ನಕಲಿ ಚಿನ್ನ ಅಡವಿಟ್ಟು ಸಾಲ ಪಡೆದಿದ್ದ ಅನೈತಿಕ ದಂಧೆಯ ರೂವಾರಿ ಭರತ್ ಜೈನ್ ನಾರಾವಿ
ಕಾರ್ಕಳ: ಸಾಣೂರು ಮನೆಯೊಂದನ್ನು ಅನೈತಿಕ ದಂಧೆಯನ್ನಾಗಿ ಮಾಡಿ ಅಮಾಯಕರ ಜೀವದೊಂದಿಗೆ ಚೆಲ್ಲಾಟವಾಡುತ್ತಿದ್ದ ನಾರಾವಿಯ ಭರತ್ ಜೈನ್ ಇನ್ನೂ ಕೆಲವೊಂದು ಕ್ರಿಮಿನಲ್ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದು, ಆತನ ವಿರುದ್ಧ ನಕಲಿ ಚಿನ್ನ ಅಡವಿಟ್ಟು ಫೈನಾಸ್ಸ್ವೊಂದಕ್ಕೆ ವಂಚಿಸಿರುವ ಕುರಿತು ಕಾರ್ಕಳ ನಗರ ಠಾಣೆಯಲ್ಲಿ ಕೇಸುದಾಖಲಾಗಿತ್ತು.
೨೦೧೧ ಮಾರ್ಚ್ ೩೧ ರಂದು ಈ ಕುರಿತು ಕಾರ್ಕಳ ನಗರ ಠಾಣೆಯ ಪೊಲೀಸರು ಆರೋಪಿಗಳಿಬ್ಬರನ್ನು ಬಂಧಿಸಿದ್ದರು.
ಫೈನಾಸ್ನಲ್ಲಿ ನಕಲಿ ಚಿನ್ನದ ಉಂಗುರವನ್ನು ಅಡವಿಟ್ಟು ಸಾಲ ಪಡೆದು ವಂಚಿಸಿದ ಪ್ರಕರಣಕ್ಕೆ ಸಂಬAಧಿಸಿದAತೆ ಇಬ್ಬರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿತ್ತು.
ಬೆಳ್ತಂಗಡಿ ತಾಲೂಕಿನ ನಾರಾವಿ ನಿವಾಸಿ ಭರತ್ ಕುಮಾರ್ ಜೈನ್ (೩೭) ಬಂಟ್ವಾಳ ತಾಲೂಕಿನ ಮಂಗಲ ಪದವು ಕೈಯಂತಿಲ ನಿವಾಸಿ ವಾದಿರಾಜ ಆಚಾರ್ಯ (೪೫) ಬಂಧಿತ ಆರೋಪಿಗಳಾಗಿದ್ದರು. ಆರೋಪಿಗಳಿಂದ ೪ ನಕಲಿ ಚಿನ್ನದ ಉಂಗುರ, ೧ ಕಾರು ಹಾಗೂ ೩ ಸಾವಿರ ರೂ. ನಗದನ್ನು ವಶಪಡಿಸಿಕೊಳ್ಳಲಾಗಿದೆ.
ಘಟನೆಯ ವಿವರ :
ಆರೋಪಿ ಭರತ್ ಕುಮಾರ್ ಜೈನ್ ಕಳೆದ ಸೆಪ್ಟಂಬರ್ ತಿಂಗಳಿನಲ್ಲಿ ಕಾರ್ಕಳ ಫೈನಾನ್ಸ್ನಲ್ಲಿ ನಕಲಿ ಎರಡು ಚಿನ್ನದ ಉಂಗುರವನ್ನು ಅಡವಿಟ್ಟು ೪೦ ಸಾವಿರ ರೂ. ಸಾಲ ಪಡೆದುಕೊಂಡಿದ್ದ. ಬ್ಯಾಂಕ್ನಲ್ಲಿ ಲೆಕ್ಕ ಪರಿಶೋಧನೆಯ ಸಂದರ್ಭ ಆ ಚಿನ್ನ ನಕಲಿ ಎಂಬುವುದಾಗಿ ಬೆಳಕಿಗೆ ಬಂತು. ಬಳಿಕ ನಗರ ಠಾಣೆಯಲ್ಲಿ ಈ ಕುರಿತಂತೆ ಪ್ರಕರಣ ದಾಖಲಾಗಿದ್ದು, ಆರೋಪಿ ಭರತ್ ಕುಮಾರ್ ಜೈನ್ ಎಂಬಾತನನ್ನು ಬಂಧಿಸಿದ್ದರು. ಆತನಿಗೆ ನಕಲಿ ಚಿನ್ನದ ಉಂಗುರವನ್ನು ತಯಾರಿಸಿ ಆತನಿಗೆ ಬಂಟ್ವಾಳದ ವಾದಿರಾಜ ಆಚಾರ್ಯ ನೀಡಿದ್ದನೆಂಬ ಮಹತ್ವದ ವಿಚಾರ ಬೆಳಕಿಗೆ ಬಂದಿತ್ತು.


ಕಬ್ಬಿಣದ ರಿಂಗ್ಗೆ ಚಿನ್ನದ ಲೇಪ
ಆರೋಪಿ ವಾದಿರಾಜ ಆಚಾರ್ಯ ಕಬ್ಬಿಣದ ಉಂಗುರಕ್ಕೆ ಚಿನ್ನದ ಲೇಪವನ್ನು ಮಾಡಿ ಭರತ್ ಕುಮಾರ್ ಜೈನ್ಗೆ ನೀಡುತ್ತಿದ್ದ. ಪ್ರತಿಯಾಗಿ ಪ್ರತಿ ಉಂಗುರಕ್ಕೂ ಭರತ್ ಕುಮಾರ್ ಜೈನ್ ೬ ಸಾವಿರ ರೂ. ಪಾವತಿಸುತ್ತಿದ್ದ ಎನ್ನಲಾಗಿದೆ. ಅದು ಚಿನ್ನದ ಉಂಗುರದAತೆ ಭಾರವಿದ್ದು, ಅದರ ಸುತ್ತ ಚಿನ್ನದ ತಗಡಿನ ಹೊದಿಕೆಯನ್ನು ಅಳವಡಿಸಲಾಗಿತ್ತು. ಮೇಲ್ನೋಟಕ್ಕೆ ಚಿನ್ನದಂತೆ ಕಾಣುತ್ತ್ತಿದ್ದು, ಪರೀಕ್ಷೆಗೊಳಪಡಿಸಿದಾಗ ಚಿನ್ನದ ಲಕ್ಷಣಗಳು ಕಂಡು ಬಂದಿರುವುದು ಬ್ಯಾಂಕ್ ಸಿಬ್ಬಂದಿಗಳನ್ನು ನಂಬಿಸಿತ್ತು. ಆರೋಪಿ ಭರತ್ ಕುಮಾರ್ ಜೈನ್ ೧೬ ಗ್ರಾಂ ಮತ್ತು ೯ ಗ್ರಾಂನ ಚಿನ್ನದ ನಕಲಿ ಉಗುರವನ್ನು ಅಡವಿಟ್ಟು ಸಾಲ ಪಡೆದಿದ್ದ. ಇನ್ನೆರಡು ಉಂಗುರವನ್ನು ಕೈಯಲ್ಲಿ ಹಿಡಿದುಕೊಂಡು ಇನ್ನಾವುದೋ ಬ್ಯಾಂಕಿಗೆ ವಂಚಿಸಲು ಪ್ರಯತ್ನ ನಡೆಸುತ್ತಿದ್ದ. ಆರೋಪಿ ವಿರುದ್ದ ಈ ಹಿಂದೆ ಬೆಳ್ತಂಗಡಿ, ಮೂಡಬಿದಿರೆ, ವೇಣೂರು ಮತ್ತು ಕಾರ್ಕಳ ಠಾಣೆಯಲ್ಲಿ ವಂಚನೆಯ ಪ್ರಕರಣಗಳು ದಾಖಲಾಗಿತ್ತು.





















