ನಿಟ್ಟೆ: ವಾಹನಗಳ ಸರಣಿ ಅಪಘಾತಕ್ಕೆ ಪಾದಚಾರಿ ಗಂಭೀರ ಗಾಯ

Picture of RB NEWS

RB NEWS

Bureau Report

(ವರದಿ: ಅನಿಲ್ ನಿಟ್ಟೆ)

ಕಾರ್ಕಳ : ಡಿ.29 ಸೋಮವಾರ ಬೆಳಿಗ್ಗೆ 8.30ರ ವೇಳೆಗೆ ನಿಟ್ಟೆ ಪಂಚಾಯತ್ ಎದುರುಗಡೆ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಸರಣಿ ಅಪಘಾತ ಸಂಭವಿಸಿದ್ದು, ಪಾದಚಾರಿಯೋರ್ವರು ಗಂಭೀರ ಸ್ಥಿತಿಯಲ್ಲಿ ಗಾಯಗೊಂಡಿದ್ದಾರೆ.

2 ಕಾರು ಹಾಗೂ ಮೊಟ್ಟೆ‌ ಸಾಗಾಟದ ಲಾರಿಯೊಂದು ಜಖಂಗೊಂಡಿದೆ.

ಅಪಘಾತ ತೀವ್ರತೆಗೆ ಪಾದಾಚಾರಿಯೊಬ್ಬನಿಗೆ ಮೊಟ್ಟೆ ಸಾಗಾಟ ಲಾರಿ ತಾಗಿ ಅವನ ಕಾಲು ಸಂಪೂರ್ಣ ನಜ್ಜುಗುಜ್ಜಾಗಿದೆ.

ದಾವಣಗೆರೆಯಿಂದ ಮಂಗಳೂರಿಗೆ ಹೋಗುತ್ತಿದ್ದ ಮೊಟ್ಟೆ ಸಾಗಾಟದ ಲಾರಿ ರಸ್ತೆಯ ಮಧ್ಯದಲ್ಲಿ ಪಲ್ಟಿ ಹೊಡೆದಿರುವಿದರಿಂದ ಕೆಲ ಹೊತ್ತುಗಳ ಕಾಲ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು.

ಕಾರ್ಕಳ‌ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top