ನಾಪತ್ತೆಯಾದ ಮಂಜುನಾಥ ಧರ್ಮಸ್ಥಳ ಪರಿಸರದಲ್ಲಿ ಪತ್ತೆ
7 ದಿನಗಳ ಮೌನವ್ರತಾಚರಣೆಯೊಂದಿಗೆ ಪಾದಯಾತ್ರೆ
ಕಾರ್ಕಳ : ಮನೆ ಮಗನಿಗಾಗಿ ಹುಡುಕುತ್ತಾ ಮನೆ ಮಂದಿ ಕಾರ್ಕಳಕ್ಕೆ ಬಂದರೆ, ಆತ ಮೌನವ್ರತಾಚರಣೆಯೊಂದಿಗೆ ಪಾದಯಾತ್ರೆ ಮೂಲಕ ತಲುಪಿದ್ದು ಮಾತ್ರ ಧರ್ಮಸ್ಥಳಕ್ಕೆ. ಕೈ ಯಲ್ಲಿ ಕಾಸಿಲದೇ, ಇದ್ದ ಮೊಬೈಲ್ ಕಳೆದು ಕೊಂಡು ಊರಿಗೆ ಮರಳಲು ಅತಂತ್ರ ಸ್ಥಿತಿಯಲ್ಲಿ ಇದ್ದ ಆತನ ನೆರವಿಗೆ ಬಂದವರು ಶ್ರೀ ಕ್ಷೇತ್ರ ಧರ್ಮಸ್ಥಳದ ಸಿಬ್ಬಂದಿಗಳು.

- ಈ ಸುದ್ದಿಯ ಕೇಂದ್ರ ಬಿಂದು ರಾಯಚೂರು ಲಿಂಗಸುಗೂರು ತಾಲೂಕಿನ ಮುದ್ದಗಲ್ಲು ಮಂಜುನಾಥ. ಆತನ ವಯಸ್ಸು ಬರೀ 28. ಉತ್ತಮ ಕಲಾವಿದ. ಕಾರ್ಕಳದ ಮಿಯ್ಯಾರು ತರಬೇತಿ ಕೇಂದ್ರವೊಂದರಲ್ಲಿ ಕಳೆದ 7 ವರ್ಷಗಳ ಹಿಂದೆ ಕಲಾ ಶಿಕ್ಷಣ ಪಡೆದಿದ್ದ. ಅಕ್ಟೋಬರ್ 3ರಂದು ಆತ ನಿಗೂಢ ರೀತಿಯಲ್ಲಿ ನಾಪತ್ತೆಯಾಗಿದ್ದನು. ಮನೆಯಿಂದ ಹೊರಟಿದ ಆ ದಿನ ಬಿಳಿ ಶರ್ಟ್, ನೀಲ ಪ್ಯಾಂಟ್ ಹಾಗೂ ಕೆಂಪು ಧರಿಸಿದ್ದನು. ಈ ನಿಟ್ಟಿನಲ್ಲಿ ನಾಪತ್ತೆಯಾಗಿದ್ದ ಯುವಕ ಕಾರ್ಕಳ ಪರಿಸರದಲ್ಲಿ ಇರಬಹುದೆಂಬ ಶಂಕೆಯ ಮೇರೆಗೆ ಮನೆ ಮಂದಿ ಆಯ್ದ ಕಡೆಗಳಲ್ಲಿ ಮಂಜುನಾಥನ ಬಗ್ಗೆ ಮಾಹಿತಿ ಕೇಳಿಕೊಂಡು ಬಂದಿದ್ದರು. ಮಾತ್ರವಲ್ಲದೇ ‘ಆರ್.ಬಿ.ನ್ಯೂಸ್’ ಅನ್ನು ಸಂಪರ್ಕಿಸಿದ್ದರು.
ಮಂಜುನಾಥನ ಪತ್ತೆಯಾಗದೇ ಮನೆ ಮಂದಿ ಮರಳಿ ಊರಿಗೆ ತಲುಪಿ ಪೊಲೀಸ್ ಠಾಣೆಗೂ ದೂರು ಸಲ್ಲಿಸಿದ್ದಾರೆ.
ನಾಪತ್ತೆಯಾದ ಮಂಜುನಾಥನ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹರಿದಾಡಿತು.
ಮಂಜುನಾಥನ ಸಹೋದರ ದುರ್ಗಪ್ಪ ಅವರ ಮೊಬೈಲ್ ಗೆ ಅ.9ರಂದು ಕರೆ ಬಂದಿದ್ದು, ಮಂಜುನಾಥ ಧರ್ಮಸ್ಥಳದಲ್ಲಿ ಇರುವಿಕೆ ಬಗ್ಗೆ ಮಾಹಿತಿ ತಲುಪಿತು. ಅದರನ್ವಯ ಮನೆ ಮಂದಿ ನೇರವಾಗಿ ಧರ್ಮಸ್ಥಳಕ್ಕೆ ತಲುಪಿದ್ದಾರೆ.




































