ದೌರ್ಜನ್ಯ ತಡೆ, ಮಹಿಳಾ ಸಬಲೀಕರಣ, ಅರಿವು

Picture of RB NEWS

RB NEWS

Bureau Report

ಮೂಡುಬಿದಿರೆ: ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರ, ಟೆಂಪಲ್ ಟೌನ್ ರೋಟರಿ ಕ್ಲಬ್, ಇನ್ನರ್ ವೀಲ್ ಕ್ಲಬ್ ಗಳ ಸಂಯುಕ್ತ ಆಶ್ರಯದಲ್ಲಿ ಮೂಡುಬಿದಿರೆ ಸಮಾಜ ಮಂದಿರದಲ್ಲಿ ಜರುಗಿತು.

ಕಾರ್ಯಕ್ರಮವನ್ನು ದೀಪ ಬೆಳಗಿ ಉದ್ಘಾಟಿಸಿದ ಬಿಂದಿಯ ಶರತ್ ಶೆಟ್ಟಿ ಹಾಗೂ ಪೂರ್ಣಚಂದ್ರ ಜೈನ್ ಮಾತನಾಡಿ ಮಹಿಳೆಯರಿಗೆ ಹಾಗೂ ಸಾಮಾಜಿಕವಾಗಿ ಅರಿವು ಮೂಡಿಸುವ ಯಾವುದೇ ಅರ್ಥಪೂರ್ಣ ಕಾರ್ಯಕ್ರಮಕ್ಕೆ ಸದಾ ಬೆಂಬಲ ಇದೆ ಎಂದು ಸಾರಿದರು.

ಮಂಗಳೂರು ಸರಕಾರಿ ಲೇಡಿಗೋಷನ್ ಆಸ್ಪತ್ರೆಯ ಸಚಿವನ್ ಸ್ಟಾಪ್ ಸೆಂಟರ್ ನ ಪ್ರಿಯಾ ರಾಜ ಮೋಹನ್ ಅವರು ದೌರ್ಜನ್ಯ ತಡೆ, ಮಹಿಳಾ ಸಬಲೀಕರಣ, ಅರಿವು ಕಾರ್ಯಕ್ರಮದ ಬಗ್ಗೆ ದೌರ್ಜನ್ಯ ಎಲ್ಲಿಂದ, ಯಾರಿಂದ, ಜಾಗೃತಿಯನ್ನು ಮೂಡಿಸಬೇಕು ಎಂಬ ಬಗ್ಗೆ ಸವಿಸ್ತಾರವಾಗಿ ವಿವರಣೆಯನ್ನು ನೀಡಿದರು.

ಶುಭ, ಸ್ವರ್ಣ ಲೇಖ ವೇದಿಕೆಯಲ್ಲಿ ಹಾಜರಿದ್ದರು.

ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಅಕ್ಷತಾ ನಾಯಕ್ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನಾಡಿದರು. ಹಿರಿಯ ಆರೋಗ್ಯ ಸಹಾಯಕಿ ಶಾಂತಮ್ಮ ನಿರೂಪಿಸಿದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top