
ಭರದಿಂದ ಸಾಗುತ್ತಿರುವ ಕುಡಿಯುವ ನೀರಿನ ಪೈಪ್ ಲೈನ್ ದುರಸ್ತಿಕಾರ್ಯ
ಕಾರ್ಕಳ : ಬೆಳುವಾಯಿ- ಸಾಣೂರು ನಡುವೆ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 169ರ ಅಭಿವೃದ್ಧಿ ಕಾಮಗಾರಿಯ ಸಂದರ್ಭದಲ್ಲಿ ಸಾರ್ವಜನಿಕರ ಮೂಲ ಸೌಕರ್ಯಗಳಲ್ಲಿ ಒಂದಾದ ಕುಡಿಯುವ ನೀರಿನ ಪೈಪ್ ಕಿತ್ತು ಹಾಕಿ ದುರಸ್ತಿ ಪಡಿಸುವಲ್ಲಿ ಹಿಂದೇಟು ಹಾಕಲಾಗಿತ್ತು.ಇದರ ವಿರುದ್ಧ ಗ್ರಾಮಸ್ಥರು ಆಕ್ರೋಶಗೊಂಡಿದ್ದು, ಚುನಾವಣೆಯ ಕಾಲಘಟ್ಟದಲ್ಲಿ ಹೋರಾಟಕ್ಕೆ ಮುಂದಾಗಿರುವ ಕುರಿತು ಆರ್.ಬಿ.ನ್ಯೂಸ್ ಸಮಗ್ರ ವರದಿ ಪ್ರಕಟಿಸಿ ಜಿಲ್ಲಾಡಳಿತವನ್ನು ಎಚ್ಚರಿಸಿದ ಬೆನ್ನಲ್ಲೇ ದಿಲೀಪ್ ಬಿಲ್ಡ್ ಕಾಲ್ ಗುತ್ತಿಗೆದಾರ ಕಂಪನಿಯ ಕಾರ್ಮಿಕರು ಸಮರೋಪಾದಿಯಲ್ಲಿ ಕುಡಿಯುವ ನೀರಿನ ಪೈಪ್ ಲೈನ್ ದುರಸ್ತಿ ಮತ್ತುಶಾಶ್ವತವಾಗಿ ಕುಡಿಯುವ ನೀರಿನ ಪೈಪ್ ಲೈನ್ ಅನ್ನು ಚರಂಡಿ ತೆಗೆದು ಭೂತಳದಲ್ಲಿ ಜೋಡಣೆ ಮಾಡುವ ಕಾಮಗಾರಿ ನಡೆಸುತ್ತಿದ್ದಾರೆ.
ಕಳೆದ ಒಂದು ವಾರದಿಂದ ರಾಷ್ಟ್ರೀಯ ಹೆದ್ದಾರಿ ಗುತ್ತಿಗೆದಾರ ಕಂಪನಿ ದಿಲೀಪ್ ಬಿಲ್ಡ್ ಕಾನ್ ನಿರ್ಲಕ್ಷ ಧೋರಣೆ ಮತ್ತು ಬೇಜವಾಬ್ದಾರಿತನದಿಂದಾಗಿ ಗ್ರಾಮಸ್ಥರು ಕುಡಿಯುವ ನೀರಿಗಾಗಿ ಪರದಾಡುವಂತ ಪರಿಸ್ಥಿತಿ ಎದುರಿಸುತ್ತಿದ್ದರು.
.ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿಯೇ ಭೂತಳದಲ್ಲಿ ಅಳವಡಿಸಿದ್ದ ಕುಡಿಯುವ ನೀರಿನ ಪೈಪ್ ಲೈನ್ ಕಿತ್ತು ಹಾಕಿ ಹಾನಿಗೊಂಡ ಪರಿಣಾಮ ಲಕ್ಷಾಂತರ ಲೀ. ಕುಡಿಯುವ ನೀರು ದಿನಪೂರ್ತಿ ಪೋಲಾಗಿತ್ತು.
ರಾಷ್ಟ್ರೀಯ ಹೆದ್ದಾರಿ -169 ಹೋರಾಟ ಸಮಿತಿಯ ಪ್ರಮುಖ ಸಾಣೂರು ನರಸಿಂಹ ಕಾಮತ್ ರವರು ಗುತ್ತಿಗೆದಾರ ಕಂಪನಿ ಸೂಕ್ತವಾಗಿ ಜನರಿಗೆ ಸ್ಪಂದಿಸದಿದ್ದರೆ ಬೀದಿಗಿಳಿದು ಪ್ರತಿಭಟಿಸುವುದಾಗಿ ಎಚ್ಚರಿಕೆ ನೀಡಿದ್ದರು.


























