ನವೆಂಬರ್ 26 : ಶಿರ್ಲಾಲು ಶ್ರೀ ಅನಂತನಾಥ ಸ್ವಾಮಿ ಬಸದಿ ಪುನರ್ನಿರ್ಮಾಣ ಶಿಲಾನ್ಯಾಸ
RB NEWS
Bureau Report
ನವೆಂಬರ್ 26 : ಶಿರ್ಲಾಲು ಶ್ರೀ ಅನಂತನಾಥ ಸ್ವಾಮಿ ಬಸದಿ ಪುನರ್ನಿರ್ಮಾಣ ಶಿಲಾನ್ಯಾಸ
ಕಾರ್ಕಳ : ಶಿರ್ಲಾಲು ಅತಿಶಯ ಶ್ರೀಕ್ಷೇತ್ರ ಭಗವಾನ್ ಶ್ರೀ ಅನಂತನಾಥ ಸ್ವಾಮಿ ಬಸದಿ – ಶ್ರೀ ಸಿದ್ಧಗಿರಿ ಕ್ಷೇತ್ರದ ಪುನರ್ನಿರ್ಮಾಣ ಶಿಲಾನ್ಯಾಸ ನವೆಂಬರ್ 26, ರಂದು ನಡೆಯಲಿದೆ ಎಂದು ಬಸದಿ ಆಡಳಿತ ಸಮಿತಿಯ ಅಧ್ಯಕ್ಷ ಡಾ. ಮಹಾವೀರ್ ಜೈನ್ ಅವರು ಕಾರ್ಕಳ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಬುಧವಾರ ಬೆಳಿಗ್ಗೆ 10.40 ರಿಂದ 10.50ರ ಮಕರ ಲಗ್ನ ಸುಮುಹೂರ್ತದಲ್ಲಿ ಭಗವಾನ್ ಶ್ರೀ ಅನಂತನಾಥ ಸ್ವಾಮಿ ಹಾಗೂ ಮಹಾಮಾತೆ ಪದ್ಮಾವತಿ ಅಮ್ಮನವರ ಬಸದಿಯ ಪುನರ್ನಿರ್ಮಾಣ ಶಿಲಾನ್ಯಾಸ ಕಾರ್ಯಕ್ರಮ ವಿಧಿವತ್ತಾಗಿ ನೆರವೇರಲಿದೆ. ಈ ಸಂದರ್ಭದಲ್ಲಿ ಪರಮಪೂಜ್ಯ ರಾಜಗುರು ಧ್ಯಾನಯೋಗಿ ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳು ಕಾರ್ಕಳ ಜೈನ ಮಠದಿಂದ ಪಾವನ ಸಾನ್ನಿಧ್ಯ ವಹಿಸಲಿದ್ದಾರೆ. ಪರಮಪೂಜ್ಯ ಸ್ವಸ್ತಿಶ್ರೀ ಸಿದ್ಧಾಂತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳು ಆರತಿಪುರ ಜೈನ ಮಠದಿಂದ ದಿವ್ಯ ಉಪಸ್ಥಿತಿ ಮತ್ತು ಮಾರ್ಗದರ್ಶನ ನೀಡಲಿದ್ದಾರೆ.
ಕಾರ್ಯಕ್ರಮದಲ್ಲಿ ಪದ್ಮವಿಭೂಷಣ ಪೂಜ್ಯ ರಾಜರ್ಷಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರು ಅಧ್ಯಕ್ಷತೆ ವಹಿಸಿ ನಿಧಿಕಲಶ ಸ್ಥಾಪನೆ ನೆರವೇರಿಸಲಿದ್ದಾರೆ. ಅತ್ಯಂತ ಪುರಾತನವಾದ ಈ ಬಸದಿ 1947ರಲ್ಲಿ ಬ್ರಹ್ಮ ಕಲಶ ಗೊಂಡಿದ್ದರೆ ಈಗ ಸಂಪೂರ್ಣ ಶಲಾಮಯವಾಗಲಿದೆ ಕರ್ನಾಟಕ ಸರ್ಕಾರದ ಅಲ್ಪಸಂಖ್ಯಾತ ನಿಧಿಯಿಂದ ಸುಮಾರು 50 ಲಕ್ಷ ರೂ. ಅನುದಾನ ಬಿಡುಗಡೆ ಗೊಂಡಿದ್ದು ಈ ಜಿನಮಂದಿರವನ್ನು ಜೊಧಪುರದ ಕಲ್ಲಿನ ಕಂಬಗಳಿಂದ ನಿರ್ಮಿಸಲು ಯೋಜನೆ ಮಾಡಲಾಗಿದ್ದು, ಗರ್ಭಗುಡಿಯನ್ನು ಕಾರ್ಕಳದ ಕಲ್ಲಿನಿಂದ ನಿರ್ಮಿಸಲಾಗುತ್ತಿದೆ ಒಟ್ಟು ಸುಮಾರು 2.5 ಕೋಟಿ ರೂ. ವೆಚ್ಚ ನಿರೀಕ್ಷಿಸಲಾಗಿದೆ.
ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಎಸ್ ಸಿ ಡಿ ಸಿ ಸಿ ಬ್ಯಾಂಕ್ ಅಧ್ಯಕ್ಷ ಡಾ. ಎಂ. ಎನ್. ರಾಜೇಂದ್ರ ಕುಮಾರ್, ಮಾಜಿ ಸಚಿವ ಕೆ. ಅಭಯಚಂದ್ರ ಜೈನ್, ನಾಭಿರಾಜ್ ಜೈನ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಜೈನ ಸಮುದಾಯದ ಪ್ರಮುಖರಾದ ಹಿರಿಯರಾದ ಎಸ್. ಅನಂತ ರಾಜ್ ಪೂವಣಿ , ಜೀರ್ಣದ್ದಾರ ಸಮಿತಿ ಉಪಾಧ್ಯಕ್ಷ ಸುಧರ್ನನ್ ಅತಿಕಾರಿ, ಹಿರಿಯ ವಕೀಲರಾದ ಸನತ್ ಕುಮಾರ್ ಜೈನ್ ಉಪಸ್ಥಿತರಿದ್ದರು.