ನಿಧನ -ಪ್ರಭಾವತಿ

Picture of RB NEWS

RB NEWS

Bureau Report

ನಿಧನ


ಪ್ರಭಾವತಿ
ಕಾರ್ಕಳ : ಕಾರ್ಕಳ ತಾಲೂಕು ಈದು ಗ್ರಾಮದ ಜೆ ಪಿ ನಿಲಯ ನಿವಾಸಿ ದಿವಂಗತ ಜನಾರ್ದನ ಅವರ ಪತ್ನಿ ಪ್ರಭಾವತಿ ( 74 )ಅಲ್ಪ ಕಾಲದ ಅಸ್ವಾಸ್ತ್ಯದಿಂದ ಜುಲೈ 17 ರಂದು ನಿಧನರಾಗಿದ್ದಾರೆ .
ಅವರು ಈದು ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಕಾರ್ಯಕರ್ತೆಯಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು.
ಈದು ಮೈತ್ರಿ ಮಹಿಳಾ ಮಂಡಲ ಸ್ಥಾಪಕಾಧ್ಯಕ್ಷೆಯಾಗಿ ಸಾಮಾಜಿಕ ಸೇವಾಕ್ಷೇತ್ರ ಪ್ರವೇಶಿಸಿದ ಅವರು 20 ವರ್ಷ ಕಾಲ ಕಾರ್ಕಳ ತಾಲೂಕು ಮಹಿಳಾ ಒಕ್ಕೂಟದ ನಿರ್ದೇಶಕರಾಗಿ ಮತ್ತು 2ವರ್ಷ ಒಕ್ಕೂಟದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು .
ಈದು ಗ್ರಾಮಪಂಚಾಯತ್ ಸದಸ್ಯರಾಗಿಯೂ ಅವರು ಸೇವೆ ಸಲ್ಲಿಸಿದ್ದರು .ಅವರ ಸಾಮಾಜಿಕ ಸೇವಾಕಾರ್ಯಕ್ಕೆ ಹಲವು ಸನ್ಮಾನ , ಪ್ರಶಸ್ತಿಗಳು ಬಂದಿದ್ದವು .ಅವರು ಇಬ್ಬರು ಪುತ್ರಿಯರನ್ನು ಮತ್ತು ಅಪಾರ ಬಂಧು ವರ್ಗವನ್ನು ಅಗಲಿದ್ದಾರೆ. ಅವರ ನಿಧನದ ಸುದ್ದಿ ಕೇಳಿ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಅವರ ನಿವಾಸಕ್ಕೆ ಭೇಟಿ ನೀಡಿ ಅಂತಿಮ ದರ್ಶನ ಪಡೆದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top