
ನಿಟ್ಟೆಯ ಬಾವಿಯಲ್ಲಿ ಚಿರತೆ
ವರದಿ : ಅನಿಲ್ ನಿಟ್ಟೆ
ಕಾರ್ಕಳ : ನಿಟ್ಟೆ ಗ್ರಾಮದ ಎರ್ಮಂಜಪಲ್ಲ ಬಳಿಯ ಬಾಗಿ ಎನ್ನುವವರ ಮನೆಯ ಬಾವಿಗೆ ನಿನ್ನೆ ರಾತ್ರಿ ಚಿರತೆಯೊಂದು ಬಿದ್ದಿದೆ.
ಆಹಾರ ಹುಡುಕಿ ಬಂದಿದ್ದ ಚಿರತೆ ಆಯತಪ್ಪಿ ಬಾವಿಗೆ ಬಿದ್ದಿದ್ದು, ಬಾವಿಯ ಪೊಟರೆಯಲ್ಲಿ ಅವಿತುಕುಳಿತುಕೊಂಡಿದೆ.



\

ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಘಟನಾ ಸ್ಥಳಕ್ಕೆ ಅಗಮಿಸಿದ್ದಾರೆ. ಬಾವಿಯಿಂದ ಸುರಕ್ಷಿತವಾಗಿ ಚಿರತೆಯನ್ನು ಹೊರತೆಗೆದು ಸೆರೆ ಹಿಡಿಯುವ ಕಾರ್ಯಚರಣೆ ನಡೆಯುತ್ತಿದೆ. ಅದಕ್ಕಾಗಿ ಬಾವಿಯ ಮೇಲ್ಭಾಗದಲ್ಲಿ ಬಲೆಯನ್ನು ಅಳವಡಿಸಲಾಗಿದ್ದು, ಬೃಹತ್ ಆಕಾರದ ಏಣಿಯನ್ನು ಬಾವಿಗೆ ಇಳಿಸಲಾಗಿದೆ.
ಮಾಹಿತಿ ತಿಳಿತುತ್ತಿದ್ದಂತೆ ಘಟನಾ ಸ್ಥಳಕ್ಕೆ ಗ್ರಾಮಸ್ಥರು ಅಗಮಿಸುತ್ತಿದ್ದಾರೆ.
ಅಂತು ಇಂತು ಸಿಕ್ಕಿ ಬಿತ್ತು…


ನಿಟ್ಟೆ ಗ್ರಾಮದ ಎರ್ಮಂಜಪಲ್ಲ ಬಳಿಯ ಬಾಗಿ ಎನ್ನುವವರ ಮನೆಯ ಬಾವಿಗೆ ನವಂಬರ್ 23ರ ರಾತ್ರಿ ಚಿರತೆಯೊಂದು ಬಿದ್ದಿತು.
ಬಾವಿಯ ಪೊಟರೆಯಲ್ಲಿ ಅವಿತುಕುಳಿತುಕೊಂಡಿದ್ದು ಚಿರತೆಯನ್ನು ಮೇಲಕ್ಕೆ ಬರುವಂತೆ ಮಾಡಿ ಬೋನಿನಲ್ಲಿ ಸೆರೆ ಹಿಡಿಯುವಲ್ಲಿ ಅರಣ್ಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಯಶಸ್ಸು ಕಂಡಿದ್ದಾರೆ.
ಅರಣ್ಯ ಇಲಾಖೆಯ ಕಾರ್ಯದಕ್ಷತೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ .





































