ನಾಯಕತ್ವ ಎಂಬುದು ಅಧಿಕಾರವಲ್ಲ ಹೊಣೆಗಾರಿಕೆ

Picture of RB NEWS

RB NEWS

Bureau Report

ಶಿರ್ತಾಡಿ( ಮೂಡುಬಿದಿರೆ): ನಾಯಕತ್ವ ಎಂಬುವುದು ಅಧಿಕಾರವಲ್ಲ. ಅದು ಹೊಣೆಗಾರಿಕೆ.
ಈ ಮಾತುಗಳನ್ನು ಸಾರುವಂತೆ ಜು. 1 ರಂದು ಶಿರ್ತಾಡಿ ಮೌಂಟ್ ಕಾರ್ಮೆಲ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪ್ರತಿಷ್ಠಾಪನ ಸಮಾರಂಭವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಶಿಪಟ್ಣ ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಗೂ ಸಿ.ಎ ಬ್ಯಾಂಕ್ ನ ಅಧ್ಯಕ್ಷ ಸತೀಶ್ ಕೆ ಬಂಗೇರ ವಹಿಸಿದ್ದರು.

ಇವರು ವಿದ್ಯಾರ್ಥಿ ನಾಯಕರಿಗೆ ಬ್ಯಾಡ್ಜ್ ಗಳನ್ನು ನೀಡಿ ಗೌರವಿಸಿ ಅವರ ಹೊಣೆಗಾರಿಕೆಗಳ ಬಗ್ಗೆ ಪ್ರೇರಣಾತ್ಮಕ ಭಾಷಣವನ್ನಾಡಿದರು.

ತರಗತಿ ನಾಯಕರಿಗೆ ಬ್ಯಾಡ್ಜುಗಳನ್ನು ಧರಿಸುವುದರ ಮೂಲಕ ಜವಾಬ್ದಾರಿಯನ್ನು ನೀಡಲಾಯಿತು.

ಶಾಲಾ ಮುಖ್ಯಮಂತ್ರಿಯಾಗಿ ಶರೋನ್ ಪಿಂಟೋ ಶಾಲಾ ಉಪಮುಖ್ಯಮಂತ್ರಿಯಾಗಿ ಫರಾ ನಫೀಸ್ ಪ್ರಮಾಣವಚನ ಸ್ವೀಕರಿಸಿದರು.

ಶಾಲಾ ಮುಖ್ಯೋಪಾಧ್ಯಾಯಿನಿ ಬಿಂದು ಮ್ಯಾಕ್ಸಿo ಡಿಸೋಜ ರವರು ಜವಾಬ್ದಾರಿ ಹಾಗೂ ಹೊಣೆಗಾರಿಕೆಗಳ ಬಗ್ಗೆ ತಿಳಿಸಿದರು.

ಕಾರ್ಯಕ್ರಮದಲ್ಲಿ ಸಹ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಮಧುರ ಜೈನ್ ನಿರೂಪಿಸಿದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top