ನಾಗರ ಪಂಚಮಿ ಶುಭ ದಿನ -ಕೆ.ಸುಬ್ರಮಣ್ಯ ಆಚಾರ್ಯ

Picture of RB NEWS

RB NEWS

Bureau Report

 ನಾಗರ ಪಂಚಮಿ ಶುಭ ದಿನ, 
ಪ್ರತಿ ವರ್ಷದಂತೆ ಈ ವರ್ಷವೂ ನಾವು ಕುಟುಂಬಸ್ಥರು ಸೇರಿಕೊಂಡು ತಂಬಿಲ ಸೇವೆಯನ್ನು ಮಾಡಿಸುತ್ತಿದ್ದೇವೆ.ಸಂತೋಷದಿಂದ ಸ್ವೀಕಾರ ಮಾಡಿಕೊಂಡು ನಮ್ಮ ಕುಟುಂಬಕ್ಕೆ ಬರುವ ಯಾವುದೇ ನಾಗದೇವರಿಗೆ ಸಂಬಂಧಿತ ದೋಷಗಳನ್ನು ಪರಿಹರಿಸಿಕೊಡಿ.(ಯಾರಿಗಾದರೂ ಸಂತಾನದ ಸಮಸ್ಯೆ ಇದ್ದರೆ, ಅನಾರೋಗ್ಯದ ಸಮಸ್ಯೆ ಇದ್ದರೆ ಅದನ್ನು ಸೇರಿಸಿ ಕೊಳ್ಳುವುದು)ನಂತರ ಮಂಗಳಾರತಿ, ಮೂರು ಪ್ರದಕ್ಷಿಣೆ ಬಂದು ನಮಸ್ಕಾರ ಮಾಡುವುದು,ಪ್ರಸಾದ ವಿತರಣೆ, ಅರ್ಚಕರಿಗೆ ದಕ್ಷಿಣೆ ಅರ್ಪಣೆ, ಪುರಾಣದ ಕಥೆಯಂತೆ, ಪಾಂಡ್ಯ ದೇಶದ ವೇದ ಶರ್ಮಾ ಎಂಬ ಬ್ರಾಹ್ಮಣನಿಗೆ 8 ಗಂಡು ಮಕ್ಕಳಿದ್ದರು. ಸುಶೀಲೆ ಎಂಬ ಒಬ್ಬಳು ಹೆಣ್ಣು ಮಗಳು ಇದ್ದಳು ತುಂಬಾ ಬಡತನದ ಸಂಸಾರ. ಗರುಡನಿಗೆ ಹೆದರಿ ನಾಗರ ಹಾವೊಂದು ಸುಶೀಲೆಯ ಬಳಿ ಬಂದಿತು. ಸುಶೀಲೆ ನಿತ್ಯವೂ ಹಾಲುಣಿಸಿ ಸಾಕುತ್ತಿದ್ದಳು.ಅದು ಚಿನ್ನದ (ಒಂದು ತೂಕ) ನಾಣ್ಯವನ್ನು ಕೊಡುತ್ತಿತ್ತು. ಬಡತನ ನಿವಾರಣೆ ಆಗಿತ್ತು.ಸಹೋದರನೊಬ್ಬ ಹೆಚ್ಚು ಚಿನ್ನವನ್ನು ಕೊಡಬೇಕೆಂದು ಹಾವಿಗೆ ಒದ್ದನು. ಹಾವು ಎಲ್ಲಾ ಸಹೋದರರನ್ನು ಕಚ್ಚಿ ಸಾಯಿಸಿತು.ಮತ್ತು ಅಲ್ಲಿಂದ ಹೊರಟು ಹೋಯಿತು. ಸುಶೀಲೆ ಬೇಸರಗೊಂಡು ತಾನೂ ಸಾಯಲು ನಿರ್ಧಾರ ಮಾಡಿದಾಗ ವಿಷ್ಣು ದೇವರು ಗರುಡನ ಮೇಲೇರಿ ಬಂದು ಸರ್ಪರಾಜನಲ್ಲಿ," ಸಂಜೀವಿನಿ ರಸವನ್ನು ತಂದು ಸತ್ತ ಸಹೋದರರನ್ನು ಬದುಕಿಸು, ಅಪಾರ ಸಂಪತ್ತನ್ನು ಈ ಕುಟುಂಬಕ್ಕೆ ಕರುಣಿಸು, "ಎಂದನು. ಹಾಗೆಯೇ ಈ
ದಿನದಂದು," ಶ್ರಾವಣ ಮಾಸದ ಶುಕ್ಲ ಪಕ್ಷದ ಪಂಚಮಿಯಂದು ನಿನಗೆ ಪೂಜೆ ಮಾಡುವ ಎಲ್ಲರಿಗೂ ಸಂತಾನ ಅಭಿವೃದ್ಧಿ, ಸರ್ವ ಕಾರ್ಯ ಸಿದ್ದಿ ಯಾಗಿ ಅವರು ಮಾಡುವ ಪೂಜೆಯನ್ನು ಸಾಕ್ಷಾತ್ ನಾನೇ ಸ್ವೀಕಾರ ಮಾಡುವೆನು ಎಂದು ವಿಷ್ಣು ದೇವರು ವಾಸುಕಿಗೆ ಹೇಳುತ್ತಾರೆ. ಇಂತಹ, ವರ್ಷದಲ್ಲಿ ಒಮ್ಮೆ ಬರುವ
ಬಹಳ ಅಪರೂಪದ ಈ ದಿನದಲ್ಲಿ ಬಹಳ ಒಳ್ಳೆಯ ರೀತಿಯಲ್ಲಿ
ಕುಟುಂಬಕ್ಕೆ ಕರುಣಿಸು, "ಎಂದನು. ಹಾಗೆಯೇ ಈ ದಿನದಂದು," ಶ್ರಾವಣ ಮಾಸದ ಶುಕ್ಲ ಪಕ್ಷದ ಪಂಚಮಿಯಂದು ನಿನಗೆ ಪೂಜೆ ಮಾಡುವ ಎಲ್ಲರಿಗೂ ಸಂತಾನ ಅಭಿವೃದ್ಧಿ, ಸರ್ವ ಕಾರ್ಯ ಸಿದ್ದಿ ಯಾಗಿ ಅವರು ಮಾಡುವ ಪೂಜೆಯನ್ನು ಸಾಕ್ಷಾತ್ ನಾನೇ ಸ್ವೀಕಾರ ಮಾಡುವೆನು ಎಂದು ವಿಷ್ಣು ದೇವರು ವಾಸುಕಿಗೆ ಹೇಳುತ್ತಾರೆ. ಇಂತಹ, ವರ್ಷದಲ್ಲಿ ಒಮ್ಮೆ ಬರುವ ಬಹಳ ಅಪರೂಪದ ಈ ದಿನದಲ್ಲಿ ಬಹಳ ಒಳ್ಳೆಯ ರೀತಿಯಲ್ಲಿ ಪೂಜೆಯನ್ನು ನಾವೆಲ್ಲರೂ ಮಾಡಿಸಿ ಈ ಜನ್ಮ ಸಾರ್ಥಕ ಮಾಡಿ ಕೊಳ್ಳೋಣ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top