ವಾರ ಭವಿಷ್ಯ ದಿನಾಂಕ 29.09.2024 ರಿಂದ 05.10.2024 ರ ವರೆಗೆ
ವಿಶೇಷ ದಿನಗಳು : 02.10.2024………ಮಹಾಲಯ ಅಮಾವಾಸ್ಯಾ ,ಸರ್ವ ಪಿತೃ ದರ್ಶ
03.10.2024………ನವರಾತ್ರಾರಂಭ:
ಮೇಷ : ಉತ್ತಮ ದೈವಾನುಗ್ರಹವಿರುವ ಸಮಯವಾಗಿರುವುದರಿಂದ ನೀವು ಮಾಡುತ್ತಿರುವ ಯಾವುದೇ ವ್ಯವಹಾರ ಉದ್ಯೋಗದಲ್ಲಿ ಸದ್ಯದಲ್ಲಿಯೇ ಮರುಚೈತನ್ಯ ಹೊಂದುವ ಸೂಚನೆ ತೋರಿಬರಲಿದೆ. ಆಗಾಗ ಆರ್ಥಿಕವಾಗಿ ಖರ್ಚು ವೆಚ್ಚಗಳೇ ಅಧಿಕ ರೂಪದಲ್ಲಿ ಕಂಡುಬಂದರೂ ಗುರು ದ್ವಿತೀಯಾದಲ್ಲಿ ಇದ್ದುಕೊಂಡು ಯಶಸ್ಸನ್ನು ಕೊಡಲಿದ್ದಾನೆ .ಶನಿ ಲಾಭ ಕ್ಷೇತ್ರದಲ್ಲಿ ಇರುವುದರಿಂದ ಬರುವ ಆದಾಯಕ್ಕೆ ಕೊರತೆ ಇರುವುದಿಲ್ಲ.ತಾಯಿಯವರ ಮನಸ್ಸಿಗೆ ಬೇಸರ ಮಾಡದಿರಿ .”ಕುಮಾತಾ ನ ಭವತಿ “ಈ ಜಗತ್ತಿನಲ್ಲಿ ಕೆಟ್ಟ ತಾಯಿ ಇರುವುದಿಲ್ಲ .ಮಹತ್ವದ ಕೆಲಸದ ಬಗ್ಗೆ ಚೈಂಟನೆಯನ್ನು ಮಾಡುವಿರಿ .ದುರ್ಗೆಯ ಆರಾಧನೆ ಮಾಡಿರಿ .
ವೃಷಭ : ನಿಮ್ಮ ರಾಶ್ಯಾಧಿಪತಿ ಶುಕ್ರ 6 ನೇ ಮನೆಯಲ್ಲಿ ಇರುವುದರಿಂದ ನಿಮ್ಮ ಕಾರ್ಯ ಕ್ಷೇತ್ರದಲ್ಲಿ ಇತರರ ಕಾಯುವಿಕೆಯೇ ಸಮಯ ವ್ಯರ್ಥವಾಗಲು ,ಕಾರಣವಾಗುತ್ತದೆ .ದ್ವಿತೀಯದ ಕುಜ ನಿಮ್ಮ ತಾಳ್ಮೆಯ ಮಿತಿ ತಪ್ಪುವಂತೆ ಮಾಡುತ್ತಾನೆ .ಗುರುವಿನ ಅನುಗ್ರಹ ಇರುವ ಕಾರಣ ಹೊಸ ಜನರ ,ಪ್ರತಿಷ್ಟಿತರ ಸಹಕಾರ ಪಡೆಯಲು ಇದು ಸಕಾಲವಾಗಿದೆ .ನಿಮ್ಮ ಖಾಸಗಿ ಬದುಕಿಗೆ ಸ್ವಲ್ಪ ಗಮನ ಹರಿಸಿದರೆ ಒಳ್ಳೆಯದು .ವಿವಾಹಿತರಿಗೆ ಸಂತಾನ ಪ್ರಾಪ್ತಿ ಯೋಗವಿದೆ .ಅವಿವಾಹಿತರಿಗೆ ಯೋಗ್ಯ ರೀತಿಯ ವಿವಾಹ ಪ್ರಸ್ತಾಪಗಳು ಬರುವ ಸಾಧ್ಯತೆಗಳು ಇವೆ. ಕೃಷಿ ,ಪಶು ಹೈನುಗಾರಿಕೆಯ ಉದ್ಯಮಿಗಳಿಗೆ ನಷ್ಟ ಬರುವ ಸೂಚನೆ ಇರುವುದರಿಂದ ಎಚ್ಚರಿಕೆ ಅಗತ್ಯ .ಚಿತ್ರೋದ್ಯಮ ಸಧ್ಯಕ್ಕೆ ಬೇಡ .
ಮಿಥುನ : ಗುರು ವ್ಯಯದಲ್ಲಿ ,ರವಿ ಮತ್ತು ಕೇತು ಸುಖ ಸ್ಥಾನದಲ್ಲಿ ,ಜನ್ಮ ರಾಶಿಯಲ್ಲಿ ಕುಜನಿರುವುದರಿಂದ ,ನಿಮ್ಮ ಜೀವನದಲ್ಲಿ ಯಾವುದೇ ವ್ಯವಹಾರದಲ್ಲಿ ಗುರಿಯನ್ನು ಮುಟ್ಟಲು ಕಷ್ಟವಾಗುತ್ತದೆ . ವೈರಾಗ್ಯದ ಜೀವನವಾಗಲಿದೆ .ಅನಾರೋಗ್ಯದ ಕಾರಣ ಜೀವನ ವಿಶ್ರಾಂತಿಯನ್ನು ಕೇಳಲಿದೆ .ಉದ್ಯೋಗದ ವಿಷಯದಲ್ಲಿ ಆಶಾದಾಯಕವಾಗಿರುತ್ತದೆ .ಕೌಟುಂಬಿಕವಾಗಿ ಸಣ್ಣ ಸಣ್ಣ ಭಿನ್ನಾಭಿಪ್ರಾಯಗಳು ಕಲಹಕ್ಕೆ ನಾಂದಿ ಆದೀತು .ವಿದ್ಯಾರ್ಥಿಗಳಿಗೆ ನಿರೀಕ್ಷಿತ ಮಟ್ಟಕ್ಕೆ ಪ್ರಯತ್ನ ಸಾಕಾಗ ಲಾರದು .ನಿಮ್ಮ ಕಾಲಿನ ಅನಾರೋಗ್ಯ ಮಾನಸಿಕ ಖಿನ್ನತೆಯನ್ನು ತರಲಿದೆ . ಧೈರ್ಯವಾಗಿರಿ .
ಕರ್ಕಾಟಕ : ಗುರುವಿನ ಅನುಗ್ರಹ ಅತ್ಯುತ್ತಮವಾಗಿದೆ .ಬರುತ್ತಿರುವ ಆದಾಯದಲ್ಲಿ ಅಭಿವೃದ್ಧಿಯಾಗಿ ಪ್ರತಿಯೊಂದು ವಿಷಯವೂ ನಿಮ್ಮ ಎಣಿಕೆಯಂತೆ ನಡೆಯಲಿದೆ .ಶುಕ್ರ ಸುಖ ಸ್ಥಾನದಲ್ಲಿ ಸ್ವಕ್ಷೇತ್ರದಲ್ಲಿ ಭಾಧಕಾಧಿಪತಿಯಾಗಿ ಇರುವುದರಿಂದರಿಂದ ಮನಸ್ಸಿನಲ್ಲಿ ಉಳಿಯುವ ಘಟನೆಗಳು ನಡೆಯಲಿವೆ .ಅಮ್ಮನವರ ವಿಷಯದಲ್ಲಿ ಗಮನವಿರಲಿ .ವ್ಯಾಪಾರಿಗಳಿಗೆ ತಮ್ಮ ವೃತ್ತಿಯಲ್ಲಿ ಯೋಜನಾಬದ್ಧವಾದ ಕಾರ್ಯತಂತ್ರಗಳ ರೂಪಣೆ ಅಗತ್ಯವಿದೆ .ಅವಿವಾಹಿತರ ಮಂಗಳ ಕಾರ್ಯಕ್ಕೆ ಇದು ಸಕಾಲವಾಗಿದೆ .ಗೃಹ ,ಭೂಮಿ ,ವಾಹನ ಖರೀಧಿಗೆ ಇದು ಸಕಾಲವಾಗಿದೆ .ಅಷ್ಟಮದ ಶನಿಯ ನೆನಪು ಸದಾ ಇರುತ್ತದೆ .29.03.2025 ಶನಿಯ ಬಿಡುಗಡೆಯ ದಿನವಾಗಿದೆ .
ಸಿಂಹ : ಗುರು ಕರ್ಮ ಕ್ಷೇತ್ರದಲ್ಲಿ ಇರುವುದು ಹೆಚ್ಚು ಪ್ರಯೋಜನಕಾರಿಯಾಗುವುದಿಲ್ಲ .ವೃತ್ತಿರಂಗದಲ್ಲಿ ನಿಮ್ಮ ಗುರಿ ಮುಟ್ಟುವ ಚಲದ ಮುಂದೆ ಯಾವ ತಡೆಯೂ ನಿಲ್ಲಲಾರದು .ನಿಮ್ಮ ತಾಕತ್ತು ನಿಮ್ಮನ್ನು ಯಶಸ್ಸಿನ ಕಡೆಗೆ ಕೊಂಡೊಯ್ಯಲಿದೆ .ಶನಿ ಸಪ್ತಮದಲ್ಲಿ ಇದ್ದುಕೊಂಡು ಮನಸ್ಸನ್ನು ಚಂಚಲಗೊಳಿಸಲಿದೆ .ನಿಮ್ಮ ಮನಸ್ಸು ಧನಾತ್ಮಕ ಚಿಂತನೆಯ ಕಡೆಗೆ ಸಾಗಲಿ . ಹೋಟೆಲ್ .ಚಲನ ಚಿತ್ರ ,ಉದ್ಯಮದವರಿಗೆ ತಕ್ಕಮಟ್ಟಿಗೆ ಸಂಪಾದನೆ ಇರಲಿದೆ .ವಿವಾಹ ಸಂಬಧಿತ ವಿಚಾರಗಳಲ್ಲಿ ಹೆಚ್ಚಿನ ಪ್ರಯತ್ನ ಅಗತ್ಯವಿದೆ .ಪಿತ್ತ ಪಕೋಪವನ್ನು ವ್ಯಯದ ಕುಜ ತರಲಿದ್ದು ಗಂಟಲು ನೋವು ಬರುವ ಸಾಧ್ಯತೆ ಇರುತ್ತದೆ .ತಂಪು ಪದಾರ್ಥದಿಂದ ದೂರವಿರುವುದು ಒಳ್ಳೆಯದು .
ಕನ್ಯಾ : ದೈವಾನುಗ್ರಹ ಉತ್ತಮವಾಗಿ ಇರುವ ನಿಮಗೆ ,ಎಚ್ಚರಿಕೆ ಹಾಗೂ ಜವಾಬ್ದಾರಿ ಒಂದೇ ನಾಣ್ಯದ ಎರಡು ಮುಖಗಳಾಗಿ ನಿಮಗೆ ಅಗತ್ಯವಾಗಿದೆ ಇರುವೆಗೆ ಇರುವೆಯ ಚಿಂತೆ ಯಾದರೆ ಆನೆಗೆ ಆನೆಯ ಚಿಂತೆ ನಿಮಗೆ ನೀವೇ ಕಣ್ಗಾವಲು .ಜನ್ಮ ರಾಶಿಯಲ್ಲಿ ರವಿ ಮತ್ತು ಕೇತು ,ಸಪ್ತಮದಲ್ಲಿ ರಾಹು ಸಂಸಾರದಲ್ಲಿ “ಅಹಂ “ನಮಗೆ ತೊಂದರೆ ಕೊಡಲಿದೆ ,ನಿಮ್ಮ ಜೀವನ ಶೀಲಿ ಬದಲಾಯಿಸಿ ಕೊಳ್ಳಿರಿ .ಧನಾಗಮನ ತೊಂದರೆ ಇಲ್ಲವಾದರೂ ಖರ್ಚು ವೆಚ್ಚಗಳನ್ನು ನಿಯತ್ರಿಸಬೇಕಾದೀತು .ದಿನಾಂಕ 10.10.2024 ರ ನಂತರ ವಿದ್ಯಾರ್ಥಿಗಳಿಗೆ ಶುಭವಾಗಲಿದೆ .
ತುಲಾ : ಗುರು ಅಷ್ಟಮದಲ್ಲಿ ಇದ್ದಾನೆ .ಶುಕ್ರ ಜನ್ಮ ರಾಶಿಯಲ್ಲಿ ಇದ್ದಾನೆ .ಪಂಚಮದಲ್ಲಿ ಶನಿ ಇದ್ದಾನೆ .ಪರಿಹಾರ ಮಾಡಿಕೊಳ್ಳುವ ಅವಶ್ಯಕತೆ ಇದೆ .ಯಾವುದೇ ವ್ಯವಹಾರದಲ್ಲಿ ಹಿರಿಯರ ಸಲಹೆ ಅಗತ್ಯವಿದೆ .ಮಕ್ಕಳೊಂದಿಗೆ ಮಕ್ಕಳಾಗಿ ಇರುವುದನ್ನು ಕಲಿತು ಕೊಳ್ಳಬೇಕಾಗಿದೆ . ಆರ್ಥಿಕವಾಗಿ ವ್ಯಾಪಾರ-ವ್ಯವಹಾರಗಳ ನಿರ್ವಹಣೆಯಲ್ಲಿ ವ್ಯರ್ಥ ಖರ್ಚು ಬರದಂತೆ ಎಚ್ಚರವಹಿಸಬೇಕು .ಅಲರ್ಜಿ ಬರುವ ಸಾಧ್ಯತೆ ಇದೆ .ವೃತ್ತಿರಂಗದಲ್ಲಿ ಹೊಸತನ ರೂಢಿಸಿ ಕೊಳ್ಳಿರಿ .ಕಳಂಕಿತರ ಜೊತೆಗೆ ವ್ಯವಹಾರ ಮಾಡಲು ಹೋಗಬೇಡಿರಿ .ವಿದ್ಯಾರ್ಥಿಗಳು ಭಾವೋದ್ವೇಗಕ್ಕೆ ಗುರಿಯಾಗದಂತೆ ಎಚ್ಚರ ವಹಿಸಿರಿ .ಶುಭ ಕೆಲಸಗಳು ಮೇ16 ರ ನಂತರ ನಡೆಸಿರಿ .
ವೃಶ್ಚಿಕ : ಗುರು ಸಪ್ತಮದಲ್ಲಿ ಇದ್ದು ಗುರುವಿನ ಅನುಗ್ರಹ ನಿಮಗಿರುತ್ತದೆ .ಕುಜ ಅಷ್ಟಮದಲ್ಲಿ ಇದ್ದಾನೆ .ಶನಿ ಸುಖ ಸ್ಥಾನದಲ್ಲಿ ಇದ್ದಾನೆ .ಇನ್ನೂ ಕೆಲವೇ ದಿನದಲ್ಲಿ ಶುಕ್ರ ಜನ್ಮರಾಶಿಗೆ ಬರಲಿದ್ದಾನೆ .ಅನ್ಯ ಮಹಿಳೆಯರ ಬಗ್ಗೆ ಬಹಳ ಎಚ್ಚರವಾಗಿರಬೇಕು .ಅಪವಾದ ಕಟ್ಟಿಟ್ಟ ಬುತ್ತಿಯಾಗಿರುತ್ತದೆ ದುರ್ಗೆಯ ಪಾರಾಯಣ ಮಾಡಿರಿ .ಅನಗತ್ಯ ಒತ್ತಡಗಳು ಬರಲಿವೆ .ವಿವಾಹದ ನಿರೀಕ್ಷೆಯಲ್ಲಿ ಇರುವವರಿಗೆ ಕಂಕಣ ಭಾಗ್ಯ ಕೂಡಿ ಬರಲಿದೆ .ಪ್ರೀತಿ ಪ್ರೇಮಕ್ಕೆ ಬಲಿಯಾಗಬೇಡಿರಿ .ಜೀವನದಲ್ಲಿ ನಂಬಿಕೆ ,ಸಿದ್ಧಾಂತಕ್ಕೆ ವಂಚಿಸದಿರಿ .ಸಮತೋಲನ ಜೀವನ ಅಗತ್ಯವಿದೆ .ನಿಮ್ಮ ಕುಟುಂಬ ಹಾಗೂ ನಿಮ್ಮ ನಡುವಿನ ಬಾಂಧವ್ಯವನ್ನು ಗಟ್ಟಿ ಗೊಳಿಸಿರಿ .ಅನಿರೀಕ್ಷಿತ ಮೂಲಗಳಿಂದ ಅದೃಷ್ಟ ಪ್ರಾಪ್ತಿ ಯೋಗವಿದೆ .
ಧನು : ಗುರುವಿನ ಅನುಗ್ರಹದ ಕೊರತೆ ಇರುತ್ತದೆ .ಕುಜ ಸಪ್ತಮದಲ್ಲಿ ,ರಾಹು ಸುಖ ಸ್ಥಾನದಲ್ಲಿ ಇರುವುದರಿಂದ ಆರೋಗ್ಯದ ಬಗ್ಗೆ ಎಚ್ಚರವಿರಲಿ .ಸಂಗಾತಿಯ ಜೊತೆಗೆ ಹೊಂದಾಣಿಕೆ ಇರಲಿ .ಎಲ್ಲಿಯೂ ನಿಮ್ಮ ಸ್ವಾಭಿಮಾನ ಗೌರವಕ್ಕೆ ಅಡ್ಡಿಯಾಗದಂತೆ ವರ್ತಿಸಿರಿ .ನಿಮ್ಮ ಮೂಲ ಸ್ವಭಾವಕ್ಕೆ ವಿರುದ್ಧವಾಗಿ ಖರ್ಚು-ವೆಚ್ಚಗಳು ಹೆಚ್ಚಾಗಲಿವೆ. ವೃತ್ತಿ ರಂಗದಲ್ಲಿ ಹೆಚ್ಚಿನ ಹೊಣೆಗಾರಿಕೆ ಹೊರಬೇಕಾಗುತ್ತದೆ .ಶನಿ ಬುಧ ಇವರು ಹೆಚ್ಚಿನ ಧನ ಆದಾಯವನ್ನು ಕೊಟ್ಟರೂ ಖರ್ಚು ವೆಚ್ಚಗಳು ಹೆಚ್ಚಾಗಲಿವೆ . ಧ್ಯಾನ –ಪ್ರಾಣಾಯಾಮ ಮಾಡುತ್ತಾ ಬನ್ನಿರಿ .ಶಿವ ಸಹಸ್ರನಾಮ ಪಾರಾಯಣ ಮಾಡುತ್ತಾ ಬನ್ನಿರಿ .
ಮಕರ : ಉತ್ತಮ ದೈವಾನುಗ್ರಹ ಇರುವುದರಿಂದ ನಿಮ್ಮ ಕಾರ್ಯ ಕ್ಷೇತ್ರದಲ್ಲಿ ಸಮರ್ಥ ಕಾರ್ಯ ನಿರ್ವಹಣೆ ಜನ ಮೆಚ್ಚುಗೆಗೆ ಪಾತ್ರವಾದೀತು .ಕೆಲವೊಮ್ಮೆ ಕಾರ್ಯಗಳ ಒತ್ತಡದಿಂದ ದ್ವಂದ್ವ ವಿಚಾರಗಳು ತೋರಿಬರಲಿವೆ . ವೃತ್ತಿರಂಗದಲ್ಲಿ ಕೆಲವೊಮ್ಮೆ ಎಡವಿದ ಅನುಭವಾಗಲಿದೆ .ಲಾಭದಾಯಕ ಆದಾಯದ ಮಾರ್ಗಸೂಚಿ ನಿಮ್ಮ ಮುಂದಿರುತ್ತದೆ .ದ್ವಿತೀಯಾದ ಶನಿ ಖರ್ಚು ವೆಚ್ಚಗಳ ಹಿಡಿತ ಮಾತಿನ ಮೇಲೆ ಹಿಡಿತ ಸಾಧಿಸುವಂತೆ ತಿಳಿಸುತ್ತಿದ್ದಾನೆ .ಪಂಚಮದ ಕುಜ ಆರೋಗ್ಯದ ಬಗ್ಗೆ ಗಮನ ಹರಿಸುವಂತೆ ತಿಳಿಸುತ್ತಿದ್ದಾನೆ ವ್ಯಾಯಾಮ ಮಾಡಲು ಆರಂಭಿಸಿರಿ .ವಿದ್ಯಾರ್ಥಿಗಳು ಯಶಸ್ವಿಯಾಗುವಿರಿ .
ಕುಂಭ : ನಿಮ್ಮ ರಾಶ್ಯಾಧಿಪತಿ ಶನಿ ,ಜನ್ಮ ರಾಶಿಯಲ್ಲಿಯೇ ಇದ್ದಾನೆ ,ಸಾಡೇ ಸಾತ್ ಶನಿ ತನ್ನ ಪ್ರಭಾವವನ್ನು ತೋರಿಸಲಿದ್ದಾನೆ .ಹಣ ಕಾಸಿನ ವಿಚಾರದಲ್ಲಿ ಆಡಂಬರ ,ವ್ಯರ್ಥ ಖರ್ಚು ಬರದಂತೆ ಎಚ್ಚರವಹಿಸಿರಿ .ವಿವಾದಗಳು ಕೌಟುಂಬಿಕ ವಿಚಾರದಲ್ಲಿ ಅಶಾಂತಿಯನ್ನು ಉಂಟು ಮಾಡಲಿದೆ .ರವಿ ಮತ್ತು ಕೇತು ಅಷ್ಟಮದಲ್ಲಿ ಇರುವುದರಿಂದ ನಿತ್ಯವೂ ಮೃತ್ಯುಂಜಯ ಜಪವನ್ನು ಹೇಳುವುದು ಅಗತ್ಯವಾಗಿದೆ .ವಿದೇಶಕ್ಕೆ ಹೋಗುವ ಸಾಧ್ಯತೆ ಇದೆ .ಸಂಗಾತಿಯೊಂದಿಗೆ ಮನಸ್ತಾಪ ನಿರೀಕ್ಷಿತ . ಯಾವುದೇ ವಿವಾದದೊಳಗೆ ಸೀಳುಕದಂತೆ ದೂರವಿದ್ದಷ್ಟೂ ಉತ್ತಮ .ನಿರುದ್ಯೋಗಿಗಳಿಗೆ ಉದ್ಯೋಗದ ಅವಕಾಶ ಬಂದಾಗ ಸೇರಿಕೊಳ್ಳುವುದು ಅಗತ್ಯವಾಗಿದೆ .
ಮೀನ : ದೈವಾನುಗ್ರಹದ ಕೊರತೆ ಇರುವುದರಿಂದ ನೀವೀಗ ಮಾನಸಿಕ ಹಾಗೂ ದೈಹಿಕ ಸಮತೋಲನವನ್ನು ಕಾಯ್ದುಕೊಳ್ಳುವ ಅಗತ್ಯವಿದೆ .ನಿಮ್ಮ ಜೀವನವೂ ನಿಧಾನವಾಗಿ ಪ್ರಗತಿಯ ಹಾದಿಗೆ ಬರುತ್ತಿದೆ . ದೈವ ದೇವರ ಮೇಲಿನ ನಂಬಿಕೆ ಅತೀ ಮುಖ್ಯವಾಗಿದೆ ಮಂಗಳಕಾರ್ಯಗಳಿಗೆ ಆಗಾಗ ಅಡೆ ತಡೆ ತೋರಿಬಂದರೂ ಪ್ರಯತ್ನ ಶೀಲತೆ ಉತ್ತಮ ಫಲ ಕೊಡಲಿದೆ .ಪ್ರಯಾಣ ,ಸಂಚಾರ ಸಧ್ಯಕ್ಕೆ ಬೇಡ .ಆತ್ಮೀಯರ ಸಹಕಾರ ನಿಮಗೆ ಸರಿಯಾದ ಕಾಲಕ್ಕೆ ಒದಗಿ ಬರಲಿದೆ . ಕುಜ ಸುಖ ಸ್ಥಾನದಲ್ಲಿ ಇರುವುದರಿಂದ ತಾಯಿಯವರ ಆರೋಗ್ಯದ ಬಗ್ಗೆ ಎಚ್ಚರದಿಂದಿರಿ . ವಿಷ್ಣು ಸಹಸ್ರನಾಮ ಪಾರಾಯಣ ಅತೀ ಅಗತ್ಯವಾಗಿದೆ .
ನಿಮ್ಮ ಪೂರ್ಣ ಪ್ರಮಾಣದ ಕಂಪ್ಯೂಟರ್ ಜಾತಕವನ್ನು ಮಾಡಿಕೊಡಲಾಗುವುದು .ಜಾತಕವಿಲ್ಲದವರಿಗೆ ಕವಡೆ ಮೂಲಕ ಪ್ರಸ್ತುತ ವಿಷಯಗಳನ್ನು ತಿಳಿಸಲಾಗುವುದು .ನೀವು ನಡೆಸುವ ಶುಭ ಕೆಲಸಗಳಿಗೆ ಮುಹೂರ್ತವನ್ನು ತಿಳಿಸಲಾಗುವುದು .ವಿವಾಹ ಹೊಂದಾಣಿಕೆ/ವಾಸ್ತು ಸಲಹೆ ತಿಳಿಸಲಾಗುವುದು





































