ನಂಬಿಕೆ ಹಾಗೂ ನಡವಳಿಕೆಯಲ್ಲಿ ಹೆಣ್ಣಿಗೆ ದೈವತ್ವದ ಸ್ಥಾನಮಾನ: ವರಲಕ್ಷ್ಮೀ ಹಬ್ಬದಂದು ಡಾ. ಪ್ರಿಯಾಂಕ ಮಹೇಶ್ ಗೆ ಸನ್ಮಾನ

Picture of RB NEWS

RB NEWS

Bureau Report

ಕಾರ್ಕಳ : ಭಾರತೀಯ ಸಂಸ್ಕೃತಿಯ ಲ್ಲಿ ಸ್ತ್ರೀಗೆ ಗೌರವಿತ ಸ್ಥಾನಮಾನವಿದೆ. ಪ್ರಕೃತಿಯನ್ನು ಸ್ತ್ರೀ ಗೆ ತುಲನೆ ಮಾಡಲಾಗಿದೆ. ಅಸಂಖ್ಯಾತ ಜೀವ ಸಂಕುಲತೆಗೆ ಸ್ತ್ರೀ ಆಶಯಧಾತೆ. ಮನೆ ಹಾಗೂ ದೇಶವನ್ನು ಮುನ್ನೆಡೆಸುವ ಚಾಕಚಕ್ಯತೆ ಹೆಣ್ಣಿಗೆ ಇದೆ. ಎಲ್ಲ ಕ್ಷೇತ್ರಗಳಲ್ಲಿ ತನ್ನ ಸಾಧನೆಗಳಿಂದಾಗಿ ಹೆಣ್ಣು ಸಮಾಜದ ಕಣ್ಣಾಗಿ ಮುನ್ನಲೆ ಬರುತ್ತಿದ್ದಾರೆ. ನಂಬಿಕೆ ಹಾಗೂ ನಡವಳಿಕೆಯಲ್ಲಿ ಅವರಿಗೆ ದೈವತ್ವದ ನೆಲೆ ನೀಡಲಾಗಿದೆ ಎಂದು ರಾಜಕ್ಷತ್ರಿಯ ಸಮಾಜದ ಕಾರ್ಕಳ ತಾಲೂಕು ಅಧ್ಯಕ್ಷ ಗುರುಪ್ರಸಾದ್ ರಾವ್ಅಜೆಕಾರು ಅಭಿಮತ ವ್ಯಕ್ತಪಡಿಸಿದರು.

ಕಾರ್ಕಳದ ಬಂಡೀಮಠದ ಶ್ರೀರಾಮ ಸಭಾ ಭವನದಲ್ಲಿ
ಕಾರ್ಕಳ ರಾಮಕ್ಷತ್ರಿಯ ಸಮಾಜದಿಂದ ಶ್ರೀ ವರ ಮಹಾಲಕ್ಷ್ಮಿ ವ್ರತಾಚರಣೆ ಹಾಗೂ ಡಾಕ್ಟರೇಟ್ ಪದವೀಧರೆ ಡಾ. ಪ್ರಿಯಾಂಕ ಮಹೇಶ್ ಗೆ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷ ಸ್ಥಾನ ವಹಿಸಿ ಮಾತನಾಡಿದರು.

ಪುರೋಹಿತರಾದ ಪವನ್ ಭಟ್ ಅಜೆಕಾರ್ ಮತ್ತು ಸುಬ್ರಮಣ್ಯ ಭಟ್ ನಂದಳಿಕೆರವರ ಪೌರೋಹಿತ್ಯದಲ್ಲಿ
ಶ್ರೀ ವರ ಮಹಾಲಕ್ಷ್ಮಿ ಧಾರ್ಮಿಕ ವ್ರತಾಚರಣೆಯ ಸಂಕಲ್ಪ, ವಿಧಿ ವಿಧಾನಗಳನ್ನು ಕಾರ್ಕಳ ದುರ್ಗಾದ ರತ್ನಾಕರ್ ಮತ್ತು ಸಾವಿತ್ರಿ ದಂಪತಿಗಳ ಮುಖೇನ ನೆರವೇರಿಸಲಾಯಿತು.

ವ್ರತಾಚರಣೆಯಲ್ಲಿ  ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಪಾಲ್ಗೊಂಡಿದ್ದರು.

ಮಹಾಪೂಜೆ, ಪ್ರಸಾದ ವಿತರಣೆಯ ನಂತರ ನಡೆದ ಧಾರ್ಮಿಕ ಸಭೆಯಲ್ಲಿ 2024ನೇ ಸಾಲಿನಲ್ಲಿ ಮಣಿಪಾಲದ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ನಿಂದ  ಸಿಂಥೆಸಿಸ್ ಆಫ್ ನ್ಯೂ ಚಾಲ್ಕೋನ್ ಡಿರೈವೇಟಿವ್ಸ್; ಪೋಟೋ ಫಿಸಿಕಲ್ ಮತ್ತು ಅಯಾನ್ ಸೆನ್ಸಿಂಗ್ ಸ್ಟಡೀಸ್ ಎಂಬ  ರಸಾಯನ ಶಾಸ್ತ್ರ ವಿಷಯದಲ್ಲಿ  ಪಿ.ಎಚ್ ಡಿ (ಡಾಕ್ಟರೇಟ್)ಪದವಿ ಪಡೆದ ಕಾರ್ಕಳ ಶಿರ್ಲಾಲುವಿನ ಪ್ರಸ್ತುತ ಹೆಬ್ರಿಯ ಅಮೃತ ಭಾರತಿ ಕಾಲೇಜಿನ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿರುವ ಡಾ. ಪ್ರಿಯಾಂಕ ಮಹೇಶ್ ಅವರನ್ನು ಸಮಾರಂಭದ ಗಣ್ಯರಿಂದ ಗೌರವಿಸಿ ಸನ್ಮಾನಿಸಲಾಯಿತು.

ಸಮಾಜದ ಹಿರಿಯರು, ಭೂಸೇನೆ ಮತ್ತು ಜೀವ ವಿಮಾ ನಿಗಮ ಕಾರ್ಕಳದ ಉದ್ಯೋಗಿಯಾಗಿ ನಿವೃತ್ತರಾಗಿದ್ದ ಮುಕುಂದ ಕೆ.ಪಿ., ಮತ್ತು ಆರ್.ಬಿ.ನ್ಯೂಸ್ ನ ವ್ಯವಸ್ಥಾಪಕ ಸಂಪಾದಕ ಜಗದೀಶ್ ಆರ್.ಬಿ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಗೌರವಾಧ್ಯಕ್ಷರಾದ ಪ್ರಸನ್ನ ಕೆ.ಬಿ ಉಪಾಧ್ಯಕ್ಷ ಆಂಬಾಪ್ರಸಾದ್.ಪಿ, ಮತ್ತು ಡಾ. ಪ್ರಿಯಾಂಕ ಮಹೇಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಅಧ್ಯಕ್ಷತೆ ವಹಿಸಿದ್ದ ಗುರುಪ್ರಸಾದ್ ರಾವ್ ಅಜೆಕಾರ್ ರವರು ಮಾತನಾಡಿ ರಾಮಕ್ಷತ್ರಿಯ ಸಮಾಜದ ಪ್ರತಿಭಾವಂತರನ್ನು ಹಾಗೂ ವಿವಿಧ ಕ್ಷೇತ್ರದ ಸಾಧಕರನ್ನು ಗುರುತಿಸಿ ಗೌರವಿಸಿ, ಸನ್ಮಾನಿಸಲು ಸಂತೋಷವೆನಿಸುತ್ತಿದೆ. ಈ ನಿಟ್ಟಿನಲ್ಲಿ ಸಮಾಜದ ಸರ್ವರ ಸಹಕಾರವಿರಲಿ ಎಂದು ಆಶಿಸಿ ಸಹಕರಿಸಿದ ಸರ್ವರಿಗೂ ಕೃತಜ್ಞತೆ ಸಲ್ಲಿಸಿದರು.

ನಿವೇದಿತಾ ಕಿಶೋರ್ ಕುಮಾರ್ ಸ್ವಾಗತಿಸಿದರು.

ಪ್ರಭಾ ಮೇಘನಾಥ ರಾವ್ ಅಭಿನಂದನಾ ಪತ್ರ ವಾಚಿಸಿದರು.

ಬಿ. ಮನಮೋಹನ ರಾವ್ ಅಭಿನಂದನಾ ನುಡಿಗಳನ್ನಾಡಿದರು.

ಶೋಭಾ ಅಂಬಾಪ್ರಸಾದ್ ವಂದಿಸಿದರು.
ಜಯಶ್ರೀ ಪ್ರಮೋದ್ ನಾಯಕ ಕಾರ್ಯಕ್ರಮ ನಿರೂಪಿಸಿದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top