ನಕ್ಸಲ್ ಕರಿಛಾಯೆ: ಕೂಡ್ಲು ಫಾಲ್ಸ್ ಪ್ರದೇಶದಲ್ಲಿ ತಾತ್ಕಾಲಿಕ ನಿರ್ಬಂಧ

Picture of RB NEWS

RB NEWS

Bureau Report

ಹೆಬ್ರಿ: ಹೆಬ್ರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಕ್ಸಲ್ ಎನ್‌ಕೌಂಟ‌ರ್ ನಡೆದ ಹಿನ್ನೆಲೆಯಲ್ಲಿ ಮುಂಜಾಗೃತ ಕ್ರಮವಾಗಿ ಪ್ರವಾಸಿ ತಾಣವಾದ ಕೂಡ್ಲು ಫಾಲ್ಸ್ ಪ್ರವೇಶವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಿ ಅರಣ್ಯ ಇಲಾಖೆ ಆದೇಶ ಹೊರಡಿಸಿದೆ.

ಕೂಡ್ಲು ಫಾಲ್ಸ್ ಇರುವ ಪ್ರದೇಶದಲ್ಲೇ ನಕ್ಸಲ್‌ ಚಟುವಟಿಕೆ ಮತ್ತೇ ಬಿರುಸುಗೊಂಡಿರುವುದು ಹಾಗೂ ನಕ್ಸಲ್ ನಿಗ್ರಹ ಪಡೆಯ ಪೊಲೀಸರಿಂದ ಹತನಾದ ನಕ್ಸಲ್ ನಾಯಕ ವಿಕ್ರಂ ಗೌಡನ ಮನೆ ಕೂಡ ಕೂಡ್ಲು ಫಾಲ್ಸ್ ಸಮೀಪದಲ್ಲೇ ಇದೆ.

ಮುಂದಿನ ಒಂದು ವಾರ ಕೂಡ್ಲು ಫಾಲ್ಸ್ ಪ್ರದೇಶದಲ್ಲಿ‌ ಪ್ರವೇಶಕ್ಕೆ ಪ್ರವಾಸಿಗರಿಗೆ ಅವಕಾಶ ಇರುವುದಿಲ್ಲ ಎಂದು ಸೋಮೇಶ್ವರ ವನ್ಯಜೀವಿ ವಿಭಾಗದ ಡಿಸಿಎಫ್ ಶಿವರಾಂ ಬಾಬು ತಿಳಿಸಿದ್ದಾರೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top