ನಾದಮಯ ಅಭಿವ್ಯಕ್ತಿ , ಚಿಂತನೆಯ ಪ್ರೌಢಿಮೆಯಿಂದ ಜೈಮಿನಿ ಭಾರತ ಸ್ಪೂರ್ತಿಯ ಆಕರ : ಡಾ . ಕಬ್ಬಿನಾಲೆ ವಸಂತ ಭಾರಧ್ವಾಜ

Picture of RB NEWS

RB NEWS

Bureau Report


ಕಾರ್ಕಳ : ಕನ್ನಡ ಕಾವ್ಯ ಪ್ರಪಂಚದಲ್ಲಿ ಲಕ್ಷ್ಮೀಶನ ಜೈಮಿನಿ ಭಾರತ ಹಲವು ನೆಲೆಗಳಿಂದ ಸ್ಪೂರ್ತಿಯ ಆಕರವಾಗಿದೆ .ಭಾಷಾ ಪಾಂಡಿತ್ಯದಿಂದ , ಅನುಪಮ ಕಲ್ಪನಾಶೀಲತೆಯಿಂದ , ಕಾವ್ಯದಲ್ಲಿನ ಪದಪ್ರಯೋಗ , ಪ್ರಾಸ ಸೌಂದರ್ಯ , ನಾದಮಯ ಅಭಿವ್ಯಕ್ತಿ , ಚಿಂತನೆಯ ಪ್ರೌಢತೆ ಇವೆಲ್ಲ ಮುಂಬರುವ ಹಲವು ತಲೆಮಾರುಗಳಿಗೆ ಸಹಸ್ರ ಕವಲುಗಳ ಒಂದು ದೊಡ್ಡ ಒರತೆಯಾಗಿದೆ ಎಂದು ವಿದ್ವಾಂಸ , ಅಷ್ಟಾವಧಾನಿ ಡಾ . ಕಬ್ಬಿನಾಲೆ ವಸಂತ ಭಾರದ್ವಾಜ ನುಡಿದರು .
ಅವರು ಗುಪ್ತಗಾಮಿನಿ ಸಾಹಿತ್ಯ ಶಾಲೆ ಈದು ಕಾರ್ಕಳ ವತಿಯಿಂದ ಅನಂತಶಯನ ವಿಶ್ವೇಶ್ವರ ವೇಣುಗೋಪಾಲ ದೇವಸ್ಥಾನದ ಸಭಾಂಗಣದಲ್ಲಿ ಅಭಿಜಾತ ಕವಯಿತ್ರಿ ಕೊಪ್ಪಲ ಸುಶೀಲಾಬಾಯಿ ನೆನಪಿನ ಕಾರ್ಯಕ್ರಮದಲ್ಲಿ ‘ ಜೈಮಿನಿ ಭಾರತ ಕಾವ್ಯ ಸೌಂದರ್ಯ ‘ ವಿಷಯದ ಕುರಿತು ಉಪನ್ಯಾಸ ನೀಡಿ ಮಾತನಾಡಿದರು .
ಕಾರ್ಕಳ ತಾಲೂಕು ಚಿತ್ಪಾವನ ಬ್ರಾಹ್ಮಣ ಸಮಾಜದ ಅಧ್ಯಕ್ಷ ರತ್ನಾಕರ ಮರಾಠೆ , ಗಾಯಕ ಅನಂತಪದ್ಮನಾಭ ಭಟ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು .
ಶ್ರಾವಣಿ ಶಾಸ್ತ್ರಿ ಸ್ವಾಗತಿಸಿದರು .ಕೆ . ಶ್ರೀಕರ ಭಟ್ ಪ್ರಾಸ್ತಾವಿಕ ಮಾತನಾಡಿದರು .ವಿಜಯನಾರಾಯಣ ಕಾರ್ಯಕ್ರಮ ನಿರ್ವಹಿಸಿದರು .ಜಗದೀಶ ಗೋಖಲೆ ವಂದಿಸಿದರು .

ಅಪರೂಪದ ಸರಸ್ವತಿ ಸ್ತುತಿ

ಅಭಿಜಾತ ಕವಯಿತ್ರಿ ಕೊಪ್ಪಲ ಸುಶೀಲಾ ಬಾಯಿ ಮರಾಠೆ ಅವರು ರಚಿಸಿರುವ ‘ ಗುಪ್ತಗಾಮಿನಿ ‘ ಕವನಸಂಕಲನದಿಂದ ಆಯ್ದ ‘ ಅಕ್ಷರಿ ಅವತರಿ
ಓಂಕಾರೇಶ್ವರಿ
ಅನುಪಮ ವಾಜ್ಮಯ ಗೋಚರಿಯೆ ;
ಸೃಷ್ಟಿ ವಿಧಾತನ ವೀಣೆಯ
ನಿ:ಸ್ವನ
ಪ್ರಣವ ಮುಖಾಂಬುಜ ರಂಜಿನಿಯೇ ‘ ಎಂದು ಸಾಗುವ ಪ್ರಾರ್ಥನಾ ಗೀತೆ ಸಭಾಂಗಣದಲ್ಲಿ ಉಪಸ್ಥಿತರಿದ್ದ ಸಾಹಿತ್ಯಾಸಕ್ತ ಶ್ರೋತೃಗಳ ಗಮನ ಸೆಳೆಯಿತು .
ಹರಿದಾಸ ಅನಂತಪದ್ಮನಾಭ ಭಟ್ ಅವರು ಗೀತೆಯನ್ನು ಹಾಡಿ ಅಲ್ಲಿನ ಛಂದೋಬಂಧ , ಪದಲಾಲಿತ್ಯ , ಕಾವ್ಯಮಯ ಅಭಿವ್ಯಕ್ತಿಯ ಚೆಲುವನ್ನು ಬಣ್ಣಿಸಿದ್ದು ಸಭಾಸದರಿಗೆ ರಸಮಯ ಅನುಭವವಾಯಿತು .

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top