



ಧಾರ್ಮಿಕ ಕೇಂದ್ರಗಗಳ ಸನ್ನಿಹದಲ್ಲಿ ಫ್ಲೆಕ್ಸ್ ಹಾಕುವ ಅನುಮತಿ ನೀಡುವ ಮುನ್ನ ಯೋಚಿಸಿ!
ಕಾರ್ಕಳ: ಧಾರ್ಮಿಕ ಕೇಂದ್ರಗಳ ಸನ್ನಿಹದಲ್ಲಿ ಪ್ಲಕ್ಸ್ ಹಾಕುವುದು ತರವಲ್ಲ. ಅನುಮತಿ ನೀಡುವ ಮುಂಚಿತವಾಗಿ ಪ್ಲೆಕ್ಸ್ನಲ್ಲಿ ಉಲ್ಲೇಖಿಸಿ ಅಂಶಗಳನ್ನು ಸೂಕ್ಷö್ಮವಾಗಿ ಗಮನಿಸಬೇಕು. ಆಯಾ ಧಾರ್ಮಿಕ ಕೇಂದ್ರಕ್ಕೆ ಸಂಬoಧ ಪ್ಲೆಕ್ಸ್ ಇದ್ದರೆ ಮಾತ್ರ ಒಳಿತೆಂದು ಪುರಸಭಾ ಸದಸ್ಯ ಸೋಮನಾಥ ನಾಯಕ್ ಪುರಸಭಾ ಸಾಮಾನ್ಯ ಸಭೆಯಲ್ಲಿ ವಿಚಾರ ಪ್ರಸ್ತಾಪಿಸಿದರು.

ಕಾರ್ಕಳ ಪುರಸಭಾ ಕಚೇರಿಯ ಮುಂಭಾಗದಲ್ಲಿ ಇರುವ ಕೋಟೆ ಶ್ರೀ ಮಾರಿಯಮ್ಮ ದೇವಸ್ಥಾನದ ಪಾರ್ಶ್ವದಲ್ಲಿ ಇತರ ಧರ್ಮ ಪ್ರಚಾರದ ಫ್ಲೆಕ್ಸ್ ಅಳವಡಿಸಿರುವ ಕುರಿತು ಮಾತನಾಡಿದ ಅವರು ಪ್ಲೆಕ್ಸ್ ಗಳು ಸಿಕ್ಕಪಟ್ಟು ಹೆಚ್ಚುತ್ತಿದ್ದು, ಸಿಕ್ಕಸಿಕ್ಕಲ್ಲಿ ಹಾಕುವುದರಿಂದ ಮತ್ತೊಮ್ಮೆ ದಂಗಲು ಗೆ ಅವಕಾಶ ನೀಡಿದಿರಿ ಎಂದು ಸಲಹೆ ನೀಡಿದರು.
ಪುರಸಭಾ ಅಧೀನದ ಕಟ್ಟಡಕ್ಕೂ ಪ್ಲೆಕ್ಸ್ ಬಾಧೆ!

ಕಾರ್ಕಳ ಬಸ್ ನಿಲ್ದಾಣದ ಸಮೀಪದಲ್ಲಿ ಕಾರ್ಕಳ ಪುರಸಭಾ ಅಧೀನದಲ್ಲಿ ಇರುವ ಕಟ್ಟಡ ಇದೆ. ಕಟ್ಟಡ ಮುಚ್ಚುವಂತೆ ಪ್ಲೆಕ್ಸ್ ಅಳವಡಿಸಲಾಗಿದೆ. ಖಾಸಗಿ ಉದ್ಯಮಕ್ಕೆ ಸಂಬoಧಿಸಿದ ಜಾಹೀರಾತು ಪ್ಲೆಕ್ಸ್ ಅದಾಗಿರುತ್ತದೆ.
ಇದೇ ಕಟ್ಟಡದಲ್ಲಿ ವ್ಯವಹಾರ ನಡೆಸದೇ ಇರುವ ವ್ಯಾಪಾರ ಮಳಿಗೆಗಳ ಜಾಹೀರಾತು ಪ್ಲೆಕ್ಸ್ ಗಳು ರಾರಾಜಿಸುತ್ತಿವೆ.
ಈ ತರದಲ್ಲಿ ಜಾಹೀರಾತು ಪ್ಲೆಕ್ಸ್ ಅಳವಡಿಸುವುದಕ್ಕೆ ಪುರಸಭಾ ಅನುಮತಿ ನೀಡಿತ್ತೇ ಎಂಬುವುದು ಒಂದೆಡೆಯಲ್ಲಿ ಅನುಮತಿಗೆ ಕಾರಣವಾಗಿದೆ.
2016ರ ಅಧಿನಿಯಮ ಪ್ರಕಾರ ಪ್ಲಾಸ್ಟಿಕ್ ಪ್ಲೆಕ್ಸ್ ಅಳವಡಿಸುವುದಕ್ಕೆ ಯಾವುದೇ ರೀತಿಯಲ್ಲಿ ಅವಕಾಶಗಳು ಇರುವುದಿಲ್ಲ. ಬಟ್ಟೆ ಫ್ಲೆಕ್ಸ್ ಅಳವಡಿಸುವುದಕ್ಕೆ ಮಾತ್ರ ಅವಕಾಶ ಇರುತ್ತದೆ. ಆದರೆ ಬಟ್ಟೆ ಫ್ಲೆಕ್ಸ್ ನೆಪದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಕಾಣಸಿಗುವುದು ಮಾತ್ರ ಪ್ಲಾಸ್ಟಿಕ್ ಫ್ಲಕ್ಸ್ ಎಂಬುವುದು ಗಮನಾರ್ಹ ವಿಚಾರವಾಗಿದೆ.
ಕಾನೂನುಬಾಹಿರ ಪ್ಲೆಕ್ಸ್ ತೆರೆವಿಗೆ ಸೂಚಿಸಿದ ಮುಖ್ಯಾಧಿಕಾರಿ
ಕಾನೂನು ಬಾಹಿರ, ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುವ ರೀತಿಯಲ್ಲಿ ಕಾಣಿಸಿಕೊಂಡ ಪ್ಲೆಕ್ಸ್ಗಳನ್ನು ಕೂಡಲೇ ತೆರವುಗೊಳಿಸುವಂತೆ ಸಂಬoಧ ಪಟ್ಟವರಿಗೆ ಕಾರ್ಕಳ ಪುರಸಭಾ ಮುಖ್ಯಾಧಿಕಾರಿ ರೂಪಾ ಶೆಟ್ಟಿ ಸೂಚನೆ ನೀಡಿದ್ದಾರೆ.































