ನೆಲ್ಲಿಕಾರು ವ್ಯವಸಾಯ ಸೇವಾ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ – ಶೇ. 16 ಪಾಲು ಲಾಭಾoಶ ಘೋಷಣೆ
ಮೂಡುಬಿದಿರೆ : ನೆಲ್ಲಿಕಾರು ವ್ಯವಸಾಯ ಸೇವಾ ಸಹಕಾರಿ ಸಂಘದ 2024-25 ನೇ ಸಾಲಿನ ವಾರ್ಷಿಕ ಮಹಾಸಭೆಯು ಸೆ.14ರಂದು ಸಂಘದ ಅಧ್ಯಕ್ಷ ಜಯವರ್ಮ ಯಂ ಜೈನ್ ಅಧಕ್ಷತೆಯಲ್ಲಿ ಜರುಗಿತು.
ನೆಲ್ಲಿಕಾರು ಶ್ರೀ ಅನಂತನಾಥ ಸ್ವಾಮಿ ಬಸದಿಯ ಸಭಾ ಭವನದಲ್ಲಿ ಜರುಗಿದ್ದ ಮಹಾಸಭೆಯಲ್ಲಿ ಉಪಾಧ್ಯಕ್ಷ ಉದಯ ಪೂಜಾರಿ ನಿರ್ದೇಶಕರಾದ ಪದ್ಮನಾಭ ವಿ ಕೋಟ್ಯಾನ್, ಧನಂಜಯ ಆಳ್ವ, ಫ್ರೆಡ್ರಿಕ್ ಪಿಂಟೋ, ಸದಾನಂದ ಪೂಜಾರಿ, ರುಕ್ಕಯ್ಯ ಪೂಜಾರಿ, ಅಶ್ವಥ್, ಶಂಕರ ಗೌಡ, ಬಾಬು ಮೇರ, ಪ್ರೀತಿ, ಲಕ್ಷ್ಮೀ ಇವರ ಉಪಸ್ಥಿತರಿದ್ದರು.
ಸಂಘದ ಸಿಬ್ಬಂದಿ ಶ್ರವಣ್ ಕುಮಾರ್ ಪ್ರಾರ್ಥನೆಗೈದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆದರ್ಶ್ ಜೈನ್ ವಾರ್ಷಿಕ ವರದಿಯನ್ನು ಮಂಡಿಸಿದರು.
ತೋಟಗಾರಿಕಾ ಇಲಾಖೆಯ ನಿರ್ದೇಶಕ ಶ್ರೀನಿವಾಸ್ ರವರು ಹವಾಮಾನ ಆದಾರಿತ ಬೆಳೆ ವಿಮೆ ಯ ಬಗ್ಗೆ ಮತ್ತು ಬೆಳೆಯ ಸಂರಕ್ಷಣೆ ಬಗ್ಗೆ ಸಂಘದ ಸದಸ್ಯರಿಗೆ ಮಾಹಿತಿ ನೀಡಿದರು.
ಸಂಘದ ಅಧ್ಯಕ್ಷ ಜಯವರ್ಮ ಜೈನ್ ಸಂಘದ ಸತತ ಏಳಿಗೆಯ ಬಗ್ಗೆ ಮಾತನಾಡಿ, ಸಂಘದ ಏಳಿಗೆಗೆ ಕಾರಣರಾದ ಎಲ್ಲಾ ಸದಸ್ಯ ಬಂಧುಗಳಿಗೆ, ಆಡಳಿತ ಮಂಡಳಿಯವರಿಗೆ, ಸಿಬ್ಬಂದಿ ವರ್ಗ ದವರಿಗೆ ಅಭಿನಂದಿಸಿ, ವರದಿ ವರ್ಷದಲ್ಲಿ ಸಂಘವು ರೂ. 92.52 ಲಕ್ಷ ನಿವ್ವಳ ಲಾಭ ಗಳಿಸಿದೆ. ಸದಸ್ಯರಿಗೆ ಶೇ.16 ಲಾಭಾoಶ ಘೋಷಣೆ ಮಾಡಿದರು.
ಸಿಬ್ಬಂದಿ ಸುವೀಕ್ಷಾ ಧನ್ಯವಾದ ಸಲ್ಲಿಸಿದರು.
ರಾಷ್ಟ್ರಗೀತೆ ಯೊಂದಿಗೆ ಸಭೆಯನ್ನು ಮುಕ್ತಾಯಗೊಳಿಸಲಾಯಿತು.
.
.
ಸಿಬ್ಬಂದಿ ಸುವೀಕ್ಷಾ ಧನ್ಯವಾದ ಸಲ್ಲಿಸಿದರು.
.







