ನಾರಾವಿ ಸರಕಾರಿ ಪ್ರೌಢ ಶಾಲೆಯಲ್ಲಿ ಕಂಪ್ಯೂಟರ್ ಲ್ಯಾಬ್ ಮತ್ತು ಸ್ಮಾರ್ಟ್ ಕ್ಲಾಸ್ ಉದ್ಘಾಟನೆ

Picture of RB NEWS

RB NEWS

Bureau Report

ಮುಖ್ಯೋಪಾಧ್ಯಾಯ ಸುಶೀಲಾ ಅಧ್ಯಕ್ಷತೆವಹಿಸಿದರು.

ಮುಖ್ಯಅತಿಥಿಗಳಾಗಿ ಕಂಪ್ಯೂಟರ್ ಹಾಗೂ ಸ್ಮಾರ್ಟ್ ಕ್ಲಾಸ್ ವ್ಯವಸ್ಥೆ ಮಾಡಿಸಿ ಕೊಟ್ಟ ಕೆ ಕಮಲಾಕ್ಷ ಕಾಮತ್ ಕಾರ್ಕಳ, ಪ್ರತೀಕ್ ಕಾಮತ್ ಯುಎಸ್ಎ, ಕುಕ್ಕುಂದೂರು ಕಾರ್ಕಳ ಶ್ರೀ ದುರ್ಗಾಪರಮೇಶ್ವರಿ ವಿವಿಧೋದ್ದೇಶ ಸಹಕಾರ ಸಂಘದ ಸಂತೋಷ್ ರಾವ್,ನಾರಾವಿ ಗ್ರಾಮ ಪಂಚಾಯತ್ ಸದಸ್ಯ ಉದಯ್ ಹೆಗ್ಡೆ, ಜನಸೇವಾ ಟ್ರಸ್ಟ್ ನ ಕಾರ್ಯದರ್ಶಿಗಳು ಉಮೇಶ್ ,

೬ಸುರೇಶ್ ಪೂಜಾರಿ ಎಸ್ ಡಿ ಎಂ ಸಿ ಉಪಾದ್ಯಕ್ಷ ಸುರೇಶ್ ಪೂಜಾರಿ ವೇದಿಕೆಯನ್ನು ಅಲಂಕರಿಸಿದ್ದರು.

ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿಗಳು ಹಾಗೂ ಪೋಷಕರು ಭಾಗವಹಿಸಿದ್ದರು.

ದೈಹಿಕ ಶಿಕ್ಷಕ ಕೋದಂಡರಾಮ ಸ್ವಾಗತಿಸಿದರು. ಹಿಂದಿ ಶಿಕ್ಷಕಿ ಶಾಂಭವಿ ಕುಮಾರಿ ಧನ್ಯವಾದ ನೀಡಿದರು.

ವಿದ್ಯಾರ್ಥಿಗಳ ಸನ್ಮಾನ ಕಾರ್ಯಕ್ರಮವನ್ನು ಆಶಾಲತಾ ಗಣಿತ ಶಿಕ್ಷಕಿ ಹಾಗೂ ಗೀತಾ ಕನ್ನಡಭಾಷಾ ಶಿಕ್ಷಕಿ ನೆರವೇರಿಸಿಕೊಟ್ಟರು.

ಕಮಲಾಕ್ಷ ಕಾಮತ್ ರವರ ಸನ್ಮಾನ ಕಾರ್ಯಕ್ರಮವನ್ನು ಆನಂದ್ ಭಟ್ ಸಮಾಜ ವಿಜ್ಞಾನ ಶಿಕ್ಷಕರು ನೆರವೇರಿಸಿದರು.

ಸ್ಮಾರ್ಟ್ ಕ್ಲಾಸ್ ಬಗ್ಗೆ ವಿಜ್ಞಾನ ಶಿಕ್ಷಕ ಶರೀಫ್ ಕೆ ಸಯ್ಯದ್ ಮಾಹಿತಿ ನೀಡಿದರು.

ಆಶಾಲತಾ ಇಂಗ್ಲಿಷ್ ಭಾಷಾ ಶಿಕ್ಷಕಿ ನಿರೂಪಿಸಿದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top