
ನೇರ ನುಡಿಯ ರಾಜಕರಣಿ ಬಿ. ಜನಾರ್ಧನ ಪೂಜಾರಿ ಅವರನ್ನು ಭೇಟಿಯಾದ ಬಿಲ್ಲವ ಮುಖಂಡ ಡಿ.ಅರ್.ರಾಜು
ಮಂಗಳೂರು : ಮಂಗಳೂರು ದಸರಾದ ಮೆರಗು ಹೆಚ್ಚಿಸಿರುವಲ್ಲಿ ಅಗ್ರಪಂಕ್ತಿಯ ಸಾಲಿನಲ್ಲಿ ಬಿ.ಜನಾರ್ಧನ ಪೂಜಾರಿ ಒಬ್ಬರೆನ್ನಿಸಿಕೊಂಡಿದ್ದಾರೆ.
ರಾಜಕೀಯ, ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರಗಳಲ್ಲಿ ಹೊಸ ಕ್ರಾಂತಿಯನ್ನು ಉಂಟುಮಾಡಿದ ಬಿ.ಜನಾರ್ಧನ ಪೂಜಾರಿ ಅವರಿಗೆ ಅಭಿಮಾನ ಬಳಗವೇ ಭಾರೀ ದೊಡ್ಡ ಸಂಖ್ಯೆಯಲ್ಲಿ ಇದ್ದಾರೆ.
ಮುಚ್ಚುಮರೆ ಇಲ್ಲದ ನೇರ ನುಡಿಯ ನಾಯಕ ಬಿ.ಜನಾರ್ಧನ ಪೂಜಾರಿ ಎಂದರೂ ತಪ್ಪಾಗಲಾರದು.
ಇಳಿವಯಸ್ಸಿನಲ್ಲಿ ದೇಹದ ಶಕ್ತಿ ಕ್ಷೀಣಿಸಿಕೊಂಡಿದ್ದರೂ, ಸದಾ ಕ್ರಿಯಾಶೀಲತೆಯಿಂದ ನವರಾತ್ರಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವುದು ವಿಶೇಷವಾಗಿದೆ.
ಇಂತಹ ಅಗ್ರಪಂಕ್ತಿಯ ನಾಯಕನನ್ನು ಕಾರ್ಕಳ ಬಿಲ್ಲವ ಸಮಾಜದ ಧುರೀಣ ಡಿ.ಆರ್. ರಾಜು ಅವರು ಅಕ್ಟೋಬರ್ 13ರಂದು ಕುದ್ರೋಳಿ ಶ್ರೀ ಕ್ಷೇತ್ರದಲ್ಲಿ ಭೇಟಿಯಾಗಿ ಆಶೀರ್ವಾದ ಪಡೆದರು.
ಇದೇ ಸಂದರ್ಭದಲ್ಲಿ ಆರ್.ಬಿ.ನ್ಯೂಸ್ ನೊಂದಿಗೆ ಮಾತನಾಡಿದ ಡಿ.ಆರ್. ರಾಜು ಅವರು, ಬಿ.ಜನಾರ್ಧನ ಪೂಜಾರಿ ಅವರು ಅದರ್ಶ ವ್ಯಕ್ತಿ. ಅವರ ಕಟು ಸತ್ಯಮಾತು ಕೆಲವರ ಪಾಲಿಗೆ ಕಹಿಯಾಗಿರುವುದಂತು ಸತ್ಯ. ಇದು ರಾಜಕೀಯದಲ್ಲಿ ಅವರಿಗೆ ಹಿನ್ನಡೆಗೂ ಕಾರಣವಾಗಿರಬಹುದು. ಆದರೆ ಸೋಲಿಗೆ ಅವರೆಂದು ಭಯಪಟ್ಟವರೇ ಅಲ್ಲ ಎಂದರು.


























