ನನ್ನ ಮುಂದಿನ ರಾಜಕೀಯ ನಡೆಯನ್ನು ನಿರ್ಧರಿಸುವುದಾಗಿ ನಿರ್ಣಯಿಸಿದ್ದೇನೆ -ಕೆ.ಜಯಪ್ರಕಾಶ ಹೆಗ್ಡೆ

Picture of RB NEWS

RB NEWS

Bureau Report

ನಮಸ್ತೆ ,
ನನ್ನ ರಾಜಕೀಯ ಹಾಗೂ ಸಾಮಾಜಿಕ ಜೀವನದಲ್ಲಿ ನನಗೆ ಮಾರ್ಗದರ್ಶನ ಹಾಗೂ ಸದಾಕಾಲ ಬೆಂಬಲವನ್ನು ಕೊಡುತ್ತಾ ನನ್ನೊಡನೆ ಹೆಜ್ಜೆ ಹಾಕಿದ ನಿಮಗೆಲ್ಲ ನಾನು ಆಭಾರಿ.

ನಿಮ್ಮೆಲ್ಲರೊಡನೆ ಸಮಾಲೋಚಿಸಿ , ನನ್ನ ಮುಂದಿನ ಹೆಜ್ಜೆಯನ್ನು ನಿರ್ಧರಿಸಿದ್ದೇನೆ.
ಕರಾವಳಿಯ ಅಭಿವೃದ್ಧಿಯ ಗುರಿಸಾಧನೆಗಾಗಿ , ತಮ್ಮೆಲ್ಲರ ಸೇವೆಗಾಗಿ ರಾಜಕೀಯದಲ್ಲಿ ಮತ್ತೆ ಸಕ್ರೀಯನಾಗಲು ನಿರ್ಧರಿಸಿದ್ದೇನೆ.

ಅಂತೆಯೇ ನಾಳೆ (ಮಂಗಳವಾರ ) ಸಂಜೆ 4 ಗಂಟೆಗೆ ಬೆಂಗಳೂರಿನ ಕೆ ಪಿ ಸಿ ಸಿ ಕಚೇರಿಯಲ್ಲಿ ವಿದ್ಯುಕ್ತವಾಗಿ ಕಾಂಗ್ರೆಸ್ ಪಕ್ಷವನ್ನು ಸೇರಿ ನನ್ನ ಮುಂದಿನ ರಾಜಕೀಯ ನಡೆಯನ್ನು ನಿರ್ಧರಿಸುವುದಾಗಿ ನಿರ್ಣಯಿಸಿದ್ದೇನೆ.
ಎಂದಿಗೂ ನನ್ನೊಡನಿದ್ದು ಕೈಹಿಡಿದು ನಡೆಸಿದ ತಾವೆಲ್ಲ ಮಂಗಳವಾರ ( 12 ಮಾರ್ಚ್ ) ಸಂಜೆ 4 ಗಂಟೆಗೆ ಕಾಂಗ್ರೆಸ್ ಕಚೇರಿಯಲ್ಲಿ (ಕ್ವೀನ್ಸ್ ರೋಡ್ ) ನನ್ನೊಡನಿದ್ದು ಮಾರ್ಗದರ್ಶನ ಹಾಗೂ ಸಹಕಾರ ನೀಡುವಂತೆ ವಿನಂತಿ.

    “ಸೇವೆಯೇ ಪರಮೋಧರ್ಮ “

ನಿಮ್ಮ ಸೇವಾಕಾಂಕ್ಷಿ ,
ಕೆ.ಜಯಪ್ರಕಾಶ ಹೆಗ್ಡೆ

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top