ನೊಂದ 240 ಗೋವುಗಳಿಗೆ ಆಶ್ರಯ: ಗೋವಿಗಾಗಿ ಮೇವು
ಕಾರ್ಕಳ : ಸ್ವಚ್ಛ ಕಾರ್ಕಳ ಬ್ರಿಗೇಡ್ ಮುಂದಾಳತ್ವದಲ್ಲಿ, ಯೂತ್ ಬಿಲ್ಲವ ಕಾರ್ಕಳ (ರಿ) ಇವರ ಸಹಯೋಗದೊಂದಿಗೆ ಗೋವಿಗಾಗಿ ಮೇವು ಕಾರ್ಯಕ್ರಮವು ಅ. 6 ರ ಭಾನುವಾರ ಬೆಳಿಗ್ಗೆ 6:30 ರಿಂದ 9 :30 ರ ವರೆಗೆ ಕುಕ್ಕುಂದೂರಿನ ತೋಟಗಾರಿಕೆ ಇಲಾಖೆಯ ಫಾರ್ಮಿನಲ್ಲಿ ಜರುಗಿತು.

ಪ್ರತೀ ಭಾನುವಾರ ನಡೆಯುವ ಈ ಅಭಿಯಾನಕ್ಕೆ ಇನ್ನೂ ಹೆಚ್ಚಿನ ಸಂಘಟನೆಗಳು ನಮ್ಮೊಂದಿಗೆ ಕೈ ಜೋಡಿಸಬೇಕೆಂದು ನಮ್ಮ ಕಳಕಳಿಯ ಮನವಿ.
ಇಲ್ಲಿಂದ ಸಂಗ್ರಹಿಸಿದ ಒಂದು ಟಿಪ್ಪರ್ ಹಸಿಹುಲ್ಲನ್ನು ನಂಚಾರಿನಲ್ಲಿರುವ ಕಾಮಧೇನು ಗೋಶಾಲಾ ಮಹಾಸಂಘ ಗೋಶಾಲೆಗೆ ಸಮರ್ಪಿಸಲಾಯಿತು.

ಕೃಷಿಕ ರಾಜೇಂದ್ರ ಚಕ್ಕೇರ ಇವರು ಕೆಲವು ವರ್ಷಗಳ ಹಿಂದೆ ಕಳವು ಮಾಡಲ್ಪಟ್ಟ ದನಗಳಿದ್ದ ವಾಹನ ಅಪಘಾತಕ್ಕೀಡಾಗಿ ಅದರಲ್ಲಿದ್ದ ದನಕರುಗಳ ಸಂಕಷ್ಟಕ್ಕೆ ಮನನೊಂದ ಇವರು ಗೋಶಾಲೆ ಸ್ಥಾಪಿಸಿ ನೊಂದ ಗೋವುಗಳ ಸಂರಕ್ಷಣೆಗೆ ಪಣತೊಟ್ಟಿರುತ್ತಾರೆ.ಇಂದು ಇವರ ಗೋಶಾಲೆಯಲ್ಲಿ ಸುಮಾರು 24೦ ಗೋವುಗಳು ಆಶ್ರಯ ಪಡುತ್ತಿವೆ.


ಇಂದು ನಮ್ಮೊಂದಿಗೆ ಸ್ವಚ್ಛ ಕಾರ್ಕಳ ಬ್ರಿಗೇಡ್ ಮತ್ತು ಯೂತ್ ಬಿಲ್ಲವ ಕಾರ್ಕಳ ಇದರ ಸುಮಾರು 25 ಕ್ಕಿಂತಲೂ ಹೆಚ್ಚಿನ ಸದಸ್ಯರು ಈ ಅಭಿಯಾನದಲ್ಲಿ ಭಾಗವಹಿಸಿದ್ದರು.
ಪ್ರತೀ ವಾರದ ನಮ್ಮ ಈ ಗೋವಿಗಾಗಿ ಮೇವು ಕಾರ್ಯಕ್ರಮಕ್ಕೆ ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ ಕಾರ್ಕಳ ಇವರು ವಾಹನ ಸಾಗಾಟದ ಪ್ರಾಯೋಜಕತ್ವ ವನ್ನು ವಹಿಸಿರುತ್ತಾರೆ.






































