ಆಗುಂಬೆ: ನಾಪತ್ತೆಯಾಗಿದ್ದ ಯುವತಿ ಕೊಳೆತ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾದ ಘಟನೆ ಆಗುಂಬೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಕುಶಾಲ್ ಅವರ ಮಗಳು ಪೂಜಾ ಎ.ಕೆ. (24) ಕೊಲೆಗೀಡಾದ ದುರ್ದೈವಿ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಮಣಿಯನ್ನು ಪೊಲೀಸರು ಬಂಧಿಸಿದ್ದಾರೆ.

ಜೂ.30 ರಂದು ಪೂಜಾ ನಿಗೂಢ ರೀತಿಯಲ್ಲು ನಾಪತ್ತೆಯಾಗಿದ್ದಳು. ಪ್ರಕರಣದ ತನಿಖೆಯನ್ನು ಆಗುಂಬೆ ಪೊಲೀಸ್ ಠಾಣೆಯ ಪಿ ಎಸ್ ಐ ರಂಗನಾಥ್ ಅಂತರಗಟ್ಟಿ ನೇತೃತ್ವದಲ್ಲಿ ನಡೆದಿತು.
ಆರೋಪಿ ಮಣಿ ಎಂಬಾತನು ಪೂಜಾ ಎಂಬಾಕೆಯನ್ನು ಕತ್ತು ಹಿಸುಕಿ ಕೊಲೆ ಮಾಡಿ ನಾಲೂರು ಸಮೀಪ ಹೊಂಡದಲ್ಲಿ ಮುಚ್ಚಿ ಹಾಕಿದ್ದನು ತನಿಖೆ ವೇಳೆಗೆ ಪೊಲೀಸರಲ್ಲಿ ಒಪ್ಪಿಕೊಂಡಿದ್ದಾನೆ.
ಶನಿವಾರ ರಾತ್ರಿ 11 ರ ವೇಳೆ ಆರೋಪಿ ಮಣಿಯನ್ನು ಘಟನೆ ನಡೆದ ಸ್ಥಳಕ್ಕೆ ಕರೆದು ಬಂದ ಪೊಲೀಸರು ಸ್ಥಳ ಮಹಜರು ನಡೆಸಿದ್ದಾರೆ.































