ನಬಾರ್ಡ್ ಬ್ಯಾಂಕಿನಿಂದ ರೈತರಿಗೆ ಸೌಲಭ್ಯ
ಮೂಡುಬಿದಿರೆ: ನಬಾರ್ಡ್ ಪ್ರಾಯೋಜಿತ ರೈತ ಜನ್ಯ ಫಾರ್ಮರ್ ಪ್ರೊಡ್ಯೂಸರ್ ಕಂಪೆನಿಯ ಮೂಡುಬಿದಿರೆ ಶಾಖೆಯಲ್ಲಿ ಜುಲೈ 29ರಂದು ಗೋದಾಮು, ಇತ್ಯಾದಿಗಾಗಿ ರೈತ ಫಂಡ್ ಅಡಿಯಲ್ಲಿ ಸಿಗುವ ಸೌಲಭ್ಯಗಳ ಮಾಹಿತಿ ನೀಡಿದರು.
ಮೂಡುಬಿದಿರೆ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ದ ಸಹಾಯಕ ಮೆನೇಜರ್ ಜಿನ್ಸಿ ಮೋಹನ್ ದಾಸ್ ರವರು ರೈತರಿಗೆ ದೊರಕುವ ಸೌಲಭ್ಯಗಳನ್ನು ತಿಳಿಸಿದರು.
ಆ ಪ್ರಕಾರ ರೈತ ಸಾಲದ ಅಡಿಯಲ್ಲಿ ವಾಹನಗಳಿಗೆ ಸಾಲವು ಸಿಗಲಿದೆ. ಸರ್ಕಾರದಿಂದ ರೈತರಿಗೆ ದೊರಕುವ ಎಲ್ಲಾ ವಿಧದ ಸಹಾಯಧನವೂ ಬ್ಯಾಂಕ್ ಮೂಲಕವೇ ಸಿಗಲು ಸಾಧ್ಯ. ಆದರೆ ಬ್ಯಾಂಕ್ ನಿಂದ ಯಾವುದೇ ಸಬ್ಸಿಡಿ ಸಿಗುವುದಿಲ್ಲ ಎಂದರು. ರೈತ ಜನ್ಯ ಸಂಸ್ಥೆಯ ಸಂದೀಪ್ ರವರು ಆನ್ಲೈನ್ ಸೌಲಭ್ಯಗಳ ಮಾಹಿತಿ ನೀಡಿದರು.





































