





ದ.ಕ.ಜಿಲ್ಲೆಯಲ್ಲಿ ನರೇಗಾದಲ್ಲಿ ಮೂಡುಬಿದಿರೆ ತಾಲೂಕು ಪಂಚಾಯತ್ ಗುರಿ ಮೀರಿದ ಸಾಧನೆ
ವರದಿ ರಾಯಿ ರಾಜಕುಮಾರ ಮೂಡುಬಿದಿರೆ
ದ.ಕ.ಜಿಲ್ಲೆಯಲ್ಲಿ ಮೂಡುಬಿದಿರೆ ತಾಲೂಕು ಪಂಚಾಯತ್ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ ಗುರಿಮೀರಿದ ಸಾಧನೆಯನ್ನು ದಾಖಲಿಸಿದೆ. ನರೇಗಾ ಕಾಮಗಾರಿಯಲ್ಲಿ ಈ ಸಾಧನೆ ಮಾಡಲು ಮುಖ್ಯ ಕಾರಣ ಕಾಮಗಾರಿಯ ಚಿತ್ರವನ್ನು ಪ್ರತಿದಿನವೂ ತೆಗೆದು ಕಳುಹಿಸಬೇಕಿರುವುದು. ಮೂಡುಬಿದಿರೆ ತಾಲೂಕಿನ ಕೃಷಿಕರು ಖಾಸಗಿಯಾಗಿ ಎಲ್ಲ ಕೆಲಸವನ್ನು, ದಾಖಲೆಗಳನ್ನು ಕಳುಹಿಸಿದ ಕಾರಣ ಈ ಸಾಧನೆ ವಾಗಿದೆ ಎಂದು ಮೂಡುಬಿದರೆ ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ಕುಸುಮಾಧರ ಮಾಹಿತಿಯನ್ನು ನೀಡಿರುತ್ತಾರೆ.
ಮೂಡಬಿದರೆ ತಾಲೂಕು ಉದ್ಯೋಗ ಖಾತರಿ ಯೋಜನೆಯಡಿ ಜಿಲ್ಲೆಯಲ್ಲಿಯೇ ಮುಂಚೂಣಿ
ಮಹಾತ್ಮಾಗಾಂಧಿ ಉದ್ಯೋಗ ಖಾತರಿಯೋಜನೆಯಡಿಗುರಿಸಾಧನೆಯಲ್ಲಿಮೂಡಬಿದ್ರೆ ತಾಲೂಕು 2024 ರಲ್ಲಿ ಜಿಲ್ಲೆಯಲ್ಲಿ ಮೊದಲಸ್ಥಾನವನ್ನು ಅಲಂಕರಿಸಿದೆ.ತಾಲೂಕಿಗೆ ಸರಕಾರ ನೀಡಿದಮಾನವದಿನಗಳ ಗುರಿಯನ್ನು ಸಾಧಿಸುವನಿಟ್ಟಿನಲ್ಲಿ ದಾಪುಗಾಲು ಹಾಕುತ್ತಿದೆ.
ಮೊದಲ ಸ್ಥಾನಕ್ಕೆ ಜಿಗಿದ ಮೂಡಬಿದರೆ
ಜುಲಾಯಿತಿಂಗಳಿನಲ್ಲಿನರೇಗಾ ಯೋಜನೆಯಗುರಿ ತಲುಪುವಲ್ಲಿ ಮಂಗಳೂರು ತಾಲೂಕುಇತರೇ ತಾಲೂಕಿಗಿಂತಮುಂದಿತ್ತು ಆದರೆ ಆಗಸ್ಟ್ ತಿಂಗಳಿನಲ್ಲಿ ಮೂಡಬಿದರೆ ಅತ್ಯತ್ತಮ ಪ್ರದರ್ಶನ ನೀಡಿಮಂಗಳೂರನ್ನು ಹಿಂದಿಕ್ಕಿತು. ಅದರಲ್ಲೂಡಿಸಂಬರ್ಅಂತ್ಯಕ್ಕೆ ೧೨ಪಂಚಾಯತಿಗಳ ಪೈಕಿ 7 ಪಂಚಾಯತಿಗಳುಶೇನೂರುಸಾಧನೆ ಮಾಡಿರುತ್ತದೆ. ಹೀಗಾಗಿ ಮೂಡಬಿದರೆ ದ, ಕಜಿಲ್ಲೆಯಲ್ಲಿಯೇನಂಬರ್ವನ್ ಸ್ಥಾನ ಪಡೆಯಲುಸಾಧ್ಯವಾಗಿದೆ. ಮೂಡಬಿದರೆ ತಾಲೂಕು ಆಗಸ್ಟ್ 13 ರಿಂದವೇಗವನ್ನು ಪಡೆದುಕೊಂಡಿರುವುದುಕಂಡುಬರುತ್ತದೆ.
ಮಾನವ ದಿನಗಳ ಗುರಿ
ಮೂಡಬಿದರೆಗೆ 2024-25ರ ಸಾಲಿನಲ್ಲಿ 82408 ಮಾನವ ದಿನಗಳನ್ನು ಗುರಿ ನಿಗದಿಪಡಿಸಿದ್ದು, ಡಿಸಂಬರ್ ಅಂತ್ಯಕ್ಕೆ 59081 ಮಾನವ ಗುರಿಯನ್ನು ಸಾಧಿಸಲಾಗಿದೆ. ತಾಲೂಕಿನ ವಾರ್ಷಿಕ 71.69 % ಗುರಿಯನ್ನು ಸಾಧಿಸಲಾಗಿದ್ದು ಡಿಸಂಬರ್ ತಿಂಗಳಿನಲ್ಲಿ 89.30 ಗುರಿಯನ್ನು ಸಾಧಿಸಲಾಗಿದೆ.
ಗುರಿ ಸಾಧನೆಗೆ ಕಾರಣಗಳೇನು?
ಮೂಡಬಿದರೆ ತಾಲೂಕು ಕೃಷಿ ಆಧಾರಿತ ಜೀವನ ಕ್ರಮವನ್ನುಹೊಂದಿದೆ. ಸಣ್ಣ ಹಿಡುವಳಿದಾರರು ಮತ್ತು ಮಧ್ಯಮ ರೈತರು ಕೃಷಿಮತ್ತು ತೋಟಗಾರಿಕೆ ಬೆಳೆಯನ್ನು ಬೆಳೆಯುವ ಸಂಧರ್ಭದಲ್ಲಿ ಪಂಚಾಯತಿಯನ್ನು ಸಂಪರ್ಕಿಸುವ ರೈತರು ಸೂಕ್ತಮಾಹಿತಿಯನ್ನು ಪಡೆಯುತ್ತಾರೆ. ಪಂಚಾಯತಿಯ ಆಡಳಿತಮಂಡಳಿ ಮತ್ತು ಅಧಿಕಾರಿ ವರ್ಗದವರು ಸೂಕ್ತವಾಗಿಸ್ಪಂದಿಸುವುದರಿಂದ ಮತ್ತು ತಾಲೂಕು ಮಟ್ಟದ ಅಧಿಕಾರಿ ವರ್ಗದವರ ಪ್ರೋತ್ಸಾಹದಿಂದ ಗುರಿ ಸಾಧಿಸಲು ಸಫಲವಾಗಿದೆ.
ಮೂಡಬಿದರೆ ಗುರಿ ಸಾಧನೆಯ ಗುಟ್ಟು
2024 ಡಿಸಂಬರ್ ಅಂತ್ಯಕ್ಕೆ ಪಡುಮಾರ್ನಾಡು ಗ್ರಾಮಪಂಚಾಯತಿ 105.80%,ನೆಲ್ಲಿಕಾರು 103.40%, ಇರುವೈಲ್ 103.40%, ಬೆಳುವಾಯಿ103.32% ಪುತ್ತಿಗೆ 101.92%, ವಾಲ್ಪಾಡಿ 101.65 ಮತ್ತು ದರೆಗುಡ್ಡೆ 100.71%ಗುರಿ ಸಾಧಿಸಿದೆ. ತೋಟಗಾರಿಕೆ ಮತ್ತು ಕೃಷಿ ಸಂಬಂಧಿಸಿದ ಕಾಮಗಾರಿಗಳು, ಶಾಲಾಶೌಚಾಲಯ ರಚನೆ, ಶಾಲಾ ಆವರಣಗೋಡೆ ಮತ್ತು ಅಂಗನವಾಡಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ.






































