ನಾಮನಿರ್ದೇಶನ ಸದಸ್ಯರನ್ನು ಬರಮಾಡಿಕೊಂಡ ಪುರಸಭಾ ಅಧ್ಯಕ್ಷ

Picture of RB NEWS

RB NEWS

Bureau Report

ಕಾರ್ಕಳ : ಕರ್ನಾಟಕ ಸರಕಾರದಿಂದ ಕಾರ್ಕಳ ಪುರಸಭೆಗೆ ನಾಮ ನಿರ್ದೇಶನಗೊಂಡ ಪುರಸಭಾ ಸದಸ್ಯರುಗಳಾದ ಶಿವಾಜಿ ರಾವ್, ನಾಗೇಶ್ ಹೆಗ್ಡೆ, ಪ್ರಸನ್ನ ಶೆಟ್ಟಿಗಾರ್, ಸುನೀಲ್ ದೇವಾಡಿಗ ಅವರು ಪುರಸಭಾ ಅದ್ಯಕ್ಷ ಯೋಗೀಶ್ ದೇವಾಡಿಗರನ್ನು ಅವರ ಕಚೇರಿಗೆ ಭೇಟಿ ಮಾಡಿದರು.

ಇದೇ ಸಂದರ್ಭದಲ್ಲಿ ನೂತನ ಸದಸ್ಯರನ್ನು ಗೌರವಿಸಲಾಯಿತು. ಉಪಾಧ್ಯಕ್ಷ ಪ್ರಶಾಂತ್ ಕೋಟ್ಯಾನ್, ಸ್ಥಾಯಿ ಸಮಿತಿ ಅದ್ಯಕ್ಷ ಪ್ರದೀಪ್ ರಾಣೆ, ಪುರಸಭಾ ಸದಸ್ಯ ಬ್ಲಾಕ್ ಕಾಂಗ್ರೆಸ್ ಅದ್ಯಕ್ಷರಾದ ಶುಭದರಾವ್, ಪುರಸಭಾ ಸದಸ್ಯರಾದ ಸೋಮನಾಥ್ ನಾಯಕ್, ಭೂ ನ್ಯಾಯ ಮಂಡಲಿಯ ಸದಸ್ಯ ಸುನೀಲ್ ಭಂಡಾರಿ, ಮಾಜಿ ಸದಸ್ಯ ವಂದನಾ ಜತ್ತನ್ನ ಉಪಸ್ಥಿತರಿದ್ದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top