ನಾಟಾ ಪರೀಕ್ಷೆಯಲ್ಲಿ ಕ್ರಿಯೇಟಿವ್ ಸಂಸ್ಥೆಯ 4 ವಿದ್ಯಾರ್ಥಿಗಳು ಟಾಪ್ 100ರೊಳಗೆ
RB NEWS
Bureau Report
ನಾಟಾ ಪರೀಕ್ಷೆಯಲ್ಲಿ ಕ್ರಿಯೇಟಿವ್ ಸಂಸ್ಥೆಯ 4 ವಿದ್ಯಾರ್ಥಿಗಳು ಟಾಪ್ 100ರೊಳಗೆ
ಕಾರ್ಕಳ: ಕೌನ್ಸಿಲ್ ಆಫ್ ಆರ್ಕಿಟೆಕ್ಟರ್ ನಡೆಸಿದ ನಾಟಾ (NATA) ಪರೀಕ್ಷೆಯ ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರಕಟಿಸಿದ್ದು, ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ವಿದ್ಯಾರ್ಥಿಗಳು ಆರ್ಕಿಟೆಕ್ಚರ್ ವಿಭಾಗದಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ. ಸಂಸ್ಥೆಯ ವಿದ್ಯಾರ್ಥಿನಿ ಭೂಮಿಕಾ ವೈ ಅವರು ರಾಜ್ಯ ಮಟ್ಟದಲ್ಲಿ 38ನೇ ರ್ಯಾಂಕ್ ಪಡೆದು ಕೀರ್ತಿ ತಂದಿದ್ದಾರೆ. ಜೊತೆಗೆ ಪ್ರಣವ್ ಕುಲಕರ್ಣಿ (79), ಸಮೃದ್ಧ್ ಪಿ. ಶೆಟ್ಟಿ (91), ಪ್ರಾರ್ಥನಾ ಎಂ. (99) ಟಾಪ್ 100ರೊಳಗೆ ಸ್ಥಾನ ಪಡೆದು ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇನ್ನೂ ಅದಿತಿ ನಂದೀಶ್ (107), ಕುಶಾಲ್ ಎಲ್. (115), ಹೆಚ್. ಎಸ್. ಆದ್ಯ (163), ಅಜಯ್ ಕೆ. ಎನ್. (181) ಹಾಗೂ ಜ್ಯೋತಿ ಎಸ್. (211) ಉತ್ತಮ ರ್ಯಾಂಕ್‌ಗಳನ್ನು ಗಳಿಸಿದ್ದಾರೆ. ರಾಷ್ಟ್ರಮಟ್ಟದ ಆರ್ಕಿಟೆಕ್ಚರ್ ಪ್ರವೇಶ ಪರೀಕ್ಷೆಯಾದ NATAಗೆ ಕ್ರಿಯೇಟಿವ್ ವಿದ್ಯಾ ಸಂಸ್ಥೆ ನೀಡುತ್ತಿರುವ ಗುಣಮಟ್ಟದ ತರಬೇತಿ ವಿದ್ಯಾರ್ಥಿಗಳ ಈ ಸಾಧನೆಗೆ ಕಾರಣವಾಗಿದೆ ಎಂದು ಸಂಸ್ಥೆ ತಿಳಿಸಿದೆ. ವಿದ್ಯಾರ್ಥಿಗಳ ಸಾಧನೆಯನ್ನು ಸಂಸ್ಥೆಯ ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ ಹಾಗೂ ಬೋಧಕೇತರ ವೃಂದದವರು ಹಾಗೂ ಸಂಯೋಜಕರಾದ ಸುಮಂತ್ ದಾಮೈ ಅವರು ಅಭಿನಂದಿಸಿದ್ದಾರೆ.