ನೆಲ್ಲಿಕಾರು ಪ್ರೌಢಶಾಲಾ ಹೊಸ ಕಟ್ಟಡ ಉದ್ಘಾಟನೆ-ಕ್ರೀಡಾ ಸಮವಸ್ತ್ರ ವಿತರಣೆ
ವರದಿ : ರಾಯಿ ರಾಜಕುಮಾರ ಮೂಡುಬಿದಿರೆ


ಮೂಡುಬಿದಿರೆ : ನೆಲ್ಲಿಕಾರು ಸರಕಾರಿ ಪ್ರೌಢಶಾಲೆಯಲ್ಲಿ ಆಗಸ್ಟ್ 26ರಂದು ನೂತನ ಕಟ್ಟಡವನ್ನು ಶಾಸಕ ಉಮಾನಾಥ ಕೋಟ್ಯಾನ್ ಉದ್ಘಾಟಿಸಿದರು.
ಇದೇ ಸಂದರ್ಭದಲ್ಲಿ ನಡೆದ ಸಭಾ ವೇದಿಕೆಯಲ್ಲಿ ಎಸ್.ಡಿ. ಎಂ.ಸಿ. ಅಧ್ಯಕ್ಷರಾದ ಪ್ರವೀಣ್ ಕುಮಾರ್, ನೆಲ್ಲಿಕಾರು ಪಂಚಾಯತ್ ಅಧ್ಯಕ್ಷ ಉದಯ ಪೂಜಾರಿ, ಸದಸ್ಯ ಜಯಂತ್ ಹೆಗಡೆ, ಬಿಇಓ ವಿರೂಪಾಕ್ಷಪ್ಪ, ಎಸ್ ಡಿ ಎಂ ಸಿ ಸದಸ್ಯರುಗಳು ಹಾಜರಿದ್ದರು.
ಮುಖ್ಯ ಶಿಕ್ಷಕಿ ಶಕುಂತಲಾ ಕೆ ಸ್ವಾಗತಿಸಿದರು. ದೈಹಿಕ ಶಿಕ್ಷಕ ಶಿವಾನಂದ ಕಾಯ್ಕಿಣಿ ನಿರ್ವಹಿಸಿದರು. ಸುನೀತಾ ಪೈ ವಂದಿಸಿದರು.






































