ನಕ್ಸಲ್ ಪೀಡಿತ ಪ್ರದೇಶದಲ್ಲಿ ಕಡವೆ ಭೇಟೆ: ತಲೆಮರೆಸಿಕೊಂಡ ಆರೋಪಿಗಳಿಬ್ಬರಿಗಾಗಿ ಶೋಧ ಕಾರ್ಯಾಚರಣೆ

Picture of RB NEWS

RB NEWS

Bureau Report

ಕಾರ್ಕಳ: ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಒಂದಾಗಿರುವ ಬೆಳ್ತಂಗಡಿ ತಾಲೂಕು ಕುತ್ಲೂರು ಗ್ರಾಮದ ಹೌತೊಟ್ಟು ಎಂಬಲ್ಲಿ ಕಡವೆ ಜಾತಿಯ ವನ್ಯ ಪ್ರಾಣಿಯನ್ನು ಭೇಟೆಯಾಡಿ, ಮಾಂಸ ತಯಾರಿಸಿ ದಾಸ್ತಾನು ಇರಿಸಿದ ಪ್ರಕರಣವನ್ನು ಪತ್ತೆ ಹಚ್ಚಲಾಗಿದೆ. ಮಂಗಳೂರು ಅರಣ್ಯ ಸಂಚಾರಿದಳಕ್ಕೆ ಬಂದಿದ್ದ ಖಚಿತ ಮಾಹಿತಿಯನ್ವಯ ಕಾರ್ಯಚರಣೆ ನಡೆದಿದೆ. ವೇಣೂರು ಅರಣ್ಯಧಿಕಾರಿ ಸುಬ್ರಹ್ಮಣ್ಯ ಆಚಾರ್ ನೇತೃತ್ವದಲ್ಲಿ ಅರಣ್ಯ ಸಿಬ್ಬಂದಿಗಳು ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದು, ಆರೋಪಿಗಳಿಬ್ಬರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸಂದೇಶ್ ಪೂಜಾರಿ(೪೯), ರಾಧಾಕೃಷ್ಣ(೪೭) ಪ್ರಕರಣದ ಆರೋಪಿಗಳಾಗಿದ್ದು, ತಲೆಮರೆಸಿಕೊಂಡಿದ್ದಾರೆ.

ಅದೇ ಗ್ರಾಮದ ಸ್ವಸ್ತ್ತಿಕ್ ನಿಲಯದ ರಾಧಾಕೃಷ್ಣ ಪೂಜಾರಿ ಎಂಬವರ ಮನೆಗೆ ಇದೇ ಸಂದರ್ಭದಲ್ಲಿ ಮಂಗಳೂರು ಅರಣ್ಯ ಸಂಚಾರಿದಳ, ವೇಣೂರು ಅರಣ್ಯಧಿಕಾರಿ ಸುಬ್ರಹ್ಮಣ್ಯ ಆಚಾರ್ ನೇತೃತ್ವದಲ್ಲಿ ಅರಣ್ಯ ಸಿಬ್ಬಂದಿಯರು ದಾಳಿ ನಡೆಸಿದ್ದಾರೆ.
ಕಡವೆ ಜಾತಿಯ ವನ್ಯಪ್ರಾಣಿಯನ್ನು ಭೇಟಿಯಾಡಿ ಮಾಂಸವನ್ನು ತಯಾರಿಸಿ ಬಳಿಕ ಬೇಯಿಸಿ ಆಹಾರ ಪದಾರ್ಥವನ್ನಾಗಿ ಮಾಡಿದ ಪ್ರಕರಣವನ್ನು ಪತ್ತೆ ಹಚ್ಚಲಾಗಿದೆ.
ಕುಕ್ಕರ್‌ನಲ್ಲಿ ಬೇಯಿಸಿಟ್ಟ ೪.೫ ಕೆ.ಜಿ ಕಡವೆ ಜಾತಿಯ ವನ್ಯಪ್ರಾಣಿಯ ಮಾಂಸ ಅದಾಗಿರುತ್ತದೆ ಎಂದು ತಿಳಿದುಬಂದಿದೆ.

ರಾಧಾಕೃಷ್ಣ ಪುಜಾರಿಯ ಸ್ನೇಹಿತನಾಗಿರುವ ಸಂದೇಶ್ ಪುಜಾರಿ ಕಡವೆ ಜಾತಿಯ ವನ್ಯ ಪ್ರಾಣಿಯನ್ನು ಭೇಟೆಯಾಡಿ ಅದರ ಮಾಂಸವನ್ನು ತಯಾರಿಸಿ ಅದನ್ನು ರಾಧಾಕೃಷ್ಣನಿಗೆ ನೀಡಿದನೆಂಬ ಅಂಶ ತನಿಖೆಯಿಂದ ಬಯಲಾಗಿದೆ. ಆರೋಪಿಗಳಿಬ್ಬರು ಸ್ಥಳದಿಂದ ಪರಾರಿಯಾಗಿದ್ದು, ಮನೆಮಂದಿಯ ಹೇಳಿಕೆಯನ್ನು ಆಧರಿಸಿ ಅರಣ್ಯ ಇಲಾಖಾಧಿಕಾರಿಗಳು ಈ ಬಗ್ಗೆ ವನ್ಯಜೀವಿ ಕಾಯ್ದೆಯನ್ವಯ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಡವೆ ಜಾತಿಯ ವನ್ಯಪ್ರಾಣಿಯ ಮಾಂಸ ಹಾಗೂ ಪೂರಕವಾದ ಪರಿಕರಗಳನ್ನು ವಶಪಡಿಸಲಾಗಿದೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top