ನಮನ ಸೌಹಾರ್ದ ಸಹಕಾರಿ ಸಂಘದ ಪ್ರಥಮ ಸಾಮಾನ್ಯ ಸಭೆ
ಮೂಡುಬಿದಿರೆ : ನಮನ ಸೌಹಾರ್ದ ಸಹಕಾರಿ ಸಂಘ ಇದರ ಪ್ರಥಮ ಸಾಮಾನ್ಯ ಸಭೆ ಸಮಾಜಮಂದಿರ ಸಭಾಂಗಣದಲ್ಲಿ ಬೊಕ್ಕಸ ಚಂದ್ರ ಶೇಖರ್ ರಾವ್ ಅವರ ಅಧ್ಯಕ್ಷತೆಯಲ್ಲಿ ಜರುಗಿತು.
ನಿರ್ದೇಶಕ ಏರ್ಪಲೆ ಸುಬ್ರಹ್ಮಣ್ಯ ಭಟ್ ಪ್ರಾರ್ಥನೆಗೈದರು.
ಸಂಸ್ಥೆಯ ಮುಖ್ಯ ಪ್ರವರ್ತಕ, ಉಪಾಧ್ಯಕ್ಷ ಎಂ ದೇವಾನಂದ ಭಟ್ ಬೆಳ್ವಾಯಿ ಪ್ರಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು.
ಅಧ್ಯಕ್ಷತೆ ವಹಿಸಿದ ಬೊಕ್ಕಸ ಚಂದ್ರ ಶೇಖರ್ ರಾವ್ ಮಾತನಾಡಿ, ಒಂದು ವರುಷದಲ್ಲಿ 7 ಕೋಟಿ ವ್ಯವಹಾರ ನಡೆಸಿ “ಎ” ತರಗತಿಯ ಸಂಸ್ಥೆ ಎಂಬ ಹೆಸರು ಗಳಿಸಿದೆ. ಪೂರ್ಣ ಪ್ರಮಾಣದಲ್ಲಿ ಸಾಲ ಮರುಪಾವತಿಗೊಂಡಿದೆ. ಪ್ರಥಮ ವಾರ್ಷಿಕ 5ಲಕ್ಷ ಲಾಭ ಹೊಂದಿದ್ದು ಹೆಚ್ಚು ಆದಾಯ ಬಾರದೆ ಇದ್ದರು ಮುಂದಿನ ಸಾಲಿನಲ್ಲಿ 15ಕೋಟಿಯ ವ್ಯವಹಾರ ನಡೆಸಿ ಸಹಕಾರಿ ಸದಸ್ಯರಿಗೆ ಉತ್ತಮ ಡಿವಿಡೆಂಟ್ ಬರುವಂತೆ ಪ್ರಯತ್ನಿಸಲಾಗುವುದು ಎಂದರು.

ಸಂಘದ ಸಿಬ್ಬಂದಿ ಸುಕ್ಷಿತ್ ಜೈನ್ ಸಭೆಯ ನೋಟಿಸ್ ಓದಿ, ವಾರ್ಷಿಕ ವರದಿಯನ್ನು ಸಂಘದ ಕಾರ್ಯನಿರ್ವಾಹಣ ಅಧಿಕಾರಿ ಸೌಮ್ಯ ಶೆಟ್ಟಿ ವಾಚಿಸಿ ಸಭೆಯಲ್ಲಿ ಮಂಜೂರಾತಿ ಪಡೆದರು.
ಕಳೆದ ಸಾಲಿನ ಲೆಕ್ಕ ಪತ್ರ ವರದಿಯನ್ನು ನಿರ್ದೇಶಕ ರಾಘವೇಂದ್ರ ಹೆಬ್ಬಾರ್ ಮಂಡಿಸಿದ್ದರು. ವಿದ್ಯಾ ರಮೇಶ್ ಭಟ್.24-25ರ ಸಾಲಿನ ಬಜೆಟ್ ಮಂಡನೆ ಮಾಡಿದವರು.
ನಿರ್ದೇಶಕ ಕೇಶವ ರಾವ್ ಮುಂದಿನ ಸಾಲಿಗೆ ಸನದು ಲೆಕ್ಕ ಪರಿಶೋಧಕರ ನೇಮಕಾತಿ ವಿವರ ನೀಡಿ ಮಂಜರಾತಿ ಪಡೆದರು.
ಇನ್ನೋರ್ವ ನಿರ್ದೇಶಕ ವಸಂತ ಭಟ್ ಪಯ್ಯಾಡಿ ಅವರು ಸಹಕಾರಿ ಠೇವಣಿ ಮತ್ತು ಸಾಲ ನಿಯಮಾವಳಿ ಹಾಗೂ ಸಹಕಾರಿ ಸಿಬ್ಬಂದಿ ನೇಮಕಾತಿ ನಿಯಮಾವಳಿ ಓದಿ ಸಭೆಯಲ್ಲಿ ಮಂಜೂರಾತಿ ಪಡೆದರು.
ಗೌರವ ಸಲಹೆಗಾರ ಕೆ ಶ್ರೀಪತಿ ಭಟ್ ಸಂಸ್ಥೆಗೆ ಶುಭಾಶಯಗಳನ್ನು ಕೋರಿದರು.
ನಿರ್ದೇಶಕರು ಡಾ. ಸುಬ್ರಹ್ಮಣ್ಯ ಪದ್ಯಾಣ ಹಾಗೂ ಅಲಕಾ ಬಿ. ನಿರೂಪಿಸಿದರು.
ನಿರ್ದೇಶಕ ವಾಸುದೇವ ಭಟ್ ಮಾರ್ನಾಡ್ ಧನ್ಯವಾದ ನೀಡಿದರು.

































