, ಪತ್ರಕರ್ತ ನವೀನ್ ಸೂರಿಂಜೆ , ಕಾವ್ಯ ಅಚ್ಯುತ್, ನಿತಿನ್ ಬಂಗೇರ, ಅಹಮ್ಮದ್ ಜಿಶಾನ್ ಮೊದಲಾದವರು ಭೇಟಿ ನೀಡಿದರು. ಪೀತುಬೈಲಿನಲ್ಲಿ ಆದಿವಾಸಿ ಕುಟುಂಬಗಳೊಂದಿಗೆ ವಿಚಾರ ವಿನಿಮಯ ಮಾಡಿದರು.


ನಕ್ಸಲರು ಶರಣಾಗತಿ ಬಯಸಿದರೆ ನಕ್ಸಲ್ ಪುನರ್ ವಸತಿ ಮತ್ತು ಶರಣಾಗತಿ ಸಮಿತಿ ಸದಸ್ಯರಾದ ನಮ್ಮನ್ನು ಸಂಪರ್ಕಿಸಬಹುದು. ಯಾರಾದರೂ ಮುಖ್ಯ ವಾಹಿನಿಗೆ ಬರುವುದಾದರೆ ಎಲ್ಲ ವ್ಯವಸ್ಥೆಗಳನ್ನು ಮಾಡುತ್ತೇವೆ ಎಂದು ಶ್ರೀಪಾಲ ಕೆಪಿ ತಿಳಿಸಿದರು.
ಪಾರ್ವತೇಶ್ ಬಿಳಿದಾಳೆ ಮಾತನಾಡಿ ಸರ್ಕಾರ ಶೀಘ್ರದಲ್ಲಿ ನಕ್ಸಲರ ಸಾಧಕ ಬಾಧಕಗಳ ಬಗ್ಗೆ ಚರ್ಚೆ ನಡೆಸಲು ಸಭೆ ಕರೆಯಬೇಕು. ಆದಿವಾಸಿಗಳ ಸಮಸ್ಯೆಗಳು ಮತ್ತು ಸವಾಲುಗಳ ಬಗ್ಗೆ ಸಭೆಯಲ್ಲಿ ಮಹತ್ತರವಾದ ಚರ್ಚೆ ನಡೆಸಬೇಕಾಗಿದೆ ಎಂದರು.
ನ್ಯಾಯಾಂಗ ತನಿಖೆ ಬಗ್ಗೆ ಸರ್ಕಾರ ಶೀಘ್ರ ನಿರ್ಧರಿಸಲಿ : ಎನ್‌ ಕೌಂಟರ್‌ ಬ್ಗೆ ನ್ಯಾಯಾಂಗ ತನಿಖೆ ನಡೆಸುವಂತೆ ಒತ್ತಡಗಳು ಕೇಳಿ ಬರುತ್ತಿದ್ದು, ಸರ್ಕಾರ ಅತಿ ಶೀಘ್ರವಾಗಿ ನಿರ್ಧಾರ ಕೈಗೊಳ್ಳಬೇಕೆಂದು ಶ್ರೀಪಾಲ ಕೆಪಿ ಹೇಳಿದರು.

ಸಿಪಿಐ(ಎಂ) ನಾಯಕ ಮುನೀರ್ ಕಾಟಿಪಳ್ಳ ಮಾತನಾಡಿ, ವಿಕ್ರಂ ಗೌಡ ಕುಟುಂಬದೊಂದಿಗೆ ಈಗಾಗಲೇ ಸಮಿತಿ ಸದಸ್ಯರು ಮಾತುಕತೆ ನಡೆಸಿದ್ದೇವೆ.
ಎನ್ಕೌಂಟರ್ ನೆಪದಲ್ಲಿ ವಿಕ್ರಂ ಗೌಡನನ್ನು ಪೊಲೀಸರು ಕೊಂದು ಹಾಕಿದ್ದಾರೆ. ಗುಂಡಿನ ಮುಖಾಮುಖಿ ಕಾಳಗ ನಡೆದಿದ್ದೇ ಆಗಿದ್ದಲ್ಲಿ ಭಾರೀ ಹಾನಿಗಳು ನಡೆಯುತ್ತಿತ್ತು. ಅಂತಹ ಕುರುಹುಗಳು ಅಲ್ಲಿ ಕಂಡು ಬರುತ್ತಿಲ್ಲ. ಅಲ್ಲಿ ಮಾನವ ಕ್ರೌರ್ಯ ನಡೆದಿದೆ. ವಿಕ್ರಂ ಗೌಡ ಬಲಿಯಾದ ಬಳಿಕ ಆತನ ಮೃತ ದೇಹವನ್ನು ಮಣಿಪಾಲಕ್ಕೆ ರವಾನೆ ಮಾಡಿರುವುದು ಆ ಬಳಿಕ ಅಂತಿಮ‌ ಸಂಸ್ಕಾರ ಸಂದರ್ಭದಲ್ಲಿ ಕೂಡ್ಲುಗೆ ಮೃತದೇಹ ತಂದ ಅಂಬುಲೆನ್ಸ್ ಬಾಡಿಗೆ ರೂ. 8,000 ನಗದನ್ನು ವಿಕ್ರಂ ನ ಕುಟುಂಬಸ್ಥರಿಂದಲೇ ಭರಿಸಿರುವ ಕ್ರಮ ಮಾತ್ರ ಸರಿಯಲ್ಲ‌. ಮಲೆ ಕುಡಿಯ ಜನಾಂಗದವರಿಗೆ ನ್ಯಾಯ ಬದ್ಧಬಾಗಿ ಮೂಲ ಸೌಕರ್ಯ ಒದಗಿಸಬೇಕೆಂದು ಎನ್ ಕೌಂಟರ್ ಬಗ್ಗೆ ನ್ಯಾಯಾಂಗ ತನಿಖೆ ಒಪ್ಪಿಸುವಂತೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಆಗ್ರಹಿಸಿದ್ದಾರೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top