ನಟಿ ಶ್ರುತಿಗೆ ಮಹಿಳಾ ಆಯೋಗ ನೋಟಿಸ್

Picture of RB NEWS

RB NEWS

Bureau Report

ಬೆಂಗಳೂರು : ಫ್ರೀ ಬಸ್ನಿಂದ ಹೆಣ್ಮಕ್ಕಳು ಎಲ್ಲೆಲ್ಲೋ ಹೋದ್ರು’ ಎಂದು ಹೇಳಿಕೆ ನೀಡಿರುವ ನಟಿ ಶ್ರುತಿಗೆ ಮಹಿಳಾ ಆಯೋಗ ನೋಟಿಸ್ ನೀಡಿದೆ. 

ಶ್ರುತಿ, ಇತ್ತೀಚೆಗೆ ಉಡುಪಿಯಲ್ಲಿ ಬಿಜೆಪಿ ಪರ ಚುನಾವಣಾ ಪ್ರಚಾರ ಮಾಡಿದ್ದರು. ಈ ವೇಳೆ ಅವರು, ಬಸ್ಸಿನ ಸೀಟಿಗೋಸ್ಕರ ಹೆಣ್ಮಕ್ಕಳು ಜುಟ್ಟು ಹಿಡಿದುಕೊಂಡು ಹೊಡೆದಾಡುವಂತೆ ಮಾಡಿದ್ದೀರಿ ನೀವು. ನನ್ನ ಹೆಂಡತಿ ಎಲ್ಲಿಗೆ ಹೋದಳೋ ಗೊತ್ತಿಲ್ಲ ಅಂತ ಎಷ್ಟೋ ಮನೆಯ ಗಂಡಸರು ಅಳುತ್ತಿದ್ದಾರೆ. ಎಷ್ಟೋ ಮನೆಯಲ್ಲಿ ಮಕ್ಕಳು ಉಪವಾಸ ಬಿದ್ದಿದ್ದಾರೆ. ಫ್ರೀ ಬಸ್ ಕೊಟ್ಟರು ಅಂದ ತಕ್ಷಣ ಹೆಣ್ಮಳ್ಳಲು ಎಲ್ಲೆಲ್ಲೋ ಹೋಗುತ್ತಿದ್ದಾರೆ. ತೀರ್ಥಯಾತ್ರೆಗೆ ಹೋಗಬೇಕು ಎಂಬ ನೆಪದಲ್ಲಿ ಎಲ್ಲಿಗೆ ಹೋಗಬೇಕು ಎಂಬುದು ಕೂಡ ಗೊತ್ತಿಲ್ಲ. ಗೊತ್ತು-ಗುರಿ ಇಲ್ಲದಂತೆ ಮಾಡಿದ್ದಾರೆ’ ಎಂದು ರಾಜ್ಯ ಸರ್ಕಾರದ ಮಹಿಳಾಪರ ಯೋಜನೆಗಳನ್ನು ಟೀಕಿಸಿದ್ದರು.

ಶ್ರುತಿ ನೀಡಿದ್ದ ಹೇಳಿಕೆಯನ್ನು ವಿರೋಧಿಸಿ ಮಹಿಳಾ ಆಯೋಗಕ್ಕೆ ದೂರು ಬಂದ ಹಿನ್ನೆಲೆಯಲ್ಲಿ ಇದೀಗ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಅವರು ಶ್ರುತಿಗೆ ನೋಟಿಸ್ ನೀಡಿದ್ದಾರೆ. ಈ ನೋಟಿಸ್ ನಲ್ಲಿ ಅವರ ಹೇಳಿಕೆಯ ಕುರಿತು ಸ್ಪಷ್ಟನೆ ನೀಡುವಂತೆ ಸೂಚನೆ ನೀಡಲಾಗಿದೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top