ನಾರಾವಿ ಮಹಾ ಚಂಡಿಕಾ ಯಾಗದ ಅಂಗವಾಗಿ ಪೋಸ್ಟರ್ ಬಿಡುಗಡೆ
ನಾರಾವಿ : ಪರಸ್ಪರ ಯುವಕ ಮಂಡಲ ಈದು -ನಾರಾವಿ ನೇತೃತ್ವದಲ್ಲಿ ನಡೆಯುವ ನಾರಾವಿ ಮಹಾ ಚಂಡಿಕಾ ಯಾಗದ ಅಂಗವಾಗಿ ಪ್ರಥಮ ಕಾರ್ಯಕ್ರಮ ನಡೆದಿದ್ದು,
ಪೋಸ್ಟರ್ ಬಿಡುಗಡೆಯು ನಾರಾವಿ ಸೂರ್ಯ ನಾರಾಯಣ ದೇವಸ್ಥಾನದಲ್ಲಿ ನಡೆಯಿತು.



ಮುಖ್ಯ ಅತಿಥಿಗಳಾಗಿ ನಾರಾವಿ ಶ್ರೀ ಸೂರ್ಯ ನಾರಾಯಣ ದೇವಸ್ಥಾನದ ಪ್ರಧಾನ ಅರ್ಚಕರು ವೇದಮೂರ್ತಿ ಶ್ರೀ ಕೃಷ್ಣ ತಂತ್ರಿ, ನಾರಾವಿ ಶ್ರೀ ಧರ್ಮನಾಥ ಸ್ವಾಮಿ ಜಿನ ಚೈತ್ಯಾಲಯದ ಅಧ್ಯಕ್ಷ ನಿರಂಜನ ಅಜ್ರಿ ರಾಮೆರಗುತ್ತು . ಸುಧಾಕರ ಭಂಡಾರಿ ಪ್ರಮುಖರು, ಭಂಡಾರಿ ಸಮಾಜ ನಾರಾವಿ ಸುರೇಶ್ ಬಾಂದೊಟ್ಟು ಗುರಿಕಾರರು ಬಿಲ್ಲವ ಸಮಾಜ ನಾರಾವಿ, ಪ್ರಮೋದ್ ಕುಲಾಲ್ ಅಧ್ಯಕ್ಷರು ಕುಲಾಲ ಸಮಾಜ ಕಲ್ಯಾಣ ಸಂಘ(ರಿ.) ಹೊಸ್ಮಾರು, ಶಂಕರ ಶೆಟ್ಟಿ, ಅಧ್ಯಕ್ಷರು ಬಂಟರ ಸಂಘ(ರಿ.) ಈದು. ಎನ್. ರಾಮಚಂದ್ರ ಆಚಾರ್ಯ,ಅಧ್ಯಕ್ಷರು ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘ(ರಿ.) ನಾರಾವಿ. ರಾಘು ದೇವಾಡಿಗ ಅಧ್ಯಕ್ಷರು ದೇವಾಡಿಗ ಸಂಘ(ರಿ.) ನಾರಾವಿ. ಶೇಖರ ಹೆಗ್ಡೆ, ದೇವಸ ಮನೆ ಪ್ರಮುಖರು ಹೆಗ್ಡೆ ಸಮಾಜ ನಾರಾವಿ. ಸುಧಾಕರ(ಕಿಟ್ಟು) ಗೌರವಾಧ್ಯಕ್ಷರು ಹರಿಸೇವಾ ಭಜನಾ ಸಮಿತಿ ಮಂಜುನಗರ. ವಸಂತ ಪಡ್ಡಾಯಿ ಕಾಪು ಪಂಡಿತರು ನಾರಾವಿ. ಬಾಬು ಮಡಿವಾಳ ಮಡಿವಾಳ ಸಮಾಜ ಈದು. ಸದಾನಂದ ಸೇರಿಗಾರ, ಹಟ್ಯಡ್ಕ ಮನೆ
ಪ್ರಮುಖರು ಸೇರಿಗಾರ ಸಮಾಜ ನಾರಾವಿ. ಸುಂದರ ಬಿ. ಶ್ರೀ ಬ್ರಹ್ಮ ಮೊಗೇರ ದೈವಸ್ಥಾನ ಅಲಿಮಾರು ಗುಡ್ಡೆ ಈದು. ಅಣ್ಣಿ ಮಲೆಕುಡಿಯ ಕುಳಂತಾಜೆ ಪ್ರಮುಖರು ಮಲೆಕುಡಿಯ ಸಮಾಜ ನಾರಾವಿ, ಸುರೇಶ ಪರವ.ದೈವನರ್ತಕರು ಮರೋಡಿ,ದಾನಂದ ಕೊರಗ. ಪರಸ್ಪರ ಯುವಕ ಮಂಡಲದ ಅಧ್ಯಕ್ಷ ಪ್ರಸಾದ್ ಪೂಜಾರಿ, ಉಪಾಧ್ಯಕ್ಷರಾದ ಪ್ರವೀಣ್ ದೇವಾಡಿಗ, ಗುರು ಪ್ರಸಾದ್ ನಾರಾವಿ, ಜಗದೀಶ್ ಅಂಚನ್, ಡಾ ಪ್ರಸಾದ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಅಶೋಕ್ ಎಂ ಕೆ ಹಾಗೂ ಪ್ರದೀಪ್ ಎಂ ಕೆ ನಿರೂಪಣೆ ಮಾಡಿದರು.




































